ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ( ಮುಡಾ) ದ ಮಾಜಿ ಆಯುಕ್ತರ ವಾಹನ ಡ್ರೈವರ್ ಗಳು ಈಗ ಬಹುದೊಡ್ಡ ಬ್ರೋಕರ್ ಗಳಾಗಿ ಮುಡಾದ ಒಳಗೆ ತುಂಬಿದ್ದಾರೆ.
ಈ ದಲ್ಲಾಳಿಗಳ ಹಾವಲಿಯಿಂದ ಇಲಾಖೆಯಲ್ಲಿ ನಿಯಮ ಬಾಹಿರ ಅತಿಹೆಚ್ಚು ವ್ಯವಹಾರ ದಲ್ಲಾಳಿ ಮತ್ತು ಅಧಿಕಾರಿಗಳ ನಡುವೆ ಲಂಚದಿಂದ ನಡೆಯುತ್ತಿದೆ.
ಈ ವ್ಯವಸ್ಥೆಯಿಂದ ಸಾಮಾನ್ಯ ಜನರ ಕೆಲಸಗಳು ಮೂಲೆಗುಂಪುಯಾಗಿವೆ. ಕಂತೆ ಕಂತೆ ಹಣ ನೀಡುವವರ ಪೈಲ್ ಗಳು ಅತೀ ವೇಗವಾಗಿ ಮುಂದುವರಿದು ಆ ಕೆಲಸಗಳು ತಕ್ಷಣ ಮಾತ್ರದಲ್ಲಿ ನಡೆಯುತ್ತದೆ. ಇದರಿಂದಾಗಿ ಸಾಮಾನ್ಯ ಜನರು ಕಛೇರಿಗೆ ಸುತ್ತಾಡುವುದೆ ಆಗಿದೆ.
ಲೋಕಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮುಡಾದಿಂದ ಬ್ರೋಕರ್ ಗಳನ್ನು ಹೊರಕ್ಕೆದಬ್ಬಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಜನಸಾಮಾನ್ಯರ ಒಕ್ಕೊರಲಿನ ಕೊಗಗಾಗಿದೆ.
