ಮಂಗಳೂರು: ನಂದಿಗುಡ್ಡೆ ವೃತ್ತದ ಬಳಿ ಇರುವ ನಂದಿ ಹಿಲ್ಸ್ ಬಹುಮಹಡಿ ಕಟ್ಟಡವು ಸಂಪೂರ್ಣವಾಗಿ ಕಾನೂನು ಬಾಹಿರವಾಗಿ ನಿರ್ಮಿಸಲಾಗಿದೆ. ಪಾಲಿಕೆಯಿಂದ ಯಾವುದೇ ಪ್ರವೇಶ ಪತ್ರ ಇಲ್ಲದೆ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಅರೋಗ್ಯ ಇಲಾಖೆ ಅಧಿಕಾರಿಗಳು ಅ ಕಟ್ಟಡದ ವ್ಯಾಪಾರ ಮಾಡುವ ಪ್ರತಿ ಶಾಪ್ ಗಳಿಗೆ ದಾಳಿ ನಡೆಸಿ 50 ಸಾವಿರ ದಂಡ ವಿಧಿಸಿದ್ದಾರೆ.

ಪಾಲಿಕೆಯಿಂದ ಕಟ್ಟಡಕ್ಕೆ ಪ್ರವೇಶ ಪತ್ರ ಪಡೆಯದೆ ಡೋರ್ ನಂಬ್ರ ಕೊಡ ಆಗದೆ ಕಟ್ಟಡವು ವಾಣಿಜ್ಯ ವ್ಯವಹಾರಕ್ಕೆ ಹಲವಾರು ಶಾಪ್ ಗಳನ್ನು ಈಗಾಗಲೇ ನೀಡಲಾಗಿದ್ದು, ಹೋಟೆಲ್, ಬ್ಯೂಟಿ ಪಾರ್ಲರ್ ಸೇರಿದಂತೆ ಅನೇಕ ಶಾಪ್ ಗಳು ತೆರೆದು ವ್ಯವಹಾರ ನಡೆಯುತ್ತಿದೆ. ಕಟ್ಟಡದ ಒಳಚರಂಡಿವು ಅಕ್ರಮವಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ಶಾಪ್ ಗಳು ನಿರ್ಮಾಣವಾಗುತ್ತಿದೆ, ಸರಕಾರಿ ರಸ್ತೆಯ ಅಡಿ ಭಾಗದಲ್ಲಿ ಭೂಮಿಯನ್ನೇ ಕೊರೆದು ಅಂಗಡಿಗಳನ್ನು ನಿರ್ಮಿಸುತಿದ್ದಾರೆ.

ಈ ಕಟ್ಟಡಕ್ಕೆ ಪ್ರವೇಶ ಪತ್ರ ನೀಡುವ ಮೊದಲು ಮ.ನ.ಪಾ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡದ ಅಕ್ರಮ ಮತ್ತು ಕಾನೂನು ಬಾಹಿರವಾಗಿ ನಿರ್ಮಿಸಿದ ರಸ್ತೆಯ ಅಡಿ ಭಾಗದ ಅಂಗಡಿಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿ ಅಕ್ರಮವಾಗಿ ಕಟ್ಟಿದನ್ನು ತೆರವುಗೊಳಿಸಿ, ಮಾಲಕರ ಹಾಗೂ ವಾಸ್ತು ಶಿಲ್ಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.















