ಆರ್ಟಿಓ ಗಳಲ್ಲಂತೂ ಎಲ್ಎಲ್ (ಲರ್ನಿಂಗ್ ಲೈಸೆನ್ಸ್)ಗೆ ಇಷ್ಟು, ಡಿ.ಎಲ್ (ಡ್ರೆೃವಿಂಗ್ ಲೈಸೆನ್ಸ್)ಗೆ ಇಷ್ಟು ಎಂಬ ಲಂಚದ ರೇಟೇ ಇದೆ. ಇದೆಲ್ಲಕ್ಕಿಂತ ಮಿಗಿಲಾಗಿ ಆರ್.ಟಿ.ಓ.ಗೆ ನೀವು ಹೋಗುತ್ತಿದ್ದಂತೆ ಜಿಗಣೆಗಳಂತೆ ಮುತ್ತುವ ಬ್ರೋಕರ್ಗಳೇ ಆರ್ಟಿಓ ಯಜಮಾನರಂತೆ ವರ್ತಿಸುವುದೂ ಉಂಟು.
ಈ ದಲ್ಲಾಳಿಗಳು ಆರ್ಟಿಓ ಅಧಿಕಾರಿಗಳಿಗಿಂತ ಹೆಚ್ಚು ಮೋಟಾರು ವಾಹನ ಕಾಯಿದೆಯನ್ನು ಅರೆದು ಕುಡಿದಿದ್ದಾರೆ. 6 ಫೋಟೋ, ಎಲ್.ಐ.ಸಿ. ಪಾಲಿಸಿ, ಪಡಿತರ ಚೀಟಿ, ರೆವಿನ್ಯೂ ಸ್ಟಾಂಪ್ ಎಂದು ದೊಡ್ಡ ಪಟ್ಟಿಯನ್ನೇ ನೀಡುವ ಅವರು, ಹಣ ಕೊಟ್ಟೊಡನೆಯೇ ವಾಹನ ಓಡಿಸಲು ಬರಲಿ, ಬಾರದಿರಲಿ ಲೈಸೆನ್ಸ್ ಕೊಡಿಸುವಷ್ಟು ಸಮರ್ಥರು, ಮೆಲ್ಕಾರ್ ಬಂಟ್ವಾಳ ಆರ್ ಟಿ ಓ ಕಚೇರಿಯಲ್ಲಿ ದಲ್ಲಾಳಿಗಳದೆ ಕಾರು ಬಾರು, ಯಾವುದೇ ಕೆಲಸಕ್ಕೆ ಹೋದರು ದಲ್ಲಾಳಿಗಳು ಇಲ್ಲದೆ ಕೆಲಸ ಆಗಲ್ಲ. ಡ್ರೆೃವಿಂಗ್ ಲೈಸೆನ್ಸ್ ಮಾಡಿಸಲು ಪಟ್ಟಿರುವ ಪಾಡು ಅನುಭವಿಸಿದವರಿಗೇ ಗೊತ್ತು. ಎಷ್ಟೇ ಚೆನ್ನಾಗಿ ವಾಹನ ಓಡಿಸಲು ಬಂದರೂ ಲಂಚ ಕೊಡದೆ ಲೈಸೆನ್ಸ್ ಸಿಗಲ್ಲ ಅನ್ನುವ ತತ್ವ ಅರ್ಥವಾದ ಕೂಡಲೇ ಪರವಾನಗಿ ಕೈಗೆ ಸಿಕ್ಕಂತೆಯೇ.
ದಲ್ಲಾಳಿಗಳ ಜತೆ ಕೈಜೋಡಿಸುವ, ಸಾರ್ವಜನಿಕರೊಂದಿಗೆ ಸಭ್ಯವಾಗಿ ವರ್ತಿಸದ ಹಾಗೂ ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಧ್ಯವರ್ತಿಗಳಿಗೆ ಇಲ್ಲವೇ ಅಧಿಕಾರಿಗಳಿಗೆ ಲಂಚ ನೀಡದೆಯೇ ಆರ್.ಟಿ.ಓ ಗಳಲ್ಲಿ ಪಾರದರ್ಶಕವಾಗಿ ಕೆಲಸ ನಡೆಯುವಂತೆ ಸರ್ಕಾರ ಗಮನ ಹರಿಸಬೇಕು
