Category: ರಾಜ್ಯ

  • ಇನ್ಮುಂದೆ ಅಕ್ರಮ ಮರಳು ದಂಧೆಯಲ್ಲಿ ಸಿಕ್ಕಿಬಿದ್ರೆ ‘ಗೂಂಡಾ ಕೇಸ್’ ಫಿಕ್ಸ್.!
    ,

    ಇನ್ಮುಂದೆ ಅಕ್ರಮ ಮರಳು ದಂಧೆಯಲ್ಲಿ ಸಿಕ್ಕಿಬಿದ್ರೆ ‘ಗೂಂಡಾ ಕೇಸ್’ ಫಿಕ್ಸ್.!

    ರಾಜ್ಯಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ, ಸಂಗ್ರಹಣೆ ಹಾಗೂ ಸಾಗಾಣಿಕೆಯನ್ನು ಸಂಪೂರ್ಣವಾಗಿ ಮಟ್ಟಹಾಕಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಸಚಿವರ ಸೂಚನೆಯ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿ ಮತ್ತು ಐಜಿಪಿ) ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರು, ಪೊಲೀಸ್ ಮಹಾನಿರೀಕ್ಷಕರು, ಉಪ ಮಹಾನಿರೀಕ್ಷಕರು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಮಗ್ರ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಯು ನೈಸರ್ಗಿಕ ಪರಿಸರವನ್ನು ನಾಶಪಡಿಸುವುದಲ್ಲದೆ, ಕಾನೂನು ಸುವ್ಯವಸ್ಥೆ ಮತ್ತು ಸರ್ಕಾರದ ಖಜಾನೆಗೆ…

    Continue Reading

  • ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಲಂಚಕ್ಕೆ ಬೇಡಿಕೆ : ಲೋಕಾಯುಕ್ತ ಬಲೆಗೆ ಬಿದ್ದ ಮಕ್ಕಳ ರಕ್ಷಣಾಧಿಕಾರಿ
    , ,

    ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಲಂಚಕ್ಕೆ ಬೇಡಿಕೆ : ಲೋಕಾಯುಕ್ತ ಬಲೆಗೆ ಬಿದ್ದ ಮಕ್ಕಳ ರಕ್ಷಣಾಧಿಕಾರಿ

    ಹೊರಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ನೇಮಕಾತಿ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗದಗದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (DCPC) ರಫಿಕಾ ಹಳ್ಳೂರು ಹಾಗೂ ಅವರ ಚಾಲಕ ಮೌಲಾನಾ ಎಂಬುವವರು ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹುದ್ದೆ ಕೊಡಿಸಲು ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಅಧಿಕಾರಿಗಳು ಇಬ್ಬರನ್ನೂ ರೆಡ್‌ಹ್ಯಾಂಡ್‌ ಆಗಿ ವಶಕ್ಕೆ ಪಡೆದಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿರುವ ಬಾಲಮಂದಿರಕ್ಕೆ ಕಂಪ್ಯೂಟರ್ ಆಪರೇಟರ್ ನೇಮಕ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಯೊಬ್ಬರಿಂದ ರಫಿಕಾ ಹಳ್ಳೂರು…

    Continue Reading

  • ಕರ್ನಾಟಕದಲ್ಲಿ ಬೃಹತ್ ನಕಲಿ ಪಿಎಚ್‌ಡಿ ಹಗರಣ ಬಯಲು: 249 ಅತಿಥಿ ಉಪನ್ಯಾಸಕರು ಸೇವೆಯಿಂದ ವಜಾ
    ,

