ಉಡುಪಿ ಜಿಲ್ಲೆಯ ಕೆಮ್ಮಣ್ಣು ಪಡು ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಸರೋವರ ಬಾರ್ & ರೆಸ್ಟೋರೆಂಟ್ ವಾಣಿಜ್ಯ ಕಟ್ಟಡದ ಕಾಮಗಾರಿ ಕಟ್ಟಡ ಮಾಲೀಕ ಸಂಪತ್ ಕುಮಾರ್ ಶೆಟ್ಟಿ ಎಂಬಾತನು ಕಟ್ಟಡ ಪರವಾನಿಗೆಯನ್ನು ಪಡೆಯದೇ ರಾಜರೋಷವಾಗಿ ಅಕ್ರಮ ಕಟ್ಟಡದ ನಿರ್ಮಾಣಕ್ಕೆ ಸುಮಾರು ಮೂವತ್ತು ಕಾರ್ಮಿಕರನ್ನು ಸೇರಿಸಿ ರಾತ್ರಿ ಹಗಲು ಕಟ್ಟಡದ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಇದೀಗ ಕಾಮಗಾರಿಯು ಕೊನೆ ಹಂತದಲ್ಲಿದೆ.
ಬಾರ್ ಗಳಿಗೆ ಒಂದೇ ಬಾಗಿಲು ಅಳವಡಿಸಲು ಕಾನೂನು, ಈ ಬಾರ್ ಗೆ ಹಿಂದೆ ಮುಂದೆ ಬಾಗಿಲು ಅಳವಡಿಸಿ , ಗೆಸ್ಟ್ ಹೌಸ್ ಮಾದರಿಯಲ್ಲಿ ಕಾಮಗಾರಿ ನಡೆಯುತ್ತಿದೆ.
ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿ, ತಹಶೀಲ್ದಾರ, ಚೀಫ್ ಆಫೀಸರಿ, ನಗರಾಭಿವೃದ್ಧಿ ಇಲಾಖೆ ಉಡುಪಿ, ತಾಲೂಕು ಪಂಚಾಯತ್ ಕಾರ್ಯನಿರ್ವವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಅಭಕಾರಿ ಇಲಾಖೆ, ಗ್ರಾಮ ಪಂಚಾಯತ್ ಅಭಿವೃದ್ದೀ ಅಧಿಕಾರಿ, ಸೇರಿದಂತೆ ವಿವಿಧ ಇಳಾಖೆಗೆ ದೂರು ಅರ್ಜಿ ನೀಡಿದ್ದರೂ ಯಾವುದಕ್ಕೂ ಉತ್ತರಿಸದೆ ತಮ್ಮ ಉದ್ಧಟತನ ಮೆರೆದಿದ್ದಾನೆ. ಕಾನೂನಿನ ಭಯವೇ ಇಲ್ಲದೇ ಸರ್ಕಾರ ತನ್ನ ಅಧೀನದಲ್ಲಿ ಇದೆ ಎಂಬ ಭಾವನೆಯಿಂದ ಎಲ್ಲಾ ರೀತಿಯ ನಿಯಮಗಳನ್ನು ಗಾಳಿಗೆ ತೂರಿ, ಕಟ್ಟಡ ನಿರ್ಮಾಣವಾಗುತ್ತಿದೆ. ಇತ್ತ ಅಧಿಕಾರಿಗಳು ಆತನ ರಾಜಕೀಯ ಪ್ರಭಾವಕ್ಕೆ ಕೈಕಟ್ಟಿ ಕೂರುವಂತಾಗಿದೆ.
ಅಕ್ರಮ ಕಟ್ಟಡ ನಿರ್ಮಾಣಕ್ಕೆ ನಮ್ಮ ಜನ ಪ್ರತಿನಿಧಿಗಳು ಬೆಂಬಲ ನೀಡುತ್ತಾರೆ ಎಂದರೆ ಏನು ಅರ್ಥ..?? ಎಷ್ಟೋ ಬಾರಿ ನೋಟಿಸ್ , ಅಧಿಕಾರಿಗಳು ಬಂದು ಕಾಮಗಾರಿ ನಿಲ್ಲಿಸಿ ಎಂದರು, ತಕ್ಷಣವೇ ಅದರ ಹತ್ತು ಪಟ್ಟು ರಾತ್ರಿ ಹಗಳು ವೇಗವಾಗಿ ಕಾಮಗಾರಿ ನಡೆಸುತ್ತಿದ್ದಾರೆ. ಕಟ್ಟಡ ಮಾಲೀಕನಿಗೆ ಕಾನೂನಿನ ಬಗ್ಗೆ ಒಂದು ಚೂರು ಭಯವೇ ಇಲ್ಲವಾಗಿದೆ. ಇವನ ಈ ಅಕ್ರಮಕ್ಕೆ ಅಧಿಕಾರಿಗಳು ತಕ್ಷಣವೇ ಬಲವಾದ ಕಡಿವಾಣ ಹಾಕಬೇಕಿದೆ. ಗ್ರಾಮಸ್ಥರು ದಂಗೆ ಏಳುವ ಮುನ್ನ ಸರ್ಕಾರ ಎಚ್ಚೆತ್ತು, ಅನಾಧಿಕೃತ ಕಟ್ಟಡ ಕೆಡವಿ ಆತನ ದರ್ಪಕ್ಕೆ ಕಾನೂನಿನ ಬೇಲಿ ಹಾಕಿ ಅಕ್ರಮ ಎಸಗಿದವರಿಗೆ ಬಿಸಿ ಮುಟ್ಟಬೇಕಾಗಿದೆ
