ಮಂಗಳೂರು: ಹಳೆ ಬಂದರಿನಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಬಂದರು ಪ್ರಾಧಿಕಾರದಿಂದ ಅರ್ಜಿ ಸಲ್ಲಿಸಿ ವರ್ಷಕ್ಕೆ ಇಂತಿಷ್ಟು ಅಂತೆ ಬಾಡಿಗೆಗೆ ಜಾಗ ಪಡೆದು ವಾಣಿಜ್ಯ ವ್ಯವಹಾರಕ್ಕೆ ಅಕ್ರಮವಾಗಿ ಉಪಯೋಗಿಸವುದು ಕಂಡುಬಂದಿರುತ್ತದೆ
ಐಸ್ ಕಾರ್ಖಾನೆ ಮಾಡಲೆಂದು ಕಟ್ಟಡ ನಿರ್ಮಿಸಿ ಕಟ್ಟಡದ ಕೊನೆಯ ಅಂತಸ್ತಿನಲ್ಲಿ ಕೊನೆಗಳನ್ನು ಬಾಡಿಗೆ ಕೊಟ್ಟಿದ್ದು, ಮೀನು ವ್ಯಾಪಾರಸ್ಥರು ಸೇರಿದಂತೆ ಅನೇಕ ವ್ಯವಹಾರಕ್ಕೆ ವಾಣಿಜ್ಯ ಕಟ್ಟಡವಾಗಿ ಬಳಕೆಯಾಗುತ್ತಿದೆ.
ಇವರು ಅನಾಧಿಕೃತವಾಗಿ ಉದ್ದಿಮೆ ಪರವಾನಿಗೆ ಪತ್ರ ಪಡೆದು ವ್ಯವಹಾರ ನಡೆಸುತ್ತಿದ್ದಾರೆ.
ಕಾನೂನು ಪ್ರಕಾರ ಜಾಗ ಯಾರ ಹೆಸರಲ್ಲಿದೆ ಅವರಿಗೆ ಮಾತ್ರ ಉದ್ದಿಮೆ ಪರವಾನಿಗೆ ಪತ್ರ ಪಡೆಯಲು ಅವಕಾಶ, ಇಲ್ಲಿ ಲಂಚ ಪಡೆದು ಅಧಿಕಾರಿಗಳು ಅನೇಕರಿಗೆ ಪರವಾನಿಗೆ ಪತ್ರ ಹಂಚಿದ್ದು ಅಧಿಕಾರಿಗಳಲೇ ಇಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಇನ್ನು ಮುಂದೆ ಯಾರಿಗೂ ಪರವಾನಿಗೆ ಪತ್ರ ನೀಡದೆ, ಮತ್ತು ಈಗಾಗಲೇ ನೀಡಿದ ವ್ಯಾಪಾರಸ್ಥರ ಪರವಾನಿಗೆ ಪತ್ರ ನವೀಕರಿಸಬರದು.