    ಕರ್ನಾಟಕದಲ್ಲಿ ಬೃಹತ್ ನಕಲಿ ಪಿಎಚ್‌ಡಿ ಹಗರಣ ಬಯಲು: 249 ಅತಿಥಿ ಉಪನ್ಯಾಸಕರು ಸೇವೆಯಿಂದ ವಜಾ

    ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಕಲಿ ಹಾಗೂ ಅಮಾನ್ಯ ಪಿಎಚ್‌ಡಿ (PhD) ಪ್ರಮಾಣಪತ್ರಗಳನ್ನು ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಬೃಹತ್ ನೇಮಕಾತಿ ಅಕ್ರಮವನ್ನು ಕಾಲೇಜು ಶಿಕ್ಷಣ ಇಲಾಖೆ ಬಯಲಿಗೆಳೆದಿದೆ. ವಿಶ್ವವಿದ್ಯಾಲಯಗಳ ತನಿಖೆಯಿಂದ ಈ ಅಕ್ರಮ ದೃಢಪಟ್ಟಿದ್ದು, ಅಕ್ರಮ ಎಸಗಿದ ಒಟ್ಟು 249 ಅತಿಥಿ ಉಪನ್ಯಾಸಕರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಲು, ಭವಿಷ್ಯದ ನೇಮಕಾತಿಗಳಿಂದ ಖಾಯಂ ಆಗಿ ಬ್ಲ್ಯಾಕ್‌ಲಿಸ್ಟ್ (ಕಪ್ಪುಪಟ್ಟಿ) ಮಾಡಲು ಹಾಗೂ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರ್ಕಾರ ಆದೇಶಿಸಿದೆ. ವಿಶ್ವವಿದ್ಯಾಲಯಗಳ ಪರಿಶೀಲನೆಯಲ್ಲಿ ಅಕ್ರಮ ಬಯಲು: 2025-26ನೇ…

    Continue Reading

  • ಹೆಣ್ಣು ಮಗುವೆಂದು 13 ದಿನದ ಕಂದಮ್ಮನನ್ನು ಸಂಪ್‌ಗೆ ಎಸೆದು ಕೊಂದ ರಾಕ್ಷಸ ತಂದೆ
    ,

    ಹೆಣ್ಣು ಮಗುವೆಂದು 13 ದಿನದ ಕಂದಮ್ಮನನ್ನು ಸಂಪ್‌ಗೆ ಎಸೆದು ಕೊಂದ ರಾಕ್ಷಸ ತಂದೆ

    ಹೆಣ್ಣು ಮಗು ಹುಟ್ಟಿತೆಂಬ ಒಂದೇ ಕಾರಣಕ್ಕೆ ಸ್ವಂತ ತಂದೆಯೇ ತನ್ನ 13 ದಿನದ ಕಂದಮ್ಮನನ್ನು ನೀರಿನ ಸಂಪ್‌ಗೆ ಎಸೆದು ಕ್ರೂರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ ನಡೆದಿದೆ. ಹುಡುಕಾಡುವ ನಾಟಕವಾಡಿದ್ದ ಆರೋಪಿ ಸ್ಥಳೀಯ ನಿವಾಸಿಗಳಾದ ಇಮ್ರಾನ್ ಹಾಗೂ ಮುಸ್ಕಾನ್ ದಂಪತಿಗೆ ಕೇವಲ 13 ದಿನಗಳ ಹಿಂದೆಯಷ್ಟೇ ಹೆಣ್ಣು ಮಗು ಜನಿಸಿತ್ತು. ಆದರೆ ಹೆಣ್ಣು ಮಗು ಹುಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದ ತಂದೆ ಇಮ್ರಾನ್, ಬುಧವಾರ (ಜುಲೈ 22) ತಡರಾತ್ರಿ ಕುಟುಂಬಸ್ಥರೆಲ್ಲರೂ ನಿದ್ರಿಸುತ್ತಿದ್ದ ವೇಳೆ ರಾಕ್ಷಸ ಕೃತ್ಯ…

    Continue Reading

  • ದಂಪತಿ ಮಧ್ಯೆ ಕಲಹವಿದ್ದರೂ ತಂದೆ, ಮಗಳ ಉನ್ನತ ಶಿಕ್ಷಣ ವೆಚ್ಚ ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ
    ,

    ದಂಪತಿ ಮಧ್ಯೆ ಕಲಹವಿದ್ದರೂ ತಂದೆ, ಮಗಳ ಉನ್ನತ ಶಿಕ್ಷಣ ವೆಚ್ಚ ನಿರಾಕರಿಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ

    ಪತಿ ಹಾಗೂ ಪತ್ನಿ ನಡುವೆ ಕೌಟುಂಬಿಕ ಭಿನ್ನಾಭಿಪ್ರಾಯ ಅಥವಾ ಕಲಹಗಳಿದ್ದ ಮಾತ್ರಕ್ಕೆ, ಉನ್ನತ ಶಿಕ್ಷಣ ಪಡೆಯುತ್ತಿರುವ ಪ್ರಾಪ್ತ ವಯಸ್ಸಿನ ಮಗಳ ವ್ಯಾಸಂಗದ ವೆಚ್ಚವನ್ನು ಭರಿಸಲು ತಂದೆ ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಮಕ್ಕಳಿಗೆ 18 ವರ್ಷ ತುಂಬಿ ಪ್ರಾಪ್ತ ವಯಸ್ಕರಾದ ತಕ್ಷಣವೇ ಅವರಿಗೆ ಮೂಲಭೂತ ಸೌಕರ್ಯ, ಆರೋಗ್ಯ ಮತ್ತು ಶಿಕ್ಷಣ ಒದಗಿಸುವ ಹೆತ್ತವರ ಬಾಧ್ಯತೆ ಹಾಗೂ ನೈತಿಕ ಕರ್ತವ್ಯ ಮುಗಿಯುವುದಿಲ್ಲ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ. ಸ್ನಾತಕೋತ್ತರ ವೈದ್ಯಕೀಯ…

