ಮಂಗಳೂರು: ಜಪ್ಪಿನಮೊಗರು ಆಡಂಕುದ್ರುವಿನಲ್ಲಿ 123/12 ರಲ್ಲಿ O.66 ಎಕ್ರೆ ಜಮೀನಿನ ವ್ಯಾಪ್ತಿಯ ಒಳಗಡೆಯೇ ಸಣ್ಣದೊಂದು ಕೋಳಿ ಸಾಕಾಣಿಕೆ ಶೆಡ್ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಏಕಾಏಕಿ ಮಂಗಳೂರು ತಹಶಿಲ್ದಾರ್ ಮತ್ತು ಗ್ರಾಮಲೆಕ್ಕಿಗ ಬಂದು ಯಾವುದೇ ನೋಟಿಸ್ ನೀಡಿದೆ ಶೆಡ್ ನ್ನು ತೆರವುಗೊಳಿಸಿದ್ದಾರೆ.

ಜೀವನೋಪಾಯಕ್ಕಾಗಿ ನಿರ್ಮಿಸಿದ ಕೋಳಿ ಸಾಕಾಣಿಕೆ ಶೆಡ್ ನ್ನು ತೆರವುಗೊಳಿಸಿದ ಅಧಿಕಾರಿಗಳ ಈ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನ ಬಂದಾರು ಪ್ರದೇಶದಲ್ಲಿ 8 ಸೆನ್ಸ್ ಜಾಗದಲ್ಲಿದ್ದ ಸಾರ್ವಜನಿಕ ಶೌಚಾಲಯವು ಈಗ ಗುಜುರಿಯವರ ಶೆಡ್ ಆಗಿ ನಿರ್ಮಾಣವಾಗಿದೆ ಇದನ್ನು ಯಾಕೆ ಇದುವರೆಗೆ ಪ್ರಶ್ನಿಸಿಲ್ಲ..?? ಮತ್ತು ತೆರವುಗೊಳಿಸಲು ಮುಂದಾಗಿಲ್ಲ..?? ಇದರಲ್ಲಿ ಮಂಗಳೂರು ತಹಶಿಲ್ದಾರರಿಗೆ ತಿಂಗಳು ತಿಂಗಳು ಹಣ ಬರುತ್ತಿದೆಯೇ..??

ಬಡವರಿಗೆ ಒಂದು ಕಾನೂನು ಶ್ರೀಮಂತರಿಗೆ ಒಂದು ಕಾನೂನು ಎಷ್ಟು ಸರಿ..?? ಬಡವರ ಮೇಲೆ ದರ್ಪ ತೋರಿಸುವ ಅಧಿಕಾರಿಗಳು ಸರ್ಕಾರದ ಆಸ್ತಿಯಲ್ಲಿ ಅಕ್ರಮ ಎಸಗುವ ಶ್ರೀಮಂತರ ಮೇಲೆ ಯಾಕಿಲ್ಲ..??
