ಮಂಗಳೂರು : ಗೂಡ್ಸ್ ಟೆಂಪೋವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರಿನ ಪಡೀಲ್ ಸಮೀಪ ಸಂಭವಿಸಿದೆ. ಸಚ್ಚೇರಿಪೇಟೆಯ ಕುದ್ರೋಟ್ ನಿವಾಸಿ, ಸಜೇಶ್ ಪೂಜಾರಿ ಮೃತ ದುರ್ದೈವಿ.
ಸಜೇಶ್, ಮಂಗಳೂರಿನ ಶೋರೂಮ್ ಒಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ತನ್ನ ಬೈಕ್ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಪಡೀಲ್ ಸಮೀಪ ತಿರುವಿನಲ್ಲಿ ಟೆಂಪೋ ಡಿಕ್ಕಿ ಹೊಡೆದಿದ್ದು, ಬೈಕ್ ಸಮೇತ ರಸ್ತೆಗೆ ಬಿದ್ದ ಸಜೇಶ್ ಗಂಭೀರವಾಗಿ ಗಾಯಗೊಂಡಿದ್ದ ಸಜೇಶ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಸಜೇಶ್ ಸಣ್ಣ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದರು. ಐದು ತಿಂಗಳ ಹಿಂದೆಯಷ್ಟೇ ಹೊಸ ಮನೆಯೊಂದನ್ನು ಕಟ್ಟಿ ಒಬ್ಬರೇ ವಾಸಿಸುತ್ತಿದ್ದ ಎನ್ನಲಾಗಿದೆ.