    Continue Reading

  • ಇನ್ಮುಂದೆ ರಾಜ್ಯದ ಹೆದ್ದಾರಿಯಲ್ಲಿ ಅಪರಿಚಿತ ವ್ಯಕ್ತಿಗೆ ಅಪಘಾತವಾದ್ರೆ ಉಚಿತ ಚಿಕಿತ್ಸೆ: ಸಚಿವ ಯು.ಟಿ.ಖಾದರ್‌ ಘೋಷಣೆ
    ,

    ಇನ್ಮುಂದೆ ರಾಜ್ಯದ ಹೆದ್ದಾರಿಯಲ್ಲಿ ಅಪರಿಚಿತ ವ್ಯಕ್ತಿಗೆ ಅಪಘಾತವಾದ್ರೆ ಉಚಿತ ಚಿಕಿತ್ಸೆ: ಸಚಿವ ಯು.ಟಿ.ಖಾದರ್‌ ಘೋಷಣೆ

    ರಾಜ್ಯದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾಗುವ ಅಪರಿಚಿತ ವ್ಯಕ್ತಿಗಳು ಸೇರಿದಂತೆ ಪ್ರತಿಯೊಬ್ಬ ಸಂತ್ರಸ್ತನಿಗೂ ತಕ್ಷಣ ಉಚಿತ ತುರ್ತು ವೈದ್ಯಕೀಯ ನೆರವು ನೀಡುವ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಸಚಿವ ಯು.ಟಿ. ಖಾದರ್ ಪ್ರಕಟಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಟ್ರಾಮಾ ಕೇರ್ ಸೆಂಟರ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಜೀವ ರಕ್ಷಣೆಗೆ ಆದ್ಯತೆ ನೀಡುವ ಈ ನೂತನ ಯೋಜನೆಯ ರೂಪುರೇಷೆಗಳನ್ನು ಹಂಚಿಕೊಂಡರು. ಮೊದಲ 7 ದಿನ ₹2.5 ಲಕ್ಷದವರೆಗೆ ಸಂಪೂರ್ಣ ಉಚಿತ ಚಿಕಿತ್ಸೆ ಈ ನೂತನ…

    Continue Reading

  •  ₹30,000 ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಸೆಸ್ಕಾಂ ಎಇ
    , ,

     ₹30,000 ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಸೆಸ್ಕಾಂ ಎಇ

    ಹೊಸದಾಗಿ ನಿರ್ಮಿಸಿದ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರಿ ನಿಯಮಿತ ಶುಲ್ಕದ ಹೊರತಾಗಿಯೂ ಭಾರಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸೆಸ್ಕಾಂ ಸಹಾಯಕ ಎಂಜಿನಿಯರ್ (AE) ಒಬ್ಬರು ಈಗ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ.  ಮಂಡ್ಯದ ಸೆಸ್ಕಾಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸ್ ಬಂಧಿತ ಅಧಿಕಾರಿಯಾಗಿದ್ದು, ದೂರುದಾರರಿಂದ ಮುಂಗಡ ಹಣ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕರೊಬ್ಬರು ತಮ್ಮ ನೂತನ ಮನೆಗೆ ವಿದ್ಯುತ್ ಸಂಪರ್ಕ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ನಿಯಮಾನುಸಾರ ಪಾವತಿಸಬೇಕಾದ…

