ಮಂಗಳೂರು: ಕುಂಟಿಕಾನ ಬಳಿ ಶಾಲಾ ಮಕ್ಕಳನ್ನು ಅಪಹರಿಸಲಾಗಿದೆ ಎಂದು ವಾಟ್ಸ್ ಅಪ್ ಸಂದೇಶ ವೈರಲ್ ಆಗಿದ್ದು ಮಂಗಳೂರು ನಗರಾದ್ಯಂತ ವ್ಯಾಪಕ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.
ಮಕ್ಕಳನ್ನು ಅಪಹರಿಸಲಾಗಿದೆ ಎಂದು ಹೇಳುವ ಧ್ವನಿ ಸಂದೇಶವು ಪ್ರಸ್ತುತ ವಾಟ್ಸಾಪ್ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವದಂತಿಗಳನ್ನು ಪರಿಶೀಲಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಅವರು ಈ ವರೆಗೆ ಎಲ್ಲಿಯೂ ಕಾಣೆಯಾದ ದೂರು ಬಂದಿಲ್ಲ. ಧ್ವನಿ ಹಂಚಿಕೊಳ್ಳಲಾಗುತ್ತಿದ್ದ ಮಹಿಳೆಯೊಂದಿಗೆ ಮಾತನಾಡಲಾಗಿದೆ. ಕೆಲವು ವಿದ್ಯಾರ್ಥಿಗಳು ಹೇಳಿದ ಸುದ್ದಿಯ ಆಧಾರದ ಮೇಲೆ ಹಂಚಿಕೊಂಡಿದ್ದೇನೆ ಎಂದು ನಗರ ಪೊಲೀಸ್ ಆಯುಕ್ತರು ಸುಧೀರ್ ಕುಮಾರ್ ರೆಡ್ಡಿ ಯವರು ತಿಳಿಸಿದ್ದಾರೆ.ಇತ್ತಿಚ್ಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳು ಹರಿದಾಡುತ್ತಿದ್ದು ಈ ಬಗ್ಗೆ ಆರೋಪಿಗಳ ಕಠೀಣ ಕ್ರಮ ಕೈಗೊಳ್ಳುತ್ತಿದ್ದೇವೆಂದು ತಿಳಿಸಿದ್ದಾರೆ.
