ಬಂಟ್ವಾಳ: ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ವೀಲಿಂಗ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿ ಸಹಿತ ಕಾರನ್ನು ಬಂಟ್ವಾಳ ಟ್ರಾಫಿಕ್ ಎಸ್.ಐ. ಆದರ್ಶ್ ನೇತೃತ್ವದ ಪೊಲೀಸ್ ತಂಡ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ನಿನ್ನೆ (ಏ.07) ನಡೆದಿದೆ.
ಕಾರು ವೀಲಿಂಗ್ ಮಾಡಿದ ಸರ್ಫುದ್ದೀನ್ ಸಹಿತ ಕಾರನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾರು ವೀಲಿಂಗ್ ಮಾಡುವ ವಿಡಿಯೋ ಒಂದನ್ನು ವೈರಲ್ ಮಾಡಿ, ಈ ವೀಲಿಂಗ್ ಮಾಡಿದ ತಾಣ ಬಿ.ಸಿ. ರೋಡ್ ಪೊಲೀಸ್ ಠಾಣೆ ವ್ಯಾಪ್ತರಿಗೆ ಒಳ ಪಟ್ಟಿದೆ. ತತ್ ಕ್ಷಣ ಇಂತಹ ವಾಹನಗಳನ್ನು ಸೀಝ್ ಮಾಡಬೇಕು. ಎಫ್.ಐ.ಆರ್. ದಾಖಲಿಸ ಬೇಕು.. ಇಲ್ಲದಿದ್ದರೆ ಅನಾಹುತ ತಪ್ಪಿದ್ದಲ್ಲ ಎಂಬುದಾಗಿ ಶೇರ್ ಮಾಡಲಾಗಿತ್ತು. ಇದನ್ನೂ ಓದಿ: ಕುಂದಾಪುರ: ಬಾವಿಗೆ ಹಾರಿ ಯುವತಿ ಆತ್ಮಹ*ತ್ಯೆ; ಯುವಕನ ವಿರುದ್ದ ಪ್ರಚೋದನೆ ದೂರು ವಿಡಿಯೋ ದಲ್ಲಿ ಕೇರಳ ನೋಂದಣಿಯ ಕಪ್ಪು ಬಣ್ಣದ ಕಾರೊಂದನ್ನು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಎಂಬಲ್ಲಿ ವೀಲಿಂಗ್ ಮಾಡುವ ದೃಶ್ಯ ಕಂಡು ಬಂದಿತ್ತು. ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ 2025 ರ ರಲ್ಲಿ ಸರ್ಫುದ್ದೀನ್ ಎಂಬಾತ ವೀಲಿಂಗ್ ಮಾಡಿರುವುದು ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಪೋಲೀಸರು ವಾಹನ ಸಹಿತ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಪೋಲೀಸರ ಈ ನಡೆಯಿಂದ ತಾಲೂಕಿನಲ್ಲಿ ವಾಹನ ವೀಲಿಂಗ್ ಮಾಡುವ ಸಾಹಸಕ್ಕೆ ಕೈ ಹಾಕುವವರಿಗೆ ಒಂದು ಪಾಠವಾಗಿದೆ.
