ಉಡುಪಿ ಜಿಲ್ಲೆಯ ಕೆಮ್ಮಣ್ಣು ಪಡು ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಸರೋವರ ಬಾರ್ & ರೆಸ್ಟೋರೆಂಟ್ ವಾಣಿಜ್ಯ ಕಟ್ಟಡದ ಕಾಮಗಾರಿಯ ಬಗ್ಗೆ ನಾವು ಈ ಹಿಂದೆ ಎರಡೂ ಬಾರಿ ವರದಿಯನ್ನು ಮಾಡಿದ್ದೇವು.
ಆದರೆ ಕಟ್ಟಡ ಮಾಲೀಕ ಸಂಪತ್ ಕುಮಾರ್ ಶೆಟ್ಟಿ ಎಂಬಾತನು ಕಟ್ಟಡ ಪರವಾನಿಗೆಯನ್ನು ಪಡೆಯದೇ ರಾಜರೋಷವಾಗಿ ಅಕ್ರಮ ಕಟ್ಟಡದ ನಿರ್ಮಾಣಕ್ಕೆ ಸುಮಾರು ಮೂವತ್ತು ಕಾರ್ಮಿಕರನ್ನು ಸೇರಿಸಿ ರಾತ್ರಿ ಹಗಲು ಕಟ್ಟಡದ ಕಾಮಗಾರಿಯು ಭರದಿಂದ ಸಾಗುತ್ತಿದೆ.
ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿ, ತಹಶೀಲ್ದಾರ, ಚೀಫ್ ಆಫೀಸರಿ, ನಗರಾಭಿವೃದ್ಧಿ ಇಲಾಖೆ ಉಡುಪಿ, ತಾಲೂಕು ಪಂಚಾಯತ್ ಕಾರ್ಯನಿರ್ವವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಅಭಕಾರಿ ಇಲಾಖೆ, ಗ್ರಾಮ ಪಂಚಾಯತ್ ಅಭಿವೃದ್ದೀ ಅಧಿಕಾರಿ, ಸೇರಿದಂತೆ ವಿವಿಧ ಇಳಾಖೆಗೆ ದೂರು ಅರ್ಜಿ ನೀಡಿದ್ದರೂ ಕ್ಯಾರೆ ಎನ್ನದ ಕಟ್ಟಡ ಮಾಲೀಕ ಹಳೇ ಕಟ್ಟಡವನ್ನು ಕೆಡವಿ ಹೊಸತಾಗಿ ಕಬ್ಬಿಣದ ರಾಡ್ ಹಾಕಿ ಯಾವುದೇ ನಿಯಮಗಳನ್ನು ಪಾಲೀಸದೇ ಅನದಿಕೃತ ಕಟ್ಟಡವನ್ನು ಕಟ್ಟುತ್ತಿದ್ದಾರೆ.
ಅಕ್ರಮ ಕಟ್ಟಡ ನಿರ್ಮಾಣಕ್ಕೆ ನೇರವಾಗಿ ಮುಖ್ಯಮಂತ್ರಿಯ ಬೆಂಬಲ ಎದ್ದುಕಾಣುತ್ತದೆ. ಅಧಿಕಾರಿಗಳಿಗೆ ಮುಖ್ಯಮಂತ್ರಿ ಕಚೇರಿಯಿಂದ ಕರೆ ಬಂದಿದೆ ಎಂದು ಮೂಲಗಳಿಂದ ಮಾಹಿತಿ ಇದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ಸಂಪತ್ ಕುಮಾರ್ ಶೆಟ್ಟಿಗೆ ಹೈ ಲೆವೆಲ್ ಇಂಪ್ಲೆನ್ಸ್ ಇರುವುದರಿಂದ ಕಾನೂನಿನ ಕೈ ಕಟ್ಟಿ ಹಾಕಿದೆ;
ಪಂಚಾಯತ್ ಪಿಡಿಓ ನಾಮಕಾವಸ್ಥೆಗೆ ಕಟ್ಟಡ ಮಾಲೀಕನಿಗೆ ದಿನಾಂಕವನ್ನು ನಮೂದಿಸದೇ ನೋಟೀಸು ನೀಡಿದ್ದು ಪಂಚಾಯತ್ ಪಿಡಿಓ ಗೆ ಯಾರದೋ ರಾಜಕೀಯ ಒತ್ತಡವಿರುವುದು ಇಲ್ಲಿ ಸ್ಪಸ್ಠವಾಗಿ ಗಮನಿಸಬಹುದಾಗಿದೆ. ಅಷ್ಟೇ ಅಲ್ಲದೆ ಕಟ್ಟಡ ಮಾಲೀಕನು ಸರಕಾರದ ಭಯವಿಲ್ಲದೆ, ಕೋರ್ಟ್ ಅದೇಶವನ್ನು ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ. ಕಟ್ಟಡ ನಿರ್ಮಾಣದ ಬೂಪನ ಹಿಂದೆ ನೇರವಾಗಿ ಮುಖ್ಯಮಂತ್ರಿಯ ಬೆಂಬಲ ಇದೆಯಾ ಎಂದು ಪ್ರಶ್ನೆ ಎದರಾಗತ್ತಿವೆ ಮತ್ತು ಕೆಲವೊಂದಿಷ್ಟು ರಾಜಕಾರಣೀಗಳು ಭಾಗಿಯಾಗಿದ್ದಾರಾ ಎಂದು ಸಾರ್ವಜನಿಕ ವಲಯದಲ್ಲಿ ಬಾರೀ ಮಾತು ಕೇಳಿ ಬರುತ್ತಿದೆ.
ಅಕ್ರಮ ಕಟ್ಟಡ ನಿರ್ಮಾಣಕ್ಕೆ ನಮ್ಮ ಜನ ಪ್ರತಿನಿಧಿಗಳು ಬೆಂಬಲ ನೀಡುತ್ತಾರೆ ಎಂದರೆ ಏನು ಅರ್ಥ..?? ಎಷ್ಟೋ ಬಾರಿ ನೋಟಿಸ್ , ಅಧಿಕಾರಿಗಳು ಬಂದು ಕಾಮಗಾರಿ ನಿಲ್ಲಿಸಿ ಎಂದರು, ತಕ್ಷಣವೇ ಅದರ ಹತ್ತು ಪಟ್ಟು ರಾತ್ರಿ ಹಗಳು ವೇಗವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಕಟ್ಟಡ ಮಾಲೀಕನಿಗೆ ಕಾನೂನಿನ ಬಗ್ಗೆ ಒಂದು ಚೂರು ಭಯವೇ ಇಲ್ಲವಾಗಿದೆ.
