ಮಂಗಳೂರು: ನಂದಿಗುಡ್ಡೆ ವೃತ್ತದ ಬಳಿ ಇರುವ ನಂದಿ ಹಿಲ್ಸ್ ಬಹುಮಹಡಿ ಕಟ್ಟಡವು ಸಂಪೂರ್ಣವಾಗಿ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ.
ಕಟ್ಟಡವು ಪೂರ್ಣ ಪ್ರಮಾಣದ ಲ್ಲಿ ಕಾಮಗಾರಿಯಾಗದೆ. ಕಟ್ಟಡ ಪರವಾನಿಗೆ ಪತ್ರ ಇಲ್ಲದೆ ಕಟ್ಟಡವು ವಾಣಿಜ್ಯ ವ್ಯವಹಾರಕ್ಕೆ ಹಲವಾರು ಶಾಪ್ ಗಳನ್ನು ಈಗಾಗಲೇ ನೀಡಲಾಗಿದ್ದು, ಹೋಟೆಲ್, ಬ್ಯೂಟಿ ಪಾರ್ಲರ್ ಸೇರಿದಂತೆ ಅನೇಕ ಶಾಪ್ ಗಳು ತೆರೆದು ವ್ಯವಹಾರ ನಡೆಯುತ್ತಿದೆ. ಕಟ್ಟಡದ ಒಳಚರಂಡಿವು ಅಕ್ರಮವಾಗಿದೆ.
ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ತಕ್ಷಣ ಎಲ್ಲಾ ಶಾಪ್ ಗಳು ಮುಚ್ಚಿ ಕಟ್ಟಡದ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಮುಂದಿವರಿಯಬೇಕೆಂದು ಎಚ್ಚರಿಕೆ ನೀಡಿದ್ದಾರೆ.