    Continue Reading

  • ಉದ್ಯಮಿಯಿಂದ 1 ಕೋಟಿ ರೂ. ಲಂಚ ಪಡೆದ ಜಿಎಸ್‌ಟಿ ಗುಪ್ತಚರ ಅಧಿಕಾರಿ- FIR ದಾಖಲು
    ,

    ಉದ್ಯಮಿಯಿಂದ 1 ಕೋಟಿ ರೂ. ಲಂಚ ಪಡೆದ ಜಿಎಸ್‌ಟಿ ಗುಪ್ತಚರ ಅಧಿಕಾರಿ- FIR ದಾಖಲು

    ಉದ್ಯಮಿಯೊಬ್ಬರಿಂದ ಬರೋಬ್ಬರಿ 1 ಕೋಟಿ ರೂಪಾಯಿ ಲಂಚ ಪಡೆದಿರುವ ಆರೋಪ ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್‌ಟಿ ಇಂಟೆಲಿಜೆನ್ಸ್ (DGGI) ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಕೇಳಿಬಂದಿದ್ದು, ಕೇಂದ್ರೀಯ ತನಿಖಾ ದಳ (CBI) ಭ್ರಷ್ಟಾಚಾರದ ಪ್ರಕರಣ ದಾಖಲಿಸಿದೆ. ಜಿಎಸ್ ಟಿ ಅಧಿಕಾರಿ 21 ಕೋಟಿ ರೂಪಾಯಿ ಮೌಲ್ಯದ ಜಿಎಸ್‌ಟಿ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಮೈಸೂರಿನ ಉದ್ಯಮಿಯೊಬ್ಬರಿಂದ ಬರೋಬ್ಬರಿ 1 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಗಳೂರಿನ ಕೇಂದ್ರ ಜಿಎಸ್‌ಟಿ ಘಟಕದ ಸೀನಿಯರ್ ಇಂಟೆಲಿಜೆನ್ಸ್ ಆಫೀಸರ್ ಪ್ರವೀಣ್ ಕುಮಾರ್…

    Continue Reading

  • ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ಆರೋಪಿ ಸಿನಿಮಾ ಶೈಲಿಯಲ್ಲಿ ಪರಾರಿ..!!
    ,

    ಜೈಲಿಗೆ ಕರೆದೊಯ್ಯುತ್ತಿದ್ದ ವೇಳೆ ಆರೋಪಿ ಸಿನಿಮಾ ಶೈಲಿಯಲ್ಲಿ ಪರಾರಿ..!!

    ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ವಿಧಿಸಿದ ಬೆನ್ನಲ್ಲೇ, ಆರೋಪಿಯೊಬ್ಬನನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ (Central Jail) ಕರೆದೊಯ್ಯುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ. ಹೊಸನಗರ ತಾಲೂಕಿನ ಆಡುಗೋಡಿ ಗ್ರಾಮದ ನಿವಾಸಿಯಾದ ವೆಂಕಟೇಶ್ (36) ಎಂಬಾತನೇ ಸಿಬ್ಬಂದಿ ವಶದಿಂದ ಎಸ್ಕೇಪ್ ಆಗಿರುವ ಆರೋಪಿಯಾಗಿದ್ದಾನೆ. ಅಕ್ರಮ ನಾಟಾ ಸಾಗಾಟದ ಆರೋಪಿ ವೆಂಕಟೇಶ್ ಅರಣ್ಯ ಇಲಾಖೆಯ ಅಕ್ರಮ ನಾಟಾ (ಲಾಟು) ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ…

    Continue Reading

  • ರಾಜ್ಯದಲ್ಲಿ ಮತ್ತೆ ಕೊರೋನಾ ಭೀತಿ – 32 ಜನರಲ್ಲಿ ಸೋಂಕು ದೃಢ
    ,

    ರಾಜ್ಯದಲ್ಲಿ ಮತ್ತೆ ಕೊರೋನಾ ಭೀತಿ – 32 ಜನರಲ್ಲಿ ಸೋಂಕು ದೃಢ

    ಬೆಂಗಳೂರು: ಆಂಧ್ರಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ರಾಜ್ಯದಲ್ಲೂ ಈಗಾಗಲೇ 32ಕ್ಕೂ ಹೆಚ್ಚು ಜನರಿಗೆ ಕೊರೋನಾ ಪಾಸಿಟಿವ್ ಬಂದಿರುವುದು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಏರಿಕೆಯಾಗುತ್ತಿರುವುದು ವರದಿಯಾಗಿದ್ದು, ಜೂನ್ ತಿಂಗಳ ಅವಧಿಯಲ್ಲಿ ಕೇವಲ 14 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಆದರೆ ಜುಲೈ ತಿಂಗಳ ಕಳೆದ ಕೇವಲ ಹತ್ತು ದಿನಗಳಲ್ಲೇ ಈ ಸಂಖ್ಯೆ 32ಕ್ಕೆ ತಲುಪಿದೆ. ಒಟ್ಟು 193 ಶಂಕಿತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಈ 32 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.…

    Continue Reading

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed