Category: ರಾಜ್ಯ
-

ಹನೂರು ಎನ್‌ಕೌಂಟರ್ ಪ್ರಕರಣ : ತನಿಖೆಗೆ CID ಎಂಟ್ರಿ, ತನಿಖೆ ಮತ್ತಷ್ಟು ಚುರುಕು
ಕಾವೇರಿ ವನ್ಯಧಾಮದಲ್ಲಿ ನಡೆದ ಬಹುಚರ್ಚಿತ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸಲ್ಲಿಕೆಯಾದ ಬೆನ್ನಲ್ಲೇ, ಇದೀಗ ಪ್ರಕರಣದ ಸಮಗ್ರ ತನಿಖೆಗಾಗಿ ರಾಜ್ಯ ಸಿಐಡಿ (CID) ತಂಡ ಅಖಾಡಕ್ಕಿಳಿದಿದೆ. ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರವು ತನಿಖೆಯ ಜವಾಬ್ದಾರಿಯನ್ನು ಸಿಐಡಿಗೆ ವಹಿಸಿದ್ದು, ಅಧಿಕಾರಿಗಳ ತಂಡ ಈಗಾಗಲೇ ಚಾಮರಾಜನಗರ ಜಿಲ್ಲೆಯ ಸಂಬಂಧಿತ ಸ್ಥಳಗಳಿಗೆ ಭೇಟಿ ನೀಡಿ ಬೀಡುಬಿಟ್ಟಿದೆ. ತನಿಖೆ ಚುರುಕುಗೊಳಿಸಲು ಒಟ್ಟು ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಅನುಕೂಲವಾಗುವಂತೆ ರಚಿಸಲಾಗಿರುವ ಈ ನಾಲ್ಕು ತಂಡಗಳಿಗೆ…
-

ಮಲಗಿದ್ದ ಪತ್ನಿಯ ಕತ್ತು ಹಿಸುಕಿ ಕೊಲೆಗೈದು ಹೃದಯಾಘಾತ ಎಂದು ಕಥೆ ಕಟ್ಟಿದ ಗಂಡ ಅರೆಸ್ಟ್
ಹೊನ್ನಾವರ: ಕುಡಿದ ಮತ್ತಿನಲ್ಲಿ ಪತ್ನಿಯನ್ನೇ ಕೊಂದು ಏನೂ ತಿಳಿಯದವನಂತೆ ‘ಹೃದಯಾಘಾತ’ದ ನಾಟಕವಾಡಿದ್ದ ಪತಿಯನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸರು ಬಂಧಿಸಿದ ಘಟನೆ ಹೊನ್ನಾವರ ತಾಲೂಕಿನ ದೊಡ್ಡಗುಂಡ ಗ್ರಾಮದಲ್ಲಿ ನಡೆದಿದೆ. ದೊಡ್ಡಗುಂಡ ಗ್ರಾಮದ ನಿವಾಸಿ ಗಣಪತಿ ಮಂಜುನಾಥ ನಾಯ್ಕ ಬಂಧಿತ ಆರೋಪಿ. ಮಂಗಲಾ ಗಣಪತಿ ನಾಯ್ಕ (27) ಕೊಲೆಯಾದವರು ಆರೋಪಿ ಗಣಪತಿ ಮದ್ಯ ಸೇವಿಸಿ ಮನೆಗೆ ಬಂದು ರಾತ್ರಿ ಪತ್ನಿ ಮಂಗಲಾ ಮಲಗಿದ್ದಾಗ ಆಕೆಯ ಕುತ್ತಿಗೆ ಹಿಚುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಪತ್ನಿ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡ ಆರೋಪಿ…
-

