ಬೆಂಗಳೂರು: ಇತೀಚೆಗೆ ರಾಜ್ಯದಲ್ಲಿ ನಡೆದ ಸ್ಪರ್ಧಾತ್ಮಕ (ಸಿ ಇ ಟಿ) ಪರೀಕ್ಷೆ ಸಂಧರ್ಭದಲ್ಲಿ ವೈದಿಕ ವಿಧ್ಯಾರ್ಥಿಗಳ ಧಾರ್ಮಿಕ ಸಂಕೇತವಾದ ಜನಿವಾರ (ಪವಿತ್ರ ನೂಲು) ಅನ್ನು ತೆರವು ಗೊಳಿಸಲು ಶೈಕ್ಷಣಿಕ ಸಿಬ್ಬಂದಿ ಪ್ರಯತ್ನಿಸಿರುವುದು ಖಂಡನೀಯ. ಪ್ರತಿ ಶಿಕ್ಷಣಾರ್ಥಿ ಗೆ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸುವ ಹಕ್ಕಿನೊಂದಿಗೆ ತನ್ನ ಧಾರ್ಮಿಕ ಸಂಕೇತವನ್ನು ಪಾಲಿಸುವ ಹಕ್ಕು ಕೂಡ ಇರುತ್ತದೆ. ಧಾರ್ಮಿಕ ಸ್ವಾತಂತ್ರ್ಯ ಈ ದೇಶದ ಪ್ರತಿ ಪ್ರಜೆಯ ಹಕ್ಕು, ಅದನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸುವಂತಿಲ್ಲ. ಯಾವುದೇ ಪರೀಕ್ಷಾ ಅಭ್ಯರ್ಥಿ ತನ್ನ ಧಾರ್ಮಿಕ ಘನತೆಯನ್ನು ಉಳಿಸಿಕೊಳ್ಳುವುದು ಅವರಿಗೆ ಸಂಬಂಧಿಸಿದ ಮಾನವ ಹಕ್ಕು ಆಗಿರುತ್ತದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಸಿಬ್ಬಂದಿಯ ಆಕ್ಷೇಪ ಖಂಡನೀಯ .
ಕೆ.ಅಶ್ರಫ್
( ಮಾಜಿ ಮೇಯರ್)
ಅಧ್ಯಕ್ಷರು.ದ. ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ
