ಕಾರು ತೆರೆದ ಬಾವಿಗೆ ಬಿದ್ದು 6 ಮಕ್ಕಳ ಸಹಿತ 9 ಮಂದಿ ಸಾವನ್ನಪ್ಪಿದ ಭೀಕರ ಅಪಘಾತ ಶುಕ್ರವಾರ ರಾತ್ರಿ ಮಹಾರಾಷ್ಟ್ರದ ನಾಶಿಕ್ನಲ್ಲಿ ಸಂಭವಿಸಿದೆ.
ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ನಾಶಿಕ್ ಜಿಲ್ಲೆಯ ದಿಂಡೋರಿ ಪಟ್ಟಣದ ಶಿವಾಜಿ ನಗರದಲ್ಲಿ ಈ ದಾರುಣ ಅಪಘಾತ ಸಂಭವಿಸಿದೆ. ಔತಣಕೂಟದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ವಿಶಾಲವಾದ ತೆರೆದ ಬಾವಿಗೆ ಬಿದ್ದಿದೆ.
ಮೃತರೆಲ್ಲ ಒಂದೇ ಕುಟುಂಬದ ಸದಸ್ಯರು ಎನ್ನಲಾಗಿದೆ. ಮಕ್ಕಳಲ್ಲಿ ಐವರು 14 ವರ್ಷ ಒಳಗಿನವರು ಹಾಗೂ ಓರ್ವ ಬಾಲಕ 11 ವರ್ಷದವ ಎಂದು ತಿಳಿದುಬಂದಿದೆ. ಮೃದೇಹಗಳನ್ನು ಡಿಂಡೋರಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