ಜೈಲಲ್ಲೇ ಸಿಗುತ್ತೆ ಸ್ಪೆಷಲ್ ಕ್ಯಾಟರಿಂಗ್: ಚಿಕನ್, ಮಟನ್‌ಗೆ ದುಪ್ಪಟ್ಟು ರೇಟ್! ಸೆಲ್‌ಗೆ ಬಾಡಿಗೆ, ಖೈದಿಗಳ ಪತ್ರ ವೈರಲ್
ಮಂಡ್ಯ ಜಿಲ್ಲಾ ಕಾರಾಗೃಹದ ಮತ್ತೊಂದು ಭೀಕರ ಕರ್ಮಕಾಂಡ ಬಯಲಾಗಿದೆ. ಜೈಲಿನಲ್ಲಿ ಸಕಲ ಸವಲತ್ತು, ಊಟ-ಉಪಚಾರ ಹಾಗೂ ಸೆಲ್‌ಗಳನ್ನು ಕಲ್ಪಿಸಲು ಪ್ರತ್ಯೇಕ ದರ ನಿಗದಿಪಡಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಚಾರಣಾಧೀನ ಖೈದಿಗಳು ಬರೆದಿದ್ದಾರೆ ಎನ್ನಲಾದ ‘ರೇಟ್ ಲಿಸ್ಟ್’ ಸಮೇತದ ದೂರು ಪತ್ರವೊಂದು ಇದೀಗ ಭಾರೀ ವೈರಲ್ ಆಗಿದೆ. ಜೈಲಾಧಿಕಾರಿ ಶಾಂತಮ್ಮ ಹಾಗೂ ಸಿಬ್ಬಂದಿಗಳಾದ ಅನಿಲ್, ಶಿವರಾಜ್ ಮತ್ತು ರವಿ ವಿರುದ್ಧ ಸುಮಾರು 80 ಕ್ಕೂ ಹೆಚ್ಚು ವಿಚಾರಣಾಧೀನ ಖೈದಿಗಳು ತಮ್ಮ ಯುಟಿಪಿ (UTP) ನಂಬರ್,…
-

ಆನ್‌ಲೈನ್ ತರಕಾರಿಗಳಿಗೆ ತಾಜಾವಾಗಿ ಕಾಣಲು ಕೆಮಿಕಲ್ ಸ್ಪ್ರೇ..! ಕ್ರಮದ ಎಚ್ಚರಿಕೆ ನೀಡಿದ ಸಚಿವ ಯು.ಟಿ. ಖಾದರ್
ಬೆಂಗಳೂರು: ಆನ್‌ಲೈನ್ ವೇದಿಕೆಗಳಲ್ಲಿ ಮಾರಾಟವಾಗುವ ತರಕಾರಿಗಳು ತಾಜಾವಾಗಿ ಕಾಣಲು ಅಪಾಯಕಾರಿ ರಾಸಾಯನಿಕ (ಕೆಮಿಕಲ್) ಸ್ಪ್ರೇ ಮಾಡುತ್ತಿರುವ ಕುರಿತು ದೂರುಗಳು ಕೇಳಿಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ. ಖಾದರ್ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಶೀಘ್ರದಲ್ಲೇ ಈ ಜಾಲದ ವಿರುದ್ಧ ಕಟ್ಟುನಿಟ್ಟಿನ ಚಟುವಟಿಕೆ ಆರಂಭಿಸಲಾಗುವುದು ಎಂದರು. ಇತ್ತೀಚೆಗೆ ರಾಜ್ಯದ ವಿವಿಧ…
-

ರಾಜ್ಯ ಸರ್ಕಾರದಿಂದ ಹೋಟೆಲ್, ಪುಡ್ ಉದ್ಯಮಗಳಿಗೆ ಮಾರ್ಗಸೂಚಿ ಪ್ರಕಟ, ಈ ನಿಯಮಗಳ ಪಾಲನೆ ಕಡ್ಡಾಯ
ಬೆಂಗಳೂರು: ರಾಜ್ಯಾದ್ಯಂತ ನಡೆಸಲಾದ ವಿಶೇಷ ಆಹಾರ ಸುರಕ್ಷತಾ ತಪಾಸಣಾ ಅಭಿಯಾನದ ವೇಳೆ ಹಲವು ಹೋಟೆಲ್‌ಗಳು ಹಾಗೂ ಆಹಾರ ಉದ್ದಿಮೆಗಳಲ್ಲಿ (FBOs) ಸ್ವಚ್ಛತೆ, ಸುರಕ್ಷತೆ ಮತ್ತು ನೈರ್ಮಲ್ಯದ ಲೋಪಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತಾಲಯವು ಎಲ್ಲಾ ಆಹಾರ ಉದ್ದಿಮೆದಾರರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಮತ್ತು ಸಲಹಾ ಪ್ರಕಟಣೆಯನ್ನು (Advisory) ಹೊರಡಿಸಿದೆ. ತಪಾಸಣೆಯ ವೇಳೆ ಕಂಡುಬಂದ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಉದ್ದಿಮೆದಾರರಿಗೆ ನಿಗದಿತ ಕಾಲಾವಕಾಶ ನೀಡಲಾಗಿದ್ದು, ನಂತರ ನಡೆಯುವ ಮರುತಪಾಸಣೆಯಲ್ಲಿ ನಿಯಮ…
-

ನಕಲಿ ಔಷಧ ಮಾರಾಟ ಕಿಂಗ್ ಪಿನ್ ಪ್ರಶಾಂತ್ ಅರೆಸ್ಟ್..!!
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೆಂಗಳೂರಿನ ನಕಲಿ ಮತ್ತು ಕಳಪೆ ಔಷಧ ಮಾರಾಟ ಜಾಲದ ಪ್ರಮುಖ ರೂವಾರಿ ನಾಗರಬಾವಿಯ ಪ್ರಶಾಂತ್ ಹಾಗೂ ಆತನ ಇಬ್ಬರು ಸಹಚರರು ಪಶ್ಚಿಮ ಏಷ್ಯಾದ ದೇಶವೊಂದರಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಬಳಸುವ ಔಷಧಗಳನ್ನು ಅಲ್ಲಿಂದ ಅತಿ ಕಡಿಮೆ ಬೆಲೆಗೆ ಖರೀದಿಸಿ, ಅಕ್ರಮವಾಗಿ ಭಾರತಕ್ಕೆ ಸಾಗಿಸಲು ಯತ್ನಿಸುತ್ತಿದ್ದಾಗ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ಸಹಚರರು ನೀಡಿದ ಮಾಹಿತಿ ಮೇರೆಗೆ ಕಿಂಗ್‌ಪಿನ್ ಪ್ರಶಾಂತ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಹತ್ವದ ವಿಚಾರವನ್ನು…
-

ರಾಜ್ಯದಲ್ಲಿ ಕಳಪೆ ತಿಂಡಿ, ಅವಧಿ ಮೀರಿದ ಮಾತ್ರೆ ತಡೆಗೆ ‘ವಾಚ್ ಟೀಮ್’- ಸಚಿವ ಯು.ಟಿ.ಖಾದರ್
ಮಂಗಳೂರು: ರಾಜ್ಯಾದ್ಯಂತ ನಕಲಿ ಮಾತ್ರೆಗಳ ಮಾರಾಟ ಹಾಗೂ ಹೋಟೆಲ್‌ಗಳಲ್ಲಿನ ಅಶುಚಿತ್ವದ ಆಹಾರ ಪೂರೈಕೆಗೆ ಶಾಶ್ವತ ಕಡಿವಾಣ ಹಾಕಲು ಸಾರ್ವಜನಿಕರ ಸಹಭಾಗಿತ್ವದ ವಿನೂತನ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಪ್ರತಿ ತಾಲೂಕು ವ್ಯಾಪ್ತಿಯಲ್ಲೂ ನಿವೃತ್ತ ಹಿರಿಯ ನಾಗರಿಕರನ್ನೊಳಗೊಂಡ ‘ವಾಚ್ ಟೀಮ್’ (ಕಣ್ಗಾವಲು ಸಮಿತಿ) ರಚಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮಂಗಳೂರಿನಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಲಾಯಿತು. ಏನಿದು ಹಿರಿಯರ ‘ವಾಚ್ ಟೀಮ್’? ಸದಸ್ಯರ ಆಯ್ಕೆ: 60 ವರ್ಷ ದಾಟಿದ ನಿವೃತ್ತ ವೈದ್ಯರು, ಪೌಷ್ಟಿಕತಜ್ಞರು, ಕಾಲೇಜು…
-

5 ಕೋಟಿಗೂ ಅಧಿಕ ನಕಲಿ ಔಷಧಿ ಜಪ್ತಿ, ಓರ್ವ ಅರೆಸ್ಟ್ : ಸಚಿವ ಯುಟಿ ಖಾದರ್ ಮಾಹಿತಿ
ಇಡೀ ರಾಜ್ಯವೇ ಬೆಚ್ಚಿ ಬೆಳಿಸುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಕಳಪೆ ಆಹಾರ ಬಳಿಕ ಇದೀಗ ನಕಲಿ ಔಷಧಿಗಳ ಸರದಿ ಮೆಡಿಕಲ್ ಶಾಪ್ಗಳಲ್ಲಿ ಸಿಗುವ ಔಷಧಿಗಳು ಎಷ್ಟು ಸೇಫ್ ಎನ್ನುವುದರ ಬಗ್ಗೆ ತಿಳಿದುಕೊಳ್ಳಲೇ ಬೇಕಾಗಿದೆ. ನಕಲಿ ಔಷಧಿಗಳ ತಯಾರಿಸಿ ರೋಗಿಗಳ ಜೀವದೊಂದಿಗೆ ಇದೀಗ ಚೆಲ್ಲಾಟ ಆಡುತ್ತಿದ್ದಾರೆ ಇದು ಇಡೀ ರಾಜ ಹಾಗೂ ದೇಶವೇ ಬೆಚ್ಚಿ ಬೆಳಿಸುವಂತಹ ಘಟನೆಯಾಗಿದ್ದು ಅಂತಹ ಒಂದು ಜಾಲ ಇದೀಗ ಪತ್ತೆಯಾಗಿದೆ. ಹೌದು ಬೆಂಗಳೂರಲ್ಲಿ ಸುಮಾರು 6 ಕೋಟಿ ನಕಲಿ ಔಷಧಿಯನ್ನು ವಶಕ್ಕೆ ಪಡೆಯಲಾಗಿದೆ ಎಲ್ಲಾ…
-

