ಬೇಕರಿ ಮಾಲೀಕನ ಕಾಲರ್ ಹಿಡಿದು ಹಲ್ಲೆ, ಬಳಿಕ ಚಾಕು ಇರಿತ: ಪ್ರಕರಣ ದಾಖಲು

ಉಡುಪಿ: ಮೂಡನಿಡಂಬೂರು ಗ್ರಾಮದ ಕರಾವಳಿ ಬೈಪಾಸ್ ಬಳಿ ಬೇಕರಿ ಮಾಲೀಕರೊಬ್ಬರ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿದಿಯೂರು ಗ್ರಾಮದ ಮುರಳಿಧರ್ (35) ಎಂಬುವರು ನೀಡಿದ ದೂರಿನ ಪ್ರಕಾರ, ಅವರು ಕಳೆದ 20 ವರ್ಷಗಳಿಂದ ಕರಾವಳಿ ಬೈಪಾಸ್ ಬಳಿಯ ಸಾಗರ್ ಗಂಗಾ ಕಟ್ಟಡದ ನೆಲಮಹಡಿಯಲ್ಲಿ ‘ಪೂಜಾ ಬೇಕರಿ’ ನಡೆಸುತ್ತಿದ್ದಾರೆ. ಇವರ ಅಂಗಡಿಯ ಪಕ್ಕದಲ್ಲೇ ಅಶೋಕ್ ಎಂಬಾತ ಕಳೆದ ಒಂದು ವರ್ಷದಿಂದ ‘ಕೃಷ್ಣ ಬೇಕರಿ’ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ವಿವರಮೇ…

ಉಡುಪಿ: ಮೂಡನಿಡಂಬೂರು ಗ್ರಾಮದ ಕರಾವಳಿ ಬೈಪಾಸ್ ಬಳಿ ಬೇಕರಿ ಮಾಲೀಕರೊಬ್ಬರ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿದಿಯೂರು ಗ್ರಾಮದ ಮುರಳಿಧರ್ (35) ಎಂಬುವರು ನೀಡಿದ ದೂರಿನ ಪ್ರಕಾರ, ಅವರು ಕಳೆದ 20 ವರ್ಷಗಳಿಂದ ಕರಾವಳಿ ಬೈಪಾಸ್ ಬಳಿಯ ಸಾಗರ್ ಗಂಗಾ ಕಟ್ಟಡದ ನೆಲಮಹಡಿಯಲ್ಲಿ ‘ಪೂಜಾ ಬೇಕರಿ’ ನಡೆಸುತ್ತಿದ್ದಾರೆ. ಇವರ ಅಂಗಡಿಯ ಪಕ್ಕದಲ್ಲೇ ಅಶೋಕ್ ಎಂಬಾತ ಕಳೆದ ಒಂದು ವರ್ಷದಿಂದ ‘ಕೃಷ್ಣ ಬೇಕರಿ’ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯ ವಿವರ
ಮೇ 23ರಂದು ಮಧ್ಯಾಹ್ನ ಸುಮಾರು 12:30ರ ವೇಳೆಗೆ ಮುರಳಿಧರ್ ಅವರು ತಮ್ಮ ಬೇಕರಿಯಲ್ಲಿ ಗ್ರಾಹಕರಿಗೆ ವ್ಯಾಪಾರ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಆರೋಪಿ ಅಶೋಕ್ ಇದ್ದಕ್ಕಿದ್ದಂತೆ ಅಂಗಡಿಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಕ್ರಮವಾಗಿ ಒಳಗೆ ನುಗ್ಗಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಮುರಳಿಧರ್ ಅವರ ಕಾಲರ್ ಪಟ್ಟಿ ಹಿಡಿದು, ಕೆನ್ನೆಗೆ ಹಾಗೂ ಕುತ್ತಿಗೆಗೆ ಹೊಡೆದು, ಕಾಲಿನಿಂದ ಒದ್ದು ನೆಲಕ್ಕೆ ತಳ್ಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಮುರಳಿಧರ್ ಅವರು ನೆಲದಿಂದ ಏಳಲು ಯತ್ನಿಸಿದಾಗ, ಆರೋಪಿ ಅಶೋಕ್ ಚಾಕುವಿನಿಂದ ಅವರ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಇರಿದು ಗಂಭೀರ ಗಾಯಗಳನ್ನು ಉಂಟುಮಾಡಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.ಮುರಳಿಧರ್ ಅವರು ನೀಡಿದ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed