ಮಂಗಳೂರಿನ ಹಳೆ ಬಂದರು ಪೋರ್ಟ್ ನಲ್ಲಿ ಯಾವುದೇ ಜಿ.ಎಸ್.ಟಿ ಬಿಲ್ ಗಳಿಲ್ಲದೇ ಗೋವಾ ದಿಂದ ಸ್ಕ್ರ್ಯಾಪ್ ಬರುತ್ತಿದೆ ಎಂದು ವರದಿಯಾಗಿದೆ.
ಇಲ್ಲಿಗೆ ಇಷ್ಟೊಂದು ಗುಜರಿ ಹೇಗೆ ತರಿಸ್ತೀರಿ ಎಂದು ಅಲ್ಲಿನ ಅಧಿಕಾರಿ ಗಳನ್ನು ಕೇಳಿದರೆ ಮಂಗಳೂರಿನ ನ್ಯೂ ಬಂದರು ಪೋರ್ಟ್ ನಲ್ಲಿ ಸ್ಥಳ ಇಲ್ಲದ ಕಾರಣ ಇಲ್ಲಿಗೆ ಹಾಕಲು ನೋಟಿಸು ನೀಡಿರುತ್ತಾರೆ ಎಂದು ಬೇಜಾವ್ದಾರಿ ಕಾರಣ ಕೊಡುತ್ತಿದ್ದಾರೆ.
ಆದರೆ ಇದಕ್ಕೆ ಯಾವುದೇ ಪಾವತಿ ಮೊತ್ತದ ಬಿಲ್ ಗಳು ಇಲ್ಲದೇ ಇಷ್ಟೊಂದು ಟನ್ ಐಟಂ ಗಳು ಬರಲು ಹೇಗೆ ಸಾಧ್ಯ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಬಂದ ಐಟಂ ಗಳನ್ನು ಸಂಬಂಧ ಪಟ್ಟ ಅಧಿಕಾರಿ ಚೆಕ್ ಮಾಡದೇ ಒಟ್ಟಾರೆಯಾಗಿ ಲೋಡ್ ಮಾಡುತ್ತಿರುವುದು ನೋಡಿದರೇ ಇದು ಅಕ್ರಮವಾಗಿ ನಡೀತಾ ಇದೆ ಎಂಬುದು ಬಲವಾಗಿ ಸಂಶಯಿಸಲಾಗಿದೆ.
ಅಷ್ಟೇ ಅಲ್ಲದೇ ಇದರಲ್ಲಿ ಅಕ್ರಮ ಮದ್ಯದ ಬಾಕ್ಸ್ ಬರುತ್ತಿದೆಯಾ ಎಂದು ಗುಸು ಗುಸು ಮಾತಾಗಿದೆ.
ಏನೇ ಆಗಲಿ ಒಟ್ಟಾರೆಯಾಗಿ ಈ ಬಗ್ಗೆ ಸಂಬಂದ ಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಮ್ಮ ಮಾಧ್ಯಮ ಆಗ್ರಹವಾಗಿದೆ.
