Author: News Editor
-

ಬೆಳ್ತಂಗಡಿ: ಪತಿಯೇ ಪತ್ನಿಯ ಮೇಲೆ ಆ್ಯಸಿಡ್ ದಾಳಿ..!! ಊಟ ತಂದು ಕೊಡಲಿಲ್ಲ ಎಂದು ಸಿಟ್ಟಿಗೆದ್ದ ಗಂಡನಿಂದ ಕೃತ್ಯ
ಬೆಳ್ತಂಗಡಿ: ಪತಿಯೇ ಪತ್ನಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ಗಾಯಗೊಳಿಸಿದ ಆಘಾತಕಾರಿ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಪ್ಲೊಟ್ಟುನಲ್ಲಿ ನಡೆದಿದೆ. ಕುಪ್ಲೊಟ್ಟು ನಿವಾಸಿ ಲಿಂಗಪ್ಪ ಪ್ರಕರಣದ ಆರೋಪಿಯಾಗಿದ್ದು, ಆ್ಯಸಿಡ್ ದಾಳಿಗೊಳಗಾದ ಆತನ ಪತ್ನಿ ಸರೋಜ(44) ಎಂಬವರು ಗಾಯಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಸರೋಜಾ ಗಂಡ ಊಟ ಕೇಳಿದ ಸಂದರ್ಭದಲ್ಲಿ ಊಟವನ್ನು ನೀಡಿರಲಿಲ್ಲ. ಬಳಿಕ ಪಕ್ಕದ ಸಂಬಂಧಿಕರ ಮನೆಯಲ್ಲಿ ಊಟ ಮಾಡಿ ಬಂದು ಮಲಗಿದ ಸಂದರ್ಭದಲ್ಲಿ ರಬ್ಬರ್ ಶೀಟ್ ತಯಾರಿಸುವ ಆ್ಯಸಿಡ್ ಹಾಕಿ ದಾಳಿ ನಡೆಸಿದ್ದಾನೆ…
-

ಶಿಕ್ಷಣ ಸಂಸ್ಥೆ, ಹಾಸ್ಟೆಲ್ ಗಳಲ್ಲಿ ಪೊಲೀಸರ ದಿಢೀರ್ ತಪಾಸಣೆ: 31 ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ ದೃಢ
ಬೆಂಗಳೂರು: ಮಾದಕ ದ್ರವ್ಯ ಸೇವನೆ ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಗರದ 6 ಶಿಕ್ಷಣ ಸಂಸ್ಥೆಗಳು ಹಾಗೂ 2 ಹಾಸ್ಟೆಲ್ಗಳ ಮೇಲೆ ದಿಢೀರ್ ತಪಾಸಣೆ ನಡೆಸಿದ ಪೊಲೀಸರು, ಮಾದಕ ದ್ರವ್ಯ ಸೇವನೆ ಪತ್ತೆ ಹಚ್ಚುವ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಶಾಕಿಂಗ್ ಮಾಹಿತಿ ಎನ್ನುವಂತೆ 31 ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿರೋದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ಹಾಸ್ಟೆಲ್ ವ್ಯವಸ್ಥಾಪಕರ ಪೂರ್ವ ಅನುಮತಿಯೊಂದಿಗೆ ಪೊಲೀಸರು ಸುಮಾರು 1,200…
-

ಮಂಗಳೂರು: ಮ.ನ.ಪಾ 38ನೇ ಕಂಕನಾಡಿ ವಾರ್ಡನ ಹೆಲ್ತ್ ಇನ್ಸ್ಪೆಕ್ಟರ್ ನಿಂದ ಮಹಿಳಾ ಪೌರಕಾರ್ಮಿಕೆಗೆ ನಿರಂತರ ಲೈಂಗಿಕ ಕಿರುಕುಳ- ದೂರು ದಾಖಲು
ಮಂಗಳೂರು ಮಹಾನಗರ ಪಾಲಿಕೆಯ 38ನೇ ಕಂಕನಾಡಿ ವಾರ್ಡನ ಹಿರಿಯ ಹೆಲ್ತ್ ಇನ್ಸ್ಪೆಕ್ಟರ್ ಬಾಸ್ಕರ್ (ಆರೋಗ್ಯ ನಿರೀಕ್ಷಕ) ನಿಂದ ತಮ್ಮದೇ ವಾರ್ಡನಲ್ಲಿ ದುಡಿಯುತ್ತಿರುವ ಖಾಯಂ ಪೌರಕಾರ್ಮಿಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಧಮ್ಕಿ, ಮಾನಸಿಕ ಹಿಂಸೆ ನೀಡಿ ಕೆಲಸದಿಂದ ವಜಾಗೊಳಿಸುತ್ತೆನೆಂದು ನಿರಂತರ ಬೆದರಿಕೆ, ಅಸಭ್ಯ ವರ್ತನೆ, ಆವಾಚ್ಯ ಮತ್ತು ಆಶ್ಲೀಲವಾಗಿ ನಿಂದಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ನೊಂದ ಪೌರಕಾರ್ಮಿಕ ಮಹಿಳೆಯು ಪಾಂಡೆಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಠಾಣಾಧಿಕಾರಿಯು ಕಲಂ 74,…
-

ಪಡುಬಿದ್ರಿ: ಎಂ11ಎನರ್ಜಿ ಘಟಕ ಮುಚ್ಚಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ
ಪಡುಬಿದ್ರಿ : ನಂದಿಕೂರಿನಲ್ಲಿ ಕಾರ್ಯಾಚರಿಸುತ್ತಿರುವ ಬಯೋ ಡೀಸೆಲ್, ಪಾಮ್ ಆಯಿಲ್ ಹಾಗೂ ಗ್ಲಿಸರಿನ್ ಉತ್ಪಾದನಾ ಘಟಕ ಮೆಸರ್ಸ್ ಎಂ11 ಎನರ್ಜಿಟ್ರಾನ್ಸಿಸನ್ ಪ್ರೈವೆಟ್ ಲಿ.ನ್ನು ಮುಂದಿನ ಆದೇಶದವರೆಗೆ ಮುಚ್ಚುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ. ಕರ್ನಾಟಕ ವಾಟರ್ (ಪ್ರಿವೆನ್ಶನ್ ಆ್ಯಂಡ್ ಕಂಟ್ರೋಲ್ ಆಫ್ ಪೊಲ್ಯೂಶನ್) ಆ್ಯಕ್ಟ್ನ 34ನೇ ನಿಯಮದಡಿ ಈ ಘಟಕದ ಕಾರ್ಯಾಚರಣೆಯನ್ನು ನಿಲ್ಲಿಸಲು ಮಂಡಳಿ ನಿರ್ದೇಶನ ನೀಡಿದೆ. ನಂದಿಕೂರು ಕೈಗಾರಿಕಾ ಪ್ರದೇಶದ ಪ್ಲಾಟ್ ನಂ.155 ಮತ್ತು 169 ರಲ್ಲಿ ಈ ಘಟಕ ಕಾರ್ಯಾಚರಿಸುತ್ತಿತ್ತು. ಕಾಯ್ದೆಯ…
-

ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿಮುಟ್ಟಿಸಿದ್ದಾರೆ. ಬೆಂಗಳೂರಿನ 4 ಕಡೆ ಸೇರಿದಂತೆ ರಾಜ್ಯದ ಹಲವೆಡೆ ಇಂದು ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಕೆಆರ್ಐಡಿಎಲ್ ಚೀಫ್ ಎಂಜಿನಿಯರ್ ವಸಂತ್ ವಿ. ನಾಯಕ್, ಬಿಡಿಎ ವ್ಯಾಪ್ತಿಯ ಆರ್ಎಫ್ಒ ಡಾಲೇಶ್, ರೈತ ಸೇವಾ ಸಹಕಾರ ಸಂಘದ ಸಿಇಒ ಶಶಿಧರ್ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಯಾದಗಿರಿಯ ವಿದ್ಯುತ್ ಇಲಾಖೆಯ ಉಪ ವಿದ್ಯುತ್ ಪರಿವೀಕ್ಷಕ ವೀರೇಶ್ ಹಿರೇಮಠ, ಮಂಡ್ಯದ ಲೋಕೋಪಯೋಗಿ ಇಲಾಖೆಯ ಮಂಡ್ಯ ಉಪವಿಭಾಗದ ಎಎಇ ಎಸ್.ಸತೀಶ್, ಧಾರವಾಡದ ಹಿಂದುಳಿದ…
-

ಪುತ್ತೂರು: ಪಿಸ್ತೂಲ್ ತೋರಿಸಿ ಬೆದರಿಕೆ – ಯುವಕ ಬಂಧನ
ಪುತ್ತೂರು: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಪಿಸ್ತೂಲ್ ತೋರಿಸಿ ಗುಂಡು ಹೊಡೆಯಲು ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.ಪ್ರಕರಣದ ದೂರುದಾರರಾದ ಪುತ್ತೂರು ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ (42) ಅವರು ದಿನಾಂಕ 02-03-2026 ರಂದು ಮಧ್ಯಾಹ್ನ ಪುತ್ತೂರಿನಿಂದ ಕೂರ್ನಡ್ಕಕ್ಕೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಪುತ್ತೂರು ರಿಲ್ಯಾನ್ಸ್ ಮಾಲ್ ಬಳಿ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಸುಮಾರು 30 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬ ಪಿಸ್ತೂಲ್ ತೋರಿಸಿ ಗುಂಡು ಹೊಡೆಯಲು ಯತ್ನಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ…
-

