Author: News Editor

  • ಹೋಂಸ್ಟೇ ಬಾತ್‌ರೂಮ್‌ನಲ್ಲೇ ದುರಂತ ಅಂತ್ಯ: ಗೀಸರ್ ಅನಿಲ ಸೋರಿಕೆಗೆ ಯುವತಿ ಸಾವು
    , ,

    ಹೋಂಸ್ಟೇ ಬಾತ್‌ರೂಮ್‌ನಲ್ಲೇ ದುರಂತ ಅಂತ್ಯ: ಗೀಸರ್ ಅನಿಲ ಸೋರಿಕೆಗೆ ಯುವತಿ ಸಾವು

    ಮಡಿಕೇರಿ : ಕೊಡಗಿಗೆ ಪ್ರವಾಸಕ್ಕೆ ಬಂದಿದ್ದ ಮೈಸೂರಿನ ಯುವತಿಯೊಬ್ಬರು ಹೋಂಸ್ಟೇ ಬಾತ್‌ರೂಮ್‌ನಲ್ಲಿ ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿಯಾದ ವಿನೂತ (27) ಮೃತಪಟ್ಟ ದುರ್ದೈವಿ ಪ್ರವಾಸಿ ಮಹಿಳೆಯಾಗಿದ್ದಾರೆ.ಮೈಸೂರಿನಿಂದ ಕೊಡಗು ಪ್ರವಾಸಕ್ಕೆಂದು ಆಗಮಿಸಿದ್ದ ವಿನೂತ, ಸೋಮವಾರಪೇಟೆಯ ಚೌಡ್ಲು ಗ್ರಾಮದ ಹೋಂಸ್ಟೇಯೊಂದರಲ್ಲಿ ತಂಗಿದ್ದರು. ಜೂನ್ 7ರ ಭಾನುವಾರ ಬೆಳಗ್ಗೆ ಸ್ನಾನ ಮಾಡಲು ಬಾತ್‌ರೂಮಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘೋರ ದುರಂತ ಸಂಭವಿಸಿದೆ.ವಿನೂತ ಅವರು ಸ್ನಾನ ಮಾಡಲು ಹೋದಾಗ…

    Continue Reading

  • ಪ್ರಿಯಾಂಕ್ ಖರ್ಗೆ ವಿರುದ್ಧ ಜಾತಿ ನಿಂದನೆ; ಕಾರ್ಕಳದಲ್ಲಿ ಪ್ರಕರಣ ದಾಖಲು, ಆರೋಪಿ ಜೈಲುಪಾಲು
    ,

    ಪ್ರಿಯಾಂಕ್ ಖರ್ಗೆ ವಿರುದ್ಧ ಜಾತಿ ನಿಂದನೆ; ಕಾರ್ಕಳದಲ್ಲಿ ಪ್ರಕರಣ ದಾಖಲು, ಆರೋಪಿ ಜೈಲುಪಾಲು

    ಕಾರ್ಕಳ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿ, ಜಾತಿನಿಂದನೆ ಮಾಡಿ ಜೀವ ಬೆದರಿಕೆಯೊಡ್ಡಿರುವ ಆರೋಪದಲ್ಲಿ ಆರೋಪಿಯೋರ್ವನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.ಕಾರ್ಕಳ ಕೇರ್ವಾಶೆ ನಲ್ಕೆದಬೆಟ್ಟು ನಿವಾಸಿ ಸುಧೀರ ಬಂಗೇರ(48) ಬಂಧಿತ ಆರೋಪಿ.’ನಮ್ಮ ಕಾರ್ಲ’ ಎಂಬ ಫೇಸ್‌ಬುಕ್ ಖಾತೆಯಲ್ಲಿ ಕರ್ನಾಟಕ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಪೋಟೊ ಹಾಕಿ ಅದರಲ್ಲಿ ‘ಆರೆಸ್ಸೆಸ್ ಇನ್ನು ಎರಡು ವರ್ಷಗಳ ಅವಧಿ ಕೋಮು ವಾದವನ್ನು ಉಸಿರಾಡುವುದಿಲ್ಲ. ಕಾರಣ ಗೃಹಮಂತ್ರಿ ಸ್ಥಾನದಲ್ಲಿ ಸೌಮ್ಯ ಸ್ವಭಾವದ…

