ಹೆಜಮಾಡಿ: ಅಂಗಡಿ ಮುಂಗಟ್ಟುಗಳನ್ನು ತೆರವು ಗೊಳಿಸಲು ಯಾವುದೇ ಕೋರ್ಟ್ ಆದೇಶ ಇಲ್ಲದಿದ್ದರೂ ಕೂಡ ಇದೀಗ ಹೆಜಮಾಡಿಯಲ್ಲಿ ತೆರವಿಗೆ ರಾತ್ರಿ ಹಗಲು ಸಂಚು ನಡೀತಾ ಇದೆ. ಅದೇ ರೀತಿ ಹೆಜಮಾಡಿ ಸಮೀಪದ ಪಡು ತೋನ್ಸೆ ಗ್ರಾಮದಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಹೈಕೋರ್ಟ್ ಅದೇಶ ನೀಡಿದೆ.ಆದರೆ ಇಲ್ಲಿನ ಯಾವುದೇ ತೆರವು ಕಾರ್ಯ ನಡೆದಿಲ್ಲ. ಆಶ್ಚರ್ಯ ವೇನೆಂದರೆ ಹೆಜಮಾಡಿಯಲ್ಲಿ ಯಾವುದೇ ಅದೇಶ ವಿಲ್ಲದೆ ಇಲ್ಲಿನ ಜನಪ್ರತಿನಿಧಿಗಳು ಅಂಗಡಿಗಳನ್ನು ತೆರವುಗೊಳಿಸುವುದು ಎಷ್ಟು ಸರಿ? ಅಲ್ಲದೇ ಕೋರ್ಟ್ ಸ್ಪಷ್ಟವಾಗಿ ತೆರವು ಗೊಳಿಸಬಾರದೆಂದು ಅದೇಶ ನೀಡಿದೆ. ಇದೀಗ ಕೋರ್ಟ್ ಅದೇಶ ಉಲ್ಲಂಘನೆ ಮಾಡಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ.

ಹೆಜಮಾಡಿಯಲ್ಲಿ ಕೋರ್ಟ್ ತಡೆಯಾಜ್ಞೆ ಇದ್ದರು ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿದ್ದಾರೆ, ಉಡುಪಿ ಪಡುತೊನ್ಸೆಯಲ್ಲಿ ಕಾನೂನು ಬಾಹಿರ ಬಾರ್ & ರೆಸ್ಟೋರೆಂಟ್ ತೆರವುಗೊಳಿಸಲು ಹೈಕೋರ್ಟ್ ಆದೇಶ ಇದ್ದರೂ ಕಾಮಗಾರಿ ನಡೆಯುತ್ತಿದೆ.
ಇಲ್ಲಿನ ಅಧಿಕಾರಿಗಳು ಬಡವರಿಗೆ ಒಂದು ಕಾನೂನು ಶ್ರೀಮಂತರಿಗೆ ಇನ್ನೊಂದು ಕಾನೂನು ರೀತಿಯಲ್ಲಿ ವರ್ತಿಸುತ್ತಾರೆ ಸಾಮಾನ್ಯ ವ್ಯಕ್ತಿ ತನ್ನ ಹೊಟ್ಟೆ ಪಾಡಿಗೆ ಸಣ್ಣ ವ್ಯಾಪಾರ ನಡೆಸಿ ಜೀವನ ಸಾಗಿಸಲು ಕಾನೂನಿನ ತೊಡಕುಗಳು ಉಂಟಾಗಬಾರದು, ಅದೇ ಶ್ರೀಮಂತರು ಸರ್ಕಾರದ ಆಸ್ತಿಯಲ್ಲಿ ಅಕ್ರಮವಾಗಿ ಬೃಹತ್ ಕಟ್ಟಡ ಕಟ್ಟಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದರೂ ಅಧಿಕಾರಿಗಳು ಲಂಚದ ಆಸೆಗೆ ಸುಮ್ಮನಾಗುತ್ತಾರೆ ಮತ್ತು ಅವರಿಗೆ ಸಾಥ್ ನೀಡುತ್ತಿದ್ದಾರೆ.
