ಯುವತಿ ವಿಚಾರಕ್ಕೆ ವಾಗುವ ಹಾಗೆ ಯುವಕನಿಗೆ ಚಾಕು ಇರಿದಿರುವ ಘಟನೆ ವರದಿಯಾಗಿದೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಚಾಕುವಿನಿಂದ ಇರಿದು ಶರತ್ (21) ಮೇಲೆ ಪ್ರಜ್ವಲ್ ಎಂಬ ಯುವಕ ಭೀಕರವಾಗಿ ಹಲ್ಲೆ ಮಾಡಿದ್ದಾನೆ.
ಶರತ್ ಹಾಗೂ ಪ್ರಜ್ವಲ್ ಇಬ್ಬರು ಒಂದೇ ಯುವತಿಯನ್ನು ಪ್ರೀತಿಸುತ್ತಿದ್ದರು ಇದೇ ವಿಚಾರಕ್ಕೆ ಕಳೆದ ಎರಡು ದಿನಗಳಿಂದ ಇಬ್ಬರ ನಡುವೆ ಗಲಾಟೆ ಆಗಿದೆ ಇಂದು ಬೆಳಿಗ್ಗೆ ಪ್ರಜ್ವಲ್ ಅನ್ನು ಶರತ್ ಮಾತನಾಡಿಸಲು ಬಂದಿದ್ದ ಈ ವೇಳೆ ಇಬ್ಬರ ನಡುವೆ ಜಗಳ ತಾರಕಕ್ಕೆ ಏರಿ ಚಾಕುವಿನಿಂದ ಇರಿದಿದ್ದಾನೆ.
ಮಾತಿಗೆ ಮಾತು ಬೆಳೆದು ಶರತ್ ಮೇಲೆ ಪ್ರಜ್ವಲ್ ದಾಳಿ ಮಾಡಿದ್ದಾನೆ. ಆರೋಪಿ ಪ್ರಜ್ವಲ್ ಅನ್ನು ಇದೀಗ ಬೇಲೂರು ಠಾಣೆ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಹಲ್ಲೆಗೆ ಒಳಗಾದ ಶರತ್ ಗೆ ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೇಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