20,000 ಲಂಚ ಪಡೆಯುತ್ತಿದ್ದಾಗಲೇ ಪ್ರವಾಸೋದ್ಯಮ ಇಲಾಖೆ ಸಮಾಲೋಚಕ ಲೋಕಾಯುಕ್ತ ಬಲೆಗೆ
ಮೊಬೈಲ್ ಕ್ಯಾಂಟೀನ್‌ಗೆ ಸಂಬಂಧಿಸಿದ ಸರ್ಕಾರಿ ಪ್ರೋತ್ಸಾಹ ಧನ ಮಂಜೂರು ಮಾಡಲು 20 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಮಾಲೋಚಕನನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಜಿಲ್ಲಾ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಲಕಸಾಬ್ ನದಾಫ್ ಲೋಕಾಯುಕ್ತ ಬಲೆಗೆ ಬಿದ್ದ ಆರೋಪಿ ಅಧಿಕಾರಿಯಾಗಿದ್ದಾನೆ. ಪ್ರಕರಣದ ಹಿನ್ನೆಲೆ ಮೊಬೈಲ್ ಕ್ಯಾಂಟೀನ್ ಪ್ರೋತ್ಸಾಹ ಧನಕ್ಕಾಗಿ ರವಿಚಂದ್ರ ಮೈದೂರು ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಸಹಾಯಧನ ಬಿಡುಗಡೆ ಮಾಡಲು ಅಧಿಕಾರಿ ಮಲಕಸಾಬ್ 20 ಸಾವಿರ ರೂ. ಲಂಚಕ್ಕೆ…
-

ಬೃಹತ್ ನಕಲಿ ಔಷಧಿ ಮರುಪ್ಯಾಕಿಂಗ್ ದಂಧೆ ಬಯಲು: ₹5 ಕೋಟಿ ಮೌಲ್ಯದ ವಸ್ತುಗಳು ಜಪ್ತಿ
ಬೆಂಗಳೂರು ದಕ್ಷಿಣ ತಾಲೂಕಿನ ಸಿ.ಕೆ.ತಾಂಡ್ಯ ಸಮೀಪದ ಫಾರ್ಮ್‌ಹೌಸ್‌ನಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಯುತ್ತಿದ್ದ ಭಾರೀ ನಕಲಿ ಔಷಧಿ ಮರುಪ್ಯಾಕಿಂಗ್ ಜಾಲವನ್ನು ಅಧಿಕಾರಿಗಳು ಭೇದಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ ಹಾಗೂ ಪೊಲೀಸರ ಜಂಟಿ ತಂಡ ನಡೆಸಿದ ಈ ಮೆಗಾ ಕಾರ್ಯಾಚರಣೆಯಲ್ಲಿ ಬರೋಬ್ಬರಿ ₹5 ಕೋಟಿ ಮೌಲ್ಯದ ಔಷಧಿಗಳು ಹಾಗೂ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಶಾಂತ್ ಎಂಬಾತ ಸ್ಥಳೀಯರಿಂದ ಫಾರ್ಮ್‌ಹೌಸ್ ಅನ್ನು ಗುತ್ತಿಗೆಗೆ (ಲೀಸ್) ಪಡೆದು, ಕಳೆದೊಂದು ವರ್ಷದಿಂದ ಈ ಕೃತ್ಯ ನಡೆಸುತ್ತಿದ್ದನು. ತೆಲಂಗಾಣ ಹಾಗೂ…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











