ಉಡುಪಿ ಜಿಲ್ಲೆಯ ಕಾಪು ತಾಲ್ಲೂಕು, ಹೆಜಮಾಡಿ ಗ್ರಾಮದಲ್ಲಿರುವ ಆಟೋ ರಿಕ್ಷಾ ನಿಲ್ದಾಣ ಹಾಗೂ 4 ಗೂಡಂಗಡಿಗಳು ರಸ್ತೆ ಮಾರ್ಜಿನ್ನನಲ್ಲಿ ನಿರ್ಮಾಣವಾಗಿದೆಯೆಂದು ಆರೋಪಿಸಿ ಎಲ್ಲೂರು ಗ್ರಾಮದ ವಸಂತ್ ಭಟ್ ಎಂಬುವವರು ದೂರು ನೀಡಿದ್ದ ಆಧಾರದ ಮೇರೆಗೆ, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಾ ನಿರ್ವಾಹಣಾಧಿಕಾರಿಗಳ ನಿರ್ಣಯದಂತೆ ಹಾಗೂ ಲೋಕೋಪಯೋಗಿ ಇಲಾಖೆಯವರು ಜಂಟಿ ಕಾರ್ಯಾಚರಣೆ ಮಾಡಿ ತೆರವುಗೊಳಿಸುವುದಾಗಿ ನೋಟೀಸು ನೀಡಿದ್ದರು,

ಈ ವಿಚಾರವಾಗಿ ಹೆಜಮಾಡಿ ಆಟೋ ರಿಕ್ಷಾ ನಿಲ್ದಾಣ ಸಂಘದ ಅಧ್ಯಕ್ಷರಾದ ಶ್ರೀ ಶೇಖರ್ ಹೆಜಮಾಡಿರವರು ನೊಂದವರ ಪರವಾಗಿ ಗೌರವಾನ್ವಿತ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದ ಮೇರೆಗೆ ಘನ ನ್ಯಾಯಾಲಯವು ಸಮರ್ಪಕ ಕಾನೂನು ಪ್ರಕ್ರಿಯೆ ನಡೆಸದೆ ಯಾವ ಕಟ್ಟಡವನ್ನು ಕೆಡವುವಂತಿಲ್ಲವೆಂದು ದಿನಾಂಕ 01-08-2026 ರಂದು ಆದೇಶ ಹೊರಡಿಸಿತ್ತು.
ಆದರೆ ಇದ್ಯಾವುದನ್ನೂ ಲೆಕ್ಕಿಸದ ಜಿಲ್ಲಾ ಪಂಚಾಯತ್ ಹಾಗೂ ಲೋಕೋಪಯೋಗಿ ಇಲಾಖೆಯವರು ಗೌರವಾನ್ವಿತ ಉಚ್ಛ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಸದರಿ ರಿಕ್ಷಾ ನಿಲ್ದಾಣ ಹಾಗೂ ಗೂಡಂಗಡಿಗಳನ್ನು ದಿನಾಂಕ 04-02-2026ರಂದು ನೆಲಸಮ ಮಾಡುವುದಾಗಿ ಅಂತಿಮ ನೋಟಿಸು ಜಾರಿ ಮಾಡಿದ್ದರು, ಈ ಧೋರಣೆಯುಕ್ತ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ವಕೀಲರಾದ ಕಿರಣ್ ಎನ್.ರವರು ಮಾನ್ಯ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ದಿನಾಂಕ 03-02-2026ರಂದು ರಿಕ್ಷಾ ನಿಲ್ದಾಣ ಹಾಗೂ ಗೂಡಂಗಡಿಯವರ ಪರ ದಾವೆ ದಾಖಲಿಸಿ ವಾದ ಮಂಡಿಸಿದ್ದರು,
ಈ ವಿಚಾರವನ್ನು ಉಡುಪಿಯ ಘನ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಯುತ ಅಬುತಹೀರ್ ಎ.ರವರು ಗಂಭೀರವಾಗಿ ಪರಗಣಿಸಿ ದಿನಾಂಕ 04-02-2026 ಯಾವುದೇ ಕ್ರಮ ಜರುಗಿಸದೆ ‘ಯಥಾ ಸ್ಥಿತಿ’ ಕಾಪಾಡುವಂತೆ ಆದೇಶ ಹೊರಡಿಸಿ ಸಂಬಂಧಪಟ್ಟ ಇಲಾಖೆಯವರಿಗೆ ನೋಟೀಸು ಜಾರಿ ಮಾಡಿ ಪ್ರಕರಣವನ್ನು ದಿನಾಂಕ 19-02-2026 ಮುಂದೂಡಿದ್ದಾರೆ.