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಟಿಪ್ಪರ್ ಲಾರಿಯಲ್ಲಿ ಮಣ್ಣು ಸಾಗಾಟ..!!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಾಣಿ ಹಾಗೂ ಬಿ.ಸಿ ರೋಡು ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ಲಾರಿ ಮೂಲಕ ಮಣ್ಣು ಸಾಗಿಸುತ್ತಿದ್ದ ಬಗ್ಗೆ ವರದಿಯಾಗಿದೆ. ಟಿಪ್ಪರ್ ಲಾರಿಯಲ್ಲಿ ಮಣ್ಣು ಸಾಗಿಸುವ ಸಂದರ್ಭ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಮಣ್ಣಿನ ಮೇಲೆ ಯಾವುದೇ ಟರ್ಪಲ್ ಹೊದಿಕೆ ಹಾಕಲಿಲ್ಲ.. ಟಿಪ್ಪರಿನ ಹಿಂಬದಿಯಿಂದ ಗಾಳಿಯ ಒತ್ತಡಕ್ಕೆ ಮಣ್ಣು ಮತ್ತು ಸಣ್ಣ ರೀತಿಯ ಮರಳು ಬೀಳುತ್ತಿದ್ದು ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಅಂತೆಯೇ ಟಿಪ್ಪರ್ ಚಾಲಕರು ಅತಿ ವೇಗದ ಚಾಲನೆಯನ್ನು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು…
-

ಫರಂಗಿಪೇಟೆ: ನದಿಯಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆ!! ಅಂಚೆ ಕಚೇರಿ ನಿರ್ಲಕ್ಷ್ಯ?
ಫರಂಗಿಪೇಟೆ: ಪುದು ಗ್ರಾಮದ ನೇತ್ರಾವತಿ ನದಿಯಲ್ಲಿ ನೂರಾರು ಆಧಾರ್ ಕಾರ್ಡ್ಗಳು ಪತ್ತೆಯಾಗಿವೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಜನ ಪ್ರತಿನಿಧಿಗಳು ತನಿಖೆಗೆ ಒತ್ತಾಯಿಸಿದ್ದಾರೆ. ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮಾತನಾಡಿ, ನಿನ್ನೆ ಸಂಜೆ ನನಗೆ ಕರೆ ಬಂದಿದೆ. ನದಿಯಲ್ಲಿ ಹೋಗಿ ನೋಡುವಾಗ ಆಧಾರ್ ಕಾರ್ಡ್ನ ಬಂಡಲ್ ಇದೆ. ಇದು ಅಂಚೆ ಕಚೇರಿಯ ನಿರ್ಲಕ್ಷ್ಯ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
-

ಉಡುಪಿ: ಬಿಜೆಪಿ ಮುಖಂಡ ಮಂಜು ಕೊಳಗೆ ಚೂರಿ ಇರಿತ ಪ್ರಕರಣ- ನಾಲ್ವರು ಆರೋಪಿಗಳ ಬಂಧನ
ಉಡುಪಿ: ಹಿಂದೂ ಯುವಸೇನೆಯ ಮಾಜಿ ಜಿಲ್ಲಾಧ್ಯಕ್ಷ ಮಂಜುಕೊಳಗೆ ಕಳೆದ ರಾತ್ರಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಅಮೃತ್ ಭಂಡಾರಿ, ಪ್ರಜ್ಞೇಶ್, ಪುನಿತ್ ಪೂಜಾರಿ ಮತ್ತು ಅಭೀಜಿತ್ ಬಂಧಿತರು. ಮಾರ್ಚ್ 3ರಂದು ರಾತ್ರಿ ಸುಮಾರು 9.30ಕ್ಕೆ ಮಲ್ಪೆ ಬೀಚ್ ಬಳಿ ಸಮೀಪದ ಬ್ಲೂ ವೇಲ್ಸ್ ಗೆಸ್ಟ್ ಹೌಸ್ ಬಳಿಯಲ್ಲಿ ಮರಳಿನಲ್ಲಿ ಕುಳಿತಿದ್ದ ಸಂತೋಷ್ ಎ. ಅಮೀನ್ ಹಾಗೂ ಅವರ ಸ್ನೇಹಿತರಾದ ಮಂಜುನಾಥ ಸಾಲಿಯಾನ್ (ಮಂಜು ಕೊಳ), ಧನುಷ್, ಲತೀಶ್ ಮತ್ತು ವರುಣ್…
-

ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಯುವಕ ಅರೆಸ್ಟ್!!
ಮಂಗಳೂರು: “Support madi bro Ullal masjid hathira bomb blast madthini” ಇನ್ಸ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಕಾಮೆಂಟ್ ಮಾಡಿ ಧರ್ಮಗಳ ಮಧ್ಯೆ ದ್ವೇಷ ಹಾಗೂ ವೈಮನಸ್ಸು ಉಂಟುಮಾಡುವ ಪ್ರಯತ್ನ ನಡೆಸಿದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಮಂಗಳೂರು ನಗರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ. 41/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 196(2), 197(2), 299, 353(2) ಅನ್ವಯ ಪ್ರಕರಣ ದಾಖಲಾಗಿದೆ. ಬಂಧಿತನನ್ನು ಶಂಕರ್ ಮಸ್ತಪ್ಪ ಮೊಗೇರ್…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











