ಮಂಗಳೂರು: ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಬಡ ಅಂಗಡಿ ಮಾಲಿಕನ ಮೇಲೆ ದಬ್ಬಾಲಿಕೆ ನಡೆಸುವ ಮನಪಾ ಅಧಿಕಾರಗಳೇ ನಗರದಲ್ಲಿ ಅನಧಿಕೃತ ಕಟ್ಟಡ ಸೇರಿದಂತೆ ಕಾನೂನು ಬಾಹಿರ ಕಾಮಗಾರಿಗಳಿಗೆ ನಿಮ್ಮ ದಬ್ಬಾಳಿಕೆ ಯಾಕಿಲ್ಲ?

ರಸ್ತೆ ಬದಿ ಗೂಡಂಗಡಿ,ಮೊಬೈಲ್ ಕ್ಯಾಂಟೀನ್, ನಡೆಸಿ ಜೀವನ ನಡೆಸುವ ಸಣ್ಣ ವ್ಯಾಪಾರಸ್ಥರಿಗೆ ಹಲವಾರು ಕಾರಣಗಳನ್ನು ನೀಡಿ ತೆರವು ಗೊಳಿಸುವ ಮ.ನ.ಪಾ ಅಧಿಕಾರಿಗಳು, ಮಂಗಳೂರಿನ ಗಣಪತಿ ಸ್ಕೂಲ್ ಕ್ರಾಸ್ ರಸ್ತೆಯಲ್ಲಿ, ಹೈಲ್ಯಾಂಡ್ ರಸ್ತೆಯಲ್ಲಿ, ಕೋಟಿ ಚೆನ್ನಯ್ಯ ವ್ರತ್ತದ ಎದುರು, ಟೋಕ್ಯೋ ಮಾರ್ಕೆಟ್ ಹತ್ತಿರ ಅನಧಿಕೃತ ಕಟ್ಟಡ ಕಾನೂನು ಬಾಹಿರ ಕಾಮಗಾರಿ ವಿರುದ್ಧ ಅದೆಷ್ಟೋ ದೂರುಗಳು ಬಂದಿದ್ದರೂ ಅತ್ತ ತಲೆಯೂ ಹಾಕಿಲ್ಲ ಯಾಕೆ ಎಂಬುದು ಪ್ರಶ್ನೆಯಾಗಿದೆ

ಸರಕಾರಿ ಒತ್ತುವರಿ ಜಾಗ, ರಾಜ ಕಾಲುವೆಯ ಮೇಲೆ ಕಟ್ಟಡ ಪರವಾನಿಗೆ ಇಲ್ಲದೇ ನಗರದ ಹಲವು ಕಡೆ ಕಾಮಗಾರಿಗಳು ನಡೆಯುತ್ತಿವೆ. ಈ ಸಂಬಂಧ ಹಲವಾರು ಸಾರ್ವಜನಿಕ ದೂರುಗಳು ಮನಪಾ ಮತ್ತು ಕಮೀಷನರ್ ಹತ್ತಿರ ಬಂದಿವೆ. ಇದ್ಯಾವುದಕ್ಕೂ ಕ್ರಮ ಕೈಗೊಳ್ಳದ ಅಧಿಕಾರಿಗಳು ಬಡ ವ್ಯಾಪಾರಸ್ತರ ಮೇಲೆ ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಎಂಬಂತಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಕಲಿ ಉದ್ಯಮ ಪರವಾನಗಿ ಪತ್ರ ನೀಡುವ ಕಾರ್ಯ ಜೋರಾಗಿದೆ. ಈ ಹಿಂದೆ ಎರಡು ಬಾರಿ ನಕಲಿ ಉದ್ದಿಮೆ ಪರವಾನಗಿ ನೀಡಿ ಸಿಕ್ಕಿ ಬಿದ್ದಿದ್ದು, ಅಧಿಕಾರಿಗಳು ಇದೀಗ ಅದೇ ಚಾಳಿಯನ್ನು ಮುಂದುವರಿಸುತ್ತಿದ್ದಾರೆ.

ಒಟ್ಟಾರೆಯಾಗಿ ಲಂಚ ನೀಡಿದರೇ ನಗರದಲ್ಲಿ ಎಲ್ಲಿಯೂ ಅನಧಿಕೃತ ಕಟ್ಟಡ, ಅನಧಿಕೃತ ವ್ಯಾಪಾರ ಹೀಗೆ ಹಲವು ಅಕ್ರಮ ವಹಿವಾಟು ನಡೆಸಬಹುದು. ಅದೇ ಬಡ ವ್ಯಾಪಾರಿಗಳು ಅನೇಕ ಕಾನೂನು ತೊಡಕುಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ.
