ಮಂಗಳೂರು: ಕೇಂದ್ರ ಸಚಿವ ಎಚ್. ಡಿ. ಕುಮಾರ ಸ್ವಾಮಿ ಇತ್ತೀಚೆಗೆ ರಾಮ ನಗರ ಕ್ಷೇತ್ರದ ಮಸೀದಿಯ ಸಮುದಾಯ ಸಭಾಂಗಣದಲ್ಲಿ ನಡೆದ ಮುಸ್ಲಿಮ್ ಸಮುದಾಯದ ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಬಾಂಗ್ಲಾ ದೇಶದ ಪ್ರಜೆಗಳನ್ನು ಮತದಾರದ ಪಟ್ಟಿಯಲ್ಲಿ ಸೇರ್ಪಡಿಸುತ್ತಿದ್ದಾರೆ ಎಂದು ಸುಳ್ಳು ಆರೋಪದ ಹೇಳಿಕೆ ನೀಡಿರುತ್ತಾರೆ. ಕುಮಾರ ಸ್ವಾಮಿಯವರು ರಾಮನಗರ ಕ್ಷೇತ್ರದ ಈ ಹಿಂದಿನ ಅಭ್ಯರ್ಥಿ ಕೂಡ ಹೌದು. ಈ ಕ್ಷೇತ್ರದಲ್ಲಿ ಈ ಹಿಂದೆ ಮುಸ್ಲಿಮ್ ಅಲ್ಪ ಸಂಖ್ಯಾತರ ಮತ ಪಡೆದು ಹಲವು ಬಾರಿ ಶಾಸಕ, ಸಚಿವರಾದ ಕುಮಾರಸ್ವಾಮಿ ಯಾದಿ,ದೇವೇಗೌಡರ ಕುಟುಂಬಕ್ಕೆ , ಆ ಕ್ಷೇತ್ರದಲ್ಲಿನ ಮತದಾರರ ನೈಜತೆ ಬಗ್ಗೆ ಸ್ಪಷ್ಟ ಮಾಹಿತಿ ಇದ್ದು ಕೂಡ ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂದು ಮುಸ್ಲಿಮ್ ಸಮುದಾಯವನ್ನು ತನ್ನ ಮಾತುಗಳಲ್ಲಿ ಕೋಮೂಕರಿಸಿ ಬಿಂಬಿಸುವುದು ಅಕ್ಷ್ಯಮ್ಮ ಅಪರಾದ ಆಗಿದೆ. ಕುಮಾರ ಸ್ವಾಮಿ ತನ್ನ, ರಾಮ ನಗರ ಮುಸ್ಲಿಮ್ ಎಸ್.ಐ.ಆರ್ ಮಾತಿಗೆ ಮೊದಲು, ಬಾಂಗ್ಲಾ ಮಾ.ಪ್ರ. ಶೇಕ್ ಹಸೀನಾ ಎಲ್ಲಿದ್ದಾರೆ ಎಂದು ಹೇಳಲಿ. ತನ್ನ ಮೈತ್ರಿ ಪಕ್ಷದ ಅಜೆಂಡಾ ಕಾರ್ಡ್ ಏನು ಎಂದು ಮೊದಲು ಕುಮಾರ ಸ್ವಾಮಿ ಬಹಿರಂಗ ಪಡಿಸಲಿ.
ಕೆ.ಅಶ್ರಫ್ ( ಮಾಜಿ ಮೇಯರ್)
ಅಧ್ಯಕ್ಷರು.ದ. ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.
