ಮಂಗಳೂರು: ವಾರದಲ್ಲಿ ಎರಡು ದಿನ ಸಂಚರಿಸುವ ಸೂರತ್-ಮಂಗಳೂರು ಜಂಕ್ಷನ್-ಸೂರತ್ ವಿಶೇಷ ರೈಲನ್ನು ಖಾಯಂಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ಈ ಕುರಿತಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದು, ಮಂಗಳೂರು-ಸೂರತ್ ವಿಶೇಷ ರೈಲು ಇನ್ನುಮುಂದೆ ಖಾಯಂ ರೈಲು ಸೇವೆ ನೀಡಲಿದೆ. ಕರಾವಳಿ ಕರ್ನಾಟಕದಿಂದ ಮುಂಬಯಿ ಬೆಸೆದು ಸೂರತ್ ತಲುಪುವ ಈ ರೈಲು ಈವರೆಗೆ ವಿಶೇಷ ರೈಲಾಗಿ ಸಾಗುತ್ತಿತ್ತು. ವಾರಕ್ಕೆರಡು ಬಾರಿ ಸೇವೆ ನೀಡುವ ಈ ರೈಲನ್ನು ಈ ಖಾಯಂ ರೈಲಾಗಿ ಘೋಷಿಸಿದ್ದು ಕರಾವಳಿ ಜನರಿಗೆ ಇದು ಉಪಕಾರಿಯಾಗಿದೆ. ಈ ಸೇವೆಯನ್ನು ಒದಗಿಸಿದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರಿಗೆ ಹಾಗೂ ವಿ ಸೋಮಣ್ಣ ರವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ರೈಲು ಸಂಖ್ಯೆ 19057 ಬುಧವಾರ ಮತ್ತು ಭಾನುವಾರಗಳಂದು ಸಂಜೆ 7.35 ಕ್ಕೆ ಸೂರತ್ನಿಂದ ಹೊರಟು ಮರುದಿನ ಸಂಜೆ 7.45 ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ರೈಲು ಸಂಖ್ಯೆ 19058 ಸೋಮವಾರ ಮತ್ತು ಗುರುವಾರ ರಾತ್ರಿ 10.30ಕ್ಕೆ ಮಂಗಳೂರು ಜಂಕ್ಷನ್ನಿಂದ ಹೊರಟು ಮರುದಿನ ರಾತ್ರಿ 11.45 ಕ್ಕೆ ಸೂರತ್ ತಲುಪಲಿದೆ.
ವಿಶೇಷ ರೈಲಾಗಿದ್ದು ಈ ರೈಲು ಕರಾವಳಿಯಿಂದ ಮುಂಬೈ ಮತ್ತು ಸೂರತ್ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