    Continue Reading

  • ಆಟವಾಡುತ್ತಿದ್ದಾಗ ಅನಾಹುತ: ನೀರು ತುಂಬಿದ ಹೊಂಡದಲ್ಲಿ ಬಿದ್ದು ಬಾಲಕ ಮೃತ್ಯು
    , ,

    ಆಟವಾಡುತ್ತಿದ್ದಾಗ ಅನಾಹುತ: ನೀರು ತುಂಬಿದ ಹೊಂಡದಲ್ಲಿ ಬಿದ್ದು ಬಾಲಕ ಮೃತ್ಯು

    ಕಾಸರಗೋಡು: ಶೌಚಾಲಯಕ್ಕೆ ಅಗೆಯಲಾಗಿದ್ದ ಹೊಂಡಕ್ಕೆ ಬಿದ್ದು ಆರು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಇಲ್ಲಿನ ಮಧೂರು ಮಂಜತ್ತಡ್ಕದ ಮುಹಮ್ಮದ್ ಸಾಜಿದ್ ಅವರ ಪುತ್ರ ಮುಹಮ್ಮದ್ ಅಯಾನ್ ಮೃತಪಟ್ಟವನು.ಆಟವಾಡುತ್ತಿದ್ದ ಬಾಲಕ ನಿರ್ಮಾಣ ಹಂತದ ಮನೆಯ ಶೌಚಾಲಯ ಗುಂಡಿಗೆ ಬಿದ್ದಿದ್ದು, ಬಾಲಕ ನಾಪತ್ತೆಯಾದುದರಿಂದ ಮನೆಯವರು ಹುಡುಕಾಡಿದಾಗ ನೀರು ತುಂಬಿದ ಹೊಂಡಕ್ಕೆ ಬಿದ್ದಿರುವುದು ಕಂಡುಬಂದಿದ್ದು, ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

  • ಐದು ವರ್ಷದ ಮಗಳ ಸಾವಿಗೆ ಕೊಲೆ ಪ್ರಕರಣ: ತಾಯಿ ಹಾಗೂ ಲಿವ್-ಇನ್ ಪ್ರಿಯಕರ ಪೊಲೀಸ್ ಬಲೆಗೆ
    , ,

    ಐದು ವರ್ಷದ ಮಗಳ ಸಾವಿಗೆ ಕೊಲೆ ಪ್ರಕರಣ: ತಾಯಿ ಹಾಗೂ ಲಿವ್-ಇನ್ ಪ್ರಿಯಕರ ಪೊಲೀಸ್ ಬಲೆಗೆ

    ಬೆಂಗಳೂರು : ರಾಜಧಾನಿಯ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷದ ಮುಗ್ಧ ಹೆಣ್ಣು ಮಗುವಿನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ತಿರುವು ಸಿಕ್ಕಿದೆ. ತನ್ನ ಖಾಸಗಿ ಜೀವನಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಸ್ವಂತ ಮಗಳನ್ನೇ ಕೊಲೆ ಮಾಡಿರುವ ಆರೋಪದ ಮೇಲೆ 39 ವರ್ಷದ ಮಹಿಳೆ ಹಾಗೂ ಆಕೆಯ ಲಿವ್-ಇನ್ ಸಂಗಾತಿಯ ವಿರುದ್ಧ ಪೊಲೀಸರು ಶನಿವಾರ ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ.ವೆನ್ನೆಲಾ (5) ಕೊಲೆಯಾದ ದುರ್ದೈವಿ ಬಾಲಕಿ. ಮಗುವಿನ ತಂದೆ ನೀಡಿದ ದೂರಿನ ಮೇರೆಗೆ ಆತನ ಪರಿತ್ಯಕ್ತ ಪತ್ನಿ…

    Continue Reading

  • ಕೆ.ಸಿ ರೋಡ್ ಸಹಕಾರ ಸಂಘ ದರೋಡೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
    , ,

    ಕೆ.ಸಿ ರೋಡ್ ಸಹಕಾರ ಸಂಘ ದರೋಡೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

    ಉಳ್ಳಾಲ: ತೊಕ್ಕೊಟ್ಟು ಸಮೀಪದ ಕೆ.ಸಿ ರೋಡ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 2025ರ ಜನವರಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಗುಜರಾತ್ ಸೂರತ್ ನಿವಾಸಿ ಧರ್ಮ್ ಬೀರ್ ಬೀರೇಂದ್ರ ಸಿಂಗ್ ಯಾನೆ ಧರ್ಮವೀರ್ ಸಿಂಗ್ ಬಂಧಿತ ಆರೋಪಿ. ಈತ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಈ ತಂಡವು ದೊರೆತ ಖಚಿತ ಮಾಹಿತಿಯಂತೆ ತಲೆಮರೆಸಿಕೊಂಡಿದ್ದ ಧರ್ಮ್ ಬೀರ್ ಬೀರೇಂದ್ರ ಸಿಂಗ್ ಯಾನೆ ಧರ್ಮವೀರ್…

