ಮಂಗಳೂರು: ಶೈಕ್ಷಣಿಕ ಸಂಸ್ಥೆಗಳಲ್ಲಿ ಮುಸ್ಲಿಮ್ ವಿಧ್ಯಾರ್ಥಿಗಳು ತಮ್ಮ ಸಂವಿಧಾನಿಕ ಧಾರ್ಮಿಕ ಹಕ್ಕು ಆದ ಶಿರ ವಸ್ತ್ರ ಧಾರಣೆ , ಹಿಜಾಬ್ ಅನ್ನು ಈ ಹಿಂದಿನ ಬಿಜೆಪಿ ಸರಕಾರ ನಿರ್ಬಂಧ ಗೊಳಿಸಿದ ಆದೇಶವನ್ನು ಹಾಲಿ ಸರಕಾರ ಹಿಂದಕ್ಕೆ ಪಡೆದ ವಿಷಯದಲ್ಲಿ ಆರ್.ಅಶೋಕ್ ನಾಟಕೀಯ ಆಕ್ರೋಶ ವ್ಯಕ್ತಪಡಿಸಿದ್ದಾರೆ!. ಆರ್.ಅಶೋಕ್ ಅವರು ಹಿಜಾಬ್ ಮತ್ತು ಜನಿವಾರದ ಬಗ್ಗೆ ಅತಿಯಾಗಿ ತಲೆ ಕೆಡಿಸಿ ಚಿಂತಿಸಿಕೊಳ್ಳುವ ಅಗತ್ಯ ಇಲ್ಲ!. ಅದು ಅವರಿಗೆ ಸಂಬಂಧಿಸಿದ ವಿಷಯವು ಅಲ್ಲ. ಆರ್. ಅಶೋಕ್ ಗೆ ತಲೆ ಕೆಡಿಸಿಕೊಳ್ಳಲು ಹಲವಾರು ವಿಷಯಗಳು ಬಾಕಿ ಇರಬಹುದು. ಅದರ ಬಗ್ಗೆ ಚಿಂತಿತರಾಗಲಿ. ಹಿಜಾಬ್ ಮುಸ್ಲಿಮ್ ವಿದ್ಯಾರ್ಥಿನಿಯರ ಹಕ್ಕು. ಅದನ್ನು ಕಸಿದು ಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಕಸಿದು ಕೊಳ್ಳಲು ಮುಸ್ಲಿಮ್ ಸಮುದಾಯ ಬಿಡುವುದು ಇಲ್ಲ ಎಂಬ ಬಗ್ಗೆ ಆರ್.ಅಶೋಕ್ ಅರಿವು ಹೊಂದಲಿ.
ಕೆ.ಅಶ್ರಫ್.
( ಮಾಜಿ ಮೇಯರ್)
ಅಧ್ಯಕ್ಷರು. ದ. ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ
