ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಹಲವಾರು ಬಹುಮಹಡಿ ಕಟ್ಟಡಗಳು ಎದ್ದುನಿಂತಿವೆ, ಇನ್ನೂ ಅನೇಕ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಮಂಗಳೂರು ಸೇರಿದಂತೆ ನಗರದ ಹೊರ ವಲಯ ಉಳ್ಳಾಲದಲ್ಲಿ ಅನೇಕ ಪ್ರೊಜೆಕ್ಟ್ ವರ್ಕ್ ನಡೆಯುತ್ತಿದ್ದು ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಯಾವುದೇ ವಿವರ ನೀಡುವ ಬೋರ್ಡ್ ಗಳು ಕಾಣುವುದಿಲ್ಲ, ನಿಯಮ ಪ್ರಕಾರ ಕಟ್ಟಡ ವಿನ್ಯಾಸ, ಸುರಕ್ಷತಾ ವೈಶಿಷ್ಟ್ಯಗಳು ಇಂಜಿನಿಯರ್ ಗಳ ಹೆಸರು, ಕಟ್ಟಡ ಅಡಿಪಾಯಗಳ ರಚನೆ, ವಾಸ್ತುಶಿಲ್ಪಿ, ಗೋಡೆಗಳ ಹೀಗೆ ಅನೇಕ ವಿವರಗಳ ಪಟ್ಟಿಯ ಬೋರ್ಡ್ ಗಳು ಆಯಾ ಕಟ್ಟಡದ ಕಾಮಗಾರಿ ವೇಳೆ ಸ್ಥಳದಲ್ಲಿ ಇರತಕ್ಕದ್ದು, ಈ ಬೋರ್ಡ್ ಇಲ್ಲವೆಂದರೆ ಅದು ಕಾನೂನು ಬಾಹಿರ ಅಕ್ರಮ ಕಟ್ಟಡ ಎಂದರ್ಥ,
ಬೋರ್ಡ್ ಅಳವಡಿಸಿದರೆ ಮಾಹಿತಿ ಹಕ್ಕುಗಳ ಮುಖಾಂತರ ಮಾಹಿತಿ ಸಾರ್ವಜನಿಕರಿಗೆ ಸಿಗಬಹುದು ಎಂಬ ಕಾರಣಕ್ಕೆ ಮಾಲಿಕರು ಬೋರ್ಡ್ ಅಳವಡಿಸುವುದಿಲ್ಲ, ಇದು ಕಾನೂನಿನ ವಿರುದ್ಧ.
ಜಿಲ್ಲಾಧಿಕಾರಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಬೋರ್ಡ್ ಅಳವಡಿಕೆ ಕಡ್ಡಾಯಗೊಳಿಸಿ , ನಿಯಮ ಮೀರಿ ಕಾಮಗಾರಿ ನಡೆಸುವ ಮಾಲಿಕ ಹಾಗೂ ವಾಸ್ತುಶಿಲ್ಪಿಯ ವಿರುದ್ಧ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು
