ಉಡುಪಿ ಜಿಲ್ಲೆಯ ಕೆಮ್ಮಣ್ಣು ಪಡು ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಸರೋವರ ಬಾರ್ & ರೆಸ್ಟೋರೆಂಟ್ ವಾಣಿಜ್ಯ ಕಟ್ಟಡದ ಕಾಮಗಾರಿಯು ಭರದಿಂದ ಸಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬರುತ್ತಿದ್ದು ಗ್ರಾಮ ಪಂಚಾಯತ್ ಕಾಮಗಾರಿ ತಡೆ ನೋಟಿಸ್ ಕೊಟ್ಟರು ಡೋಂಟ್ ಕೇರ್ ಎಂದು ಮಾಲಿಕರು ಕಾಮಗಾರಿ ನಡೆಸುತ್ತಿದ್ದರೆ.
ಪರವಾನಿಗೆ ಪಡೆಯದೇ ಕಟ್ಟಡ ನಿರ್ಮಾಣ ಬಗ್ಗೆ ನ್ಯಾಯಾಲಯವು ತಕ್ಷಣ ಕಾಮಗಾರಿ ಸ್ಥಗಿತಗೊಳಿಸಿ ಎಂದು ಆದೇಶ ನೀಡಲಾಗಿದೆ. ಆದರೂ ಕಬ್ಬಿಣದ ರಾಡ್ ಅಳವಡಿಸಿ ಯಾವುದೇ ನಿಯಮ ಪಾಲಿಸದೆ ರಾತ್ರಿ ಹಗಲು ಅನಧಿಕೃತವಾಗಿ ಕಟ್ಟುತ್ತಿದ್ದಾರೆ. ಇದಕ್ಕೆ ಪ್ರಭಾವಿ ರಾಜಕೀಯ ನಾಯಕರ ಸಹಕಾರ ಇದೆ ಎಂದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.
ಏನೇ ಆದರೂ ಅಕ್ರಮ ಕಟ್ಟಡ ನಿರ್ಮಾಣ ಕಾನೂನು ಬಾಹಿರ, ನ್ಯಾಯಾಲಯ ಮತ್ತು ಪಂಚಾಯತ್ ಅಕ್ರಮ ಕಟ್ಟಡ ಎಂದು ಪರಿಗಣಿಸಿದರು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವೇ ಸರಿ.