    Continue Reading

  • ಜಾಮೀನು ರಹಿತ ವಾರಂಟ್‌ಗೂ ಕ್ಯಾರೆ ಎನ್ನದ ಆರೋಪಿಗಳು ಅಂದರ್ – ಮಂಗಳೂರು ಪೊಲೀಸರ ಕಾರ್ಯಾಚರಣೆ
    , ,

    ಜಾಮೀನು ರಹಿತ ವಾರಂಟ್‌ಗೂ ಕ್ಯಾರೆ ಎನ್ನದ ಆರೋಪಿಗಳು ಅಂದರ್ – ಮಂಗಳೂರು ಪೊಲೀಸರ ಕಾರ್ಯಾಚರಣೆ

    ಮಂಗಳೂರು: ಜಾಮೀನು ರಹಿತ ವಾರಂಟ್ ಹೊರಡಿಸಿದ್ದರೂ ಪದೇ ಪದೇ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೂರ್ವ ಪೊಲೀಸರು ಸ್ಥಳೀಯ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ.ಬಂಧಿತರನ್ನು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಿವಂಗತ ರಂಗಸ್ವಾಮಿ ಅವರ ಪುತ್ರ ಶ್ರೀನಿವಾಸ ಸಿರಾಯನ್‌ (56), ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದೊಡ್ಡಗಾವನಹಳ್ಳಿ ಗ್ರಾಮದ ಚಂದ್ರೇಗೌಡ ಅವರ ಪುತ್ರ ಉಪೇಂದ್ರ ಡಿಸಿ ಅಲಿಯಾಸ್ ಅಭಿಷೇಕ್ (28) ಎಂದು ಗುರುತಿಸಲಾಗಿದೆ.ಪೊಲೀಸರ ಪ್ರಕಾರ, ಶ್ರೀನಿವಾಸ ಸಿರಾಯನ್ ಮಂಗಳೂರು ಪೂರ್ವ ಪೊಲೀಸ್…

    Continue Reading

  • ಕುಟುಂಬಕ್ಕೆ ನೆರವಾಗಲು ಹೊರಟಿದ್ದ ಮಕ್ಕಳಿಗೆ ವಿಧಿಯ ಕ್ರೂರ ಆಟ; ಇಬ್ಬರು ಸಹೋದರರ ಸಾವು
    , ,

    ಕುಟುಂಬಕ್ಕೆ ನೆರವಾಗಲು ಹೊರಟಿದ್ದ ಮಕ್ಕಳಿಗೆ ವಿಧಿಯ ಕ್ರೂರ ಆಟ; ಇಬ್ಬರು ಸಹೋದರರ ಸಾವು

    ಕಾಸರಗೋಡು : ಶಾಲಾ ರಜಾದಿನಗಳಲ್ಲಿ ಮನೆಯವರಿಗೆ ಹೊರೆಯಾಗದೆ ಸ್ವಂತ ಖರ್ಚಿಗೆ ಹಣ ಗಳಿಸಬೇಕೆಂಬ ಮುಗ್ಧ ಬಾಲಕರ ಸಾಹಸವೊಂದು ಶನಿವಾರ ಸಂಜೆ ಸಂಭವಿಸಿದ ಭೀಕರ ತಡೆಗೋಡೆ ಕುಸಿತದೊಂದಿಗೆ ಕರುಣಾಜನಕ ದುರಂತವಾಗಿ ಕೊನೆಗೊಂಡಿದೆ. ತಡೆಗೋಡೆ ಕುಸಿದು ಬಿದ್ದ ಪರಿಣಾಮ ಇಬ್ಬರು ಮುಗ್ಧ ಸಹೋದರರು ಮೃತಪಟ್ಟು, ಮತ್ತೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ದೇಲಂಪಾಡಿ ಪಂಚಾಯತ್‌ನ ಅಡೂರ್ ಬಳಿ ನಡೆದಿದೆ.ಮೃತರನ್ನು ಸ್ಥಳೀಯ ಚಾಲಕ ಅಬುಬಕರ್ ಮತ್ತು ಸೌಧಾ ದಂಪತಿಯ ಮಕ್ಕಳಾದ ಮುನ್ಸೀರ್ (9) ಮತ್ತು ಮುಸಮ್ಮಿಲ್ (14) ಎಂದು ಗುರುತಿಸಲಾಗಿದೆ.…

    Continue Reading

  • ಲಿಫ್ಟ್ ನಿರೀಕ್ಷೆಯಲ್ಲಿ ನಿಂತಿದ್ದ ಅಜ್ಜಿ-ಮೊಮ್ಮಗನಿಗೆ ಕಾದಿತ್ತು ಭೀಕರ ಅಂತ್ಯ
    , ,

    ಲಿಫ್ಟ್ ನಿರೀಕ್ಷೆಯಲ್ಲಿ ನಿಂತಿದ್ದ ಅಜ್ಜಿ-ಮೊಮ್ಮಗನಿಗೆ ಕಾದಿತ್ತು ಭೀಕರ ಅಂತ್ಯ

    ಖೈರತಾಬಾದ್‌ನ ಆನಂದ್ ನಗರ ಕಾಲೋನಿಯ ‘ಭವನ ಅಪಾರ್ಟ್‌ಮೆಂಟ್ಸ್’ನಲ್ಲಿ ಈ ಧಾರುಣ ಘಟನೆ ನಡೆದಿದೆ. ರಾಧಾ (58) ಮೃತಪಟ್ಟ ದುರ್ದೈವಿ. ಅವರ 13 ತಿಂಗಳ ಮೊಮ್ಮಗ ಜೋಯಲ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ, ರಾಧಾ ಅವರು ತಮ್ಮ ಮೊಮ್ಮಗ ಜೋಯಲ್‌ನನ್ನು ಎತ್ತಿಕೊಂಡು ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಲ್ಲಿದ್ದರು. ಕೆಳಗೆ ಹೋಗುವ ಉದ್ದೇಶದಿಂದ ಅವರು ಲಿಫ್ಟ್ ಬಟನ್ ಒತ್ತಿದ್ದಾರೆ. ಆದರೆ, ಲಿಫ್ಟ್‌ನ ಮುಖ್ಯ ಕ್ಯಾಬಿನ್ 5ನೇ ಮಹಡಿಗೆ ತಲುಪುವ ಮೊದಲೇ, ತಾಂತ್ರಿಕ ದೋಷದಿಂದಾಗಿ ಲಿಫ್ಟ್‌ನ ಹೊರಗಿನ…

    Continue Reading

  • ಮಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಸಿಸಿಬಿ ಮಿಂಚಿನ ದಾಳಿ: ಇಬ್ಬರು ಅರೆಸ್ಟ್
    , ,

    ಮಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಸಿಸಿಬಿ ಮಿಂಚಿನ ದಾಳಿ: ಇಬ್ಬರು ಅರೆಸ್ಟ್

    ಮಂಗಳೂರು: ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿಸಿದ್ದಾರೆ.ಆರೋಪಿಗಳಿಂದ ಒಟ್ಟು 164 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾದಕವಸ್ತುವಿನ ಒಟ್ಟು ಮೌಲ್ಯ ಸುಮಾರು 16,40,000 ಎಂದು ಅಂದಾಜಿಸಲಾಗಿದೆ.ಪ್ರಕರಣ -1ಬೆಂಗಳೂರು ನಗರದಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸಿ ಮಂಗಳೂರು ನಗರಕ್ಕೆ ತಂದು ಹೊಯಿಗೆ ಬಜಾರ್ ಪರಿಸರದಲ್ಲಿರುವ ಮನೆಯಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ…

    Continue Reading

  • 18 ವರ್ಷಗಳ ಬಳಿಕ ಮನೆಗಳ್ಳತನ ಪ್ರಕರಣಕ್ಕೆ ಅಂತ್ಯ: ಆರೋಪಿಗೆ ಕಠಿಣ ಶಿಕ್ಷೆ
    , ,

    18 ವರ್ಷಗಳ ಬಳಿಕ ಮನೆಗಳ್ಳತನ ಪ್ರಕರಣಕ್ಕೆ ಅಂತ್ಯ: ಆರೋಪಿಗೆ ಕಠಿಣ ಶಿಕ್ಷೆ

    ಸುಳ್ಯ: ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಹಾಗೂ ಪೊಲೀಸರ ವಶದಿಂದ ತಪ್ಪಿಸಿಕೊಂಡಿದ್ದ ಎರಡು ಪ್ರತ್ಯೇಕ ಗಂಭೀರ ಪ್ರಕರಣಗಳ ವಿಚಾರಣೆ ನಡೆಸಿದ ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ (SCJ & JMFC) ನ್ಯಾಯಾಲಯವು ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಸುಳ್ಯದ ಅಜ್ಜಾವರ ನಿವಾಸಿ ಎ.ಎಂ. ಅಜೀಜ್ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ.ಅಪರಾಧಿ ಎ.ಎಂ. ಅಜೀಜ್ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ 2006ರಲ್ಲಿ ರಾತ್ರಿ ವೇಳೆ ಮನೆಗನ್ನ ಹಾಕಿ ಕಳ್ಳತನ…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed