ವಿಟ್ಲ: ಬೇಕರಿಯೊಂದರಲ್ಲಿ ಕಾನೂನುಬಾಹಿರವಾಗಿ ಅದೃಷ್ಟದ ಮಟ್ಕಾ ಆಟ ನಡೆಸುತ್ತಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಫೆಬ್ರವರಿ 14ರಂದು ವಿಟ್ಲಪೇಟೆ ಪ್ರದೇಶದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ವಿನಾಯಕ ಬೇಕರಿಯಲ್ಲಿ ಮಟ್ಕಾ ಆಟ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿತು. ಮಾಹಿತಿ ಆಧಾರವಾಗಿ ದಾಳಿ ನಡೆಸಿದ ಪೊಲೀಸರು ಅಂಗಡಿ ಮಾಲೀಕ ಕುದ್ದುಪದವು ನಿವಾಸಿ ರವೀಶ್ ಎಂಬಾತನನ್ನು ವಶಕ್ಕೆ ಪಡೆದರು.
‘ನಾನು ಅದೃಷ್ಟದ ಆಟವಾದ ಮಟ್ಕಾವನ್ನು ಆಡಿಸುತ್ತಿದ್ದು, 00-99ವರೆಗಿನ ನಂಬರಿಗೆ ಅದೃಷ್ಟದ ಆಟದಲ್ಲಿ ಆಡುವ ಜನರು ನನ್ನ ಬಳಿ ಬಂದು ಅವರ ಇಚ್ಛೆಯ ಸಂಖ್ಯೆಗೆ ಹಣವನ್ನು ಕಟ್ಟಿ ಹೋಗುತ್ತಾರೆ. ಇಲ್ಲವೇ ಮೊಬೈಲ್ ವಾಟ್ಸಾಪ್ ಮೂಲಕ ಅದೃಷ್ಟ ಸಂಖ್ಯೆಯನ್ನು ಕಳುಹಿಸಿಕೊಡುತ್ತಾರೆ . ಅವರು ತಿಳಿಸಿದ ನಂಬರನ್ನು ನಾನು ನನ್ನ ಮೊಬೈಲ್‌ನಲ್ಲಿರುವ ವಾಟ್ಸಾಪ್ ನಲ್ಲಿರುವ Shetty Numbers ಎಂಬ ಗ್ರೂಪಿಗೆ ಕಳುಹಿಸಿಕೊಡುತ್ತೇನೆ. ನಂತರ ಅದೃಷ್ಟದ ನಂಬರ್ ಹಾಕಿದ ವ್ಯಕ್ತಿಗಳು ಹಣವನ್ನು ಅಂಗಡಿಗೆ ತಂದು ನೀಡುತ್ತಾರೆ. ಮಟ್ಕಾ ಆಟದಲ್ಲಿ 10 ರೂಪಾಯಿಗೆ 700 ರೂಪಾಯಿಯಂತೆ ಸಿಗುತ್ತದೆ. ಈ ದಿನವೂ ಅದೃಷ್ಟದ ಮಟ್ಕಾ ಆಟ ಆಡಿಸುತ್ತಿದ್ದು ಇದರಿಂದ ನನಗೆ ಲಾಭವಾಗುವುದಾಗಿ ಆರೋಪಿ ರವೀಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಆರೋಪಿಯು ಕಾನೂನು ಬಾಹಿರವಾಗಿ ಅದೃಷ್ಟದ ಮಟ್ಕಾ ಆಟ ಆಡುತ್ತಿರುವುದು ಖಚಿತವಾಗಿರುವುದರಿಂದ ಆತನನ್ನು ವಶಕ್ಕೆ ಪಡೆದುಕೊಂಡು ಆತನ ಬಳಿಯಲ್ಲಿದ್ದ ಆಟಕ್ಕೆ ಬಳಸಿದ Redme Note-14 5G ಎಂಬ ಹೆಸರಿನ ಬಿಳಿ ಮತ್ತು ತಿಳಿ ನೀಲಿ ಬಣ್ಣ ಹೊಂದಿರುವ ಮೊಬೈಲ್-1 ಅನ್ನು ಸ್ವಾಧೀನಪಡಿಸಿ ನಂತರ ಆತನಲ್ಲಿದ್ದ 1630 /- ರೂಪಾಯಿ ಹಣವನ್ನು ಮತ್ತು ಇತರ ಸೊತ್ತುಗಳನ್ನುಸ್ವಾಧೀನಪಡಿಸಿಕೊಳ್ಳಲಾಗಿದೆ.ಎಸ್.ಐ.ರಾದುಕೃಷ್ಣ ಅವರ ದೂರಿನ ಮೇರೆಗೆ ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ: 78(3) KP Actಯಂತೆ ಪ್ರಕರಣ(ಅ.ಕ್ರ.40/2026) ದಾಖಲಾಗಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
