ಮಂಗಳೂರು: ದೇಶಾದ್ಯಂತ ಗೋವಿನ ಬಗ್ಗೆ ವಿವಿಧ ನಿಲುವು ಸೃಷ್ಟಿ ಆಗಿದ್ದು, ಮುಸ್ಲಿಮ್ ಸಮುದಾಯ ಗೋವು ಅನ್ನು ರಾಷ್ಟ್ರೀಯ ಪ್ರಾಣಿ ಆಗಿ ಘೋಷಿಸಲು ಆಗ್ರಹಿಸಿದೆ. ಆದರೆ ಕೇಂದ್ರ ಸರಕಾರ ಗೋವನ್ನು ರಾಷ್ಟ್ರೀಯ ಪ್ರಾಣಿ ಆಗಿ ಗೋಷಿಸುವ ಹಾಗೂ ಗೋಹತ್ಯೆ ನಿಷೇಧ ಪೂರ್ಣ ಪ್ರಮಾಣದಲ್ಲಿ ಇಲ್ಲ ಎಂಬ ದ್ವಂದ ಹೇಳಿಕೆ ನೀಡಿದೆ.ಇದು ಸಂಪೂರ್ಣ ಗೊಂದಲ ಸೃಷ್ಟಿಸಿದೆ. ಈ ಬಗ್ಗೆ ಹಾಲಿ ‘ ಗೋರಕ್ಷಕರು ‘ ಕೇಂದ್ರ ಸರಕಾರವನ್ನು ಪ್ರಶ್ನಿಸಲಿ. ಭಾರತೀಯರಿಗೆ ಗೋವು ನಂಬಿಕೆಯ ಮೂಲ ಪ್ರಾಣಿ ಆಗಿರುವುದರಿಂದ, ಗೋವು ಅನ್ನು ಕೇಂದ್ರ ಸರಕಾರ ರಾಷ್ಟ್ರೀಯ ಪ್ರಾಣಿ ಆಗಿ ಘೋಷಿಸಬೇಕು. ಭಾರತದಿಂದ ವಿದೇಶಕ್ಕೆ ಆಗುತ್ತಿರುವ ಬೃಹತ್ ಗೋಮಾಂಸ ರಫ್ತು ಅನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು. ಹಾಲಿ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಅಧಿಕೃತ ಮತ್ತು ಅನಧಿಕೃತ ಯಾಂತ್ರೀಕೃತ ಗೋಮಾಂಸಗಾರಿಕ ಸ್ಥಾವರಗಳನ್ನು ಸಂಪೂರ್ಣ ಮುಚ್ಚಬೇಕು. ಭಾರತೀಯರಿಗೆ ಗೋವಿನೊಂದಿಗೆ ಭಾವನಾತ್ಮಕ ಸಂಬಂಧ ಇರುವುದರಿಂದ ಕೇಂದ್ರ ಸರಕಾರ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಯಾಂತ್ರೀಕೃತ ಗೋವಧೆ ಮಾಡುವುದನ್ನು ತಕ್ಷಣ ನಿಲ್ಲಿಸಬೇಕಿದೆ. ಗೋವಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿ ಹಾಲಿ ಭಾರತದಲ್ಲಿ ಜೀವಿಸುತ್ತಿರುವ ವಿವಿಧ ತಳಿಯ ಗೋವುಗಳ ಸಂಪೂರ್ಣ ರಕ್ಷಣೆಗೆ ರಚನಾತ್ಮಕ ಕಾರ್ಯಯೋಜನೆ ರೂಪಿಸಬೇಕಿದೆ. ಕೇಂದ್ರ ಸರಕಾರ ಈ ಬಗ್ಗೆ ಗಮನ ಹರಿಸಲಿ.
ಕೆ.ಅಶ್ರಫ್ ( ಮಾಜಿ ಮೇಯರ್)
ಅಧ್ಯಕ್ಷರು. ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ
