, ,

ಮಂಗಳೂರು: ಮ.ನ.ಪಾ 38ನೇ ಕಂಕನಾಡಿ ವಾರ್ಡನ ಹೆಲ್ತ್ ಇನ್ಸ್ಪೆಕ್ಟರ್ ನಿಂದ ಮಹಿಳಾ ಪೌರಕಾರ್ಮಿಕೆಗೆ ನಿರಂತರ ಲೈಂಗಿಕ ಕಿರುಕುಳ- ದೂರು ದಾಖಲು

ಮಂಗಳೂರು ಮಹಾನಗರ ಪಾಲಿಕೆಯ 38ನೇ ಕಂಕನಾಡಿ ವಾರ್ಡನ ಹಿರಿಯ ಹೆಲ್ತ್ ಇನ್ಸ್ಪೆಕ್ಟರ್ ಬಾಸ್ಕರ್ (ಆರೋಗ್ಯ ನಿರೀಕ್ಷಕ) ನಿಂದ ತಮ್ಮದೇ ವಾರ್ಡನಲ್ಲಿ ದುಡಿಯುತ್ತಿರುವ ಖಾಯಂ ಪೌರಕಾರ್ಮಿಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಧಮ್ಕಿ, ಮಾನಸಿಕ ಹಿಂಸೆ ನೀಡಿ ಕೆಲಸದಿಂದ ವಜಾಗೊಳಿಸುತ್ತೆನೆಂದು ನಿರಂತರ ಬೆದರಿಕೆ, ಅಸಭ್ಯ ವರ್ತನೆ, ಆವಾಚ್ಯ ಮತ್ತು ಆಶ್ಲೀಲವಾಗಿ ನಿಂದಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ನೊಂದ ಪೌರಕಾರ್ಮಿಕ ಮಹಿಳೆಯು ಪಾಂಡೆಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ‌. ಈ ಸಂಬಂಧ ಠಾಣಾಧಿಕಾರಿಯು ಕಲಂ 74,…

ಮಂಗಳೂರು ಮಹಾನಗರ ಪಾಲಿಕೆಯ 38ನೇ ಕಂಕನಾಡಿ ವಾರ್ಡನ ಹಿರಿಯ ಹೆಲ್ತ್ ಇನ್ಸ್ಪೆಕ್ಟರ್ ಬಾಸ್ಕರ್ (ಆರೋಗ್ಯ ನಿರೀಕ್ಷಕ) ನಿಂದ ತಮ್ಮದೇ ವಾರ್ಡನಲ್ಲಿ ದುಡಿಯುತ್ತಿರುವ ಖಾಯಂ ಪೌರಕಾರ್ಮಿಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಧಮ್ಕಿ, ಮಾನಸಿಕ ಹಿಂಸೆ ನೀಡಿ ಕೆಲಸದಿಂದ ವಜಾಗೊಳಿಸುತ್ತೆನೆಂದು ನಿರಂತರ ಬೆದರಿಕೆ, ಅಸಭ್ಯ ವರ್ತನೆ, ಆವಾಚ್ಯ ಮತ್ತು ಆಶ್ಲೀಲವಾಗಿ ನಿಂದಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ನೊಂದ ಪೌರಕಾರ್ಮಿಕ ಮಹಿಳೆಯು ಪಾಂಡೆಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ‌. ಈ ಸಂಬಂಧ ಠಾಣಾಧಿಕಾರಿಯು ಕಲಂ 74, 75, 79 758, 351(3) BNS ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಹೆಲ್ತ್ ಇನ್ಸ್ಪೆಕ್ಟರ್ ಮೊಬೈಲ್ ಆಪ್ ಮಾಡಿ ತಲೆಮರೆಸಿಕೊಂಡಿದ್ದಾನೆ.

ಘಟನೆಯ ವಿವರ (ದೂರಿನ ಆಧಾರದಲ್ಲಿ)

38ನೇ ಕಂಕನಾಡಿ ವಾರ್ಡನ ನೈರ್ಮಲ್ಯ ನಿರೀಕ್ಷಕ ಬಾಸ್ಕರ್ ಎಂಬವರು ತಮ್ಮದೇ ವಾರ್ಡನಲ್ಲಿ ದುಡಿಯುತ್ತಿರುವ ಖಾಯಂ ಪೌರಕಾರ್ಮಿಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ, ಧಮ್ಕಿ, ಮಾನಸಿಕ ಹಿಂಸೆ ನೀಡಿ ಕೆಲಸದಿಂದ ವಜಾಗೊಳಿಸುತ್ತೆನೆಂದು ನಿರಂತರ ಬೆದರಿಕೆ, ಅಸಭ್ಯ ವರ್ತನೆ, ಆವಾಚ್ಯ ಮತ್ತು ಆಶ್ಲೀಲ ಬೈಗುಳ ದಿನನಿತ್ಯದ ಕಾರ್ಯವಾಗಿದೆ. ಆದ್ದರಿಂದ ನೈರ್ಮಲ್ಯ ನಿರೀಕ್ಷಕರ ಮೇಲೆ ಸೂಕ್ತ ಹಾಗೂ ಕಠಿಣ ಕ್ರಮ ಕೈಗೊಂಡು ಸಂತ್ರಸ್ತೆ ಮಹಿಳೆ ನೆಮ್ಮದಿಯಿಂದ ಕೆಲಸವನ್ನು ನಿರ್ವಹಿಸಲು ಅನುವುಮಾಡಿಕೊಡಬೇಕೆಂದು ದೂರಿನಲ್ಲಿ ತನ್ನ ಅಳಲನ್ನು ತೊಡಿಕೊಂಡಿದ್ದಾರೆ.

ಪೌರಕಾರ್ಮಿಕೆಯಾದ ನನಗೆ ಇಬ್ಬರೂ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ಅಂಗವಿಕಲನಾಗಿರುತ್ತಾನೆ ನಾನು ವಿಧವೆಯಾಗಿದ್ದು ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ನಮ್ಮ ಜೀವನಕ್ಕೆ ನನ್ನ ಆದಾಯವೇ ಆಸರೆಯಾಗಿದೆ. ನಾನು ಕೆಲವು ತಿಂಗಳುಗಳ ಹಿಂದೆ ನನ್ನ ವಾರ್ಡ್‌ನ ನೈರ್ಮಲ್ಯ ನಿರೀಕ್ಷಕರಾಲ್ಲಿ ನನ್ನ ಅಸೌಖ್ಯದ ಕಾರಣ ನನಗೆ 10ದಿನಗಳ ರಜೆ ಬೇಕು ಎಂದು ನಾನು ಮೆಡಿಕಲ್ ಸರ್ಟಿಫಿಕೆಟ್ ಮತ್ತು ಅರ್ಜಿಯನ್ನು ನೀಡಿ ವಿನಂತಿಸಿಕೊಂಡಾಗ ರಜಾರ್ಜಿಯನ್ನು ತೆಗೆದು ಬಿಸಾಡಿ ನಿನಗೆ ರಜೆ ಕೊಡುವುದಿಲ್ಲ ಇಲ್ಲಿಂದ ನಡಿ” ಕಡೆಗೆ ನಾನು ದಮ್ಮಯ್ಯ ಹಾಕಿ ದಯಾಮಾಡಿ ರಜೆ ಕೊಡಿ ಎಂದು ಅಂಗಲಾಚಿದೆ, ಅಳುತ್ತಿದ್ದೆ. ಆಗ ನೈರ್ಮಲ್ಯ ನಿರೀಕ್ಷಕರು ಹಾಗದರೆ “ಒಂದು ಕೆಲಸ ಮಾಡು ನೀನು ಆದಿತ್ಯವಾರ ಮಂಗಳೂರು ಮಹಾನಗರ ಪಾಲಿಕೆ ಕಛೇರಿಗೆ ಬರಬೇಕು ‘ಅಲ್ಲಿ ನಾನು ನಿನಗೆ ತಯಾರಿಸಿದ ರಜಾ ಅರ್ಜಿಗೆ ಸಹಿ ಹಾಕಿ ಕೊಡು ನಾನು ನಿನಗೆ ರಜೆ ಕೊಡುತ್ತೇನೆ ತಪ್ಪದೆ ನೀನು ಬರಬೇಕು ನಾನು ನಿನಗೋಸ್ಕರ ನನ್ನ ಬೇರೆ ಕೆಲಸ ಬಿಟ್ಟು ಅಲ್ಲಿಗೆ ಬಂದು ಕಾಯುತ್ತೇನೆ” ಎಂದು ಹೇಳಿದರು.

ಅದನ್ನು ನಂಬಿ ಪೌರಕಾರ್ಮಿಕೆ ರವಿವಾರ ದಿನಾಂಕ 22.06.2025ರಂದು ಸುಮಾರು 10:30 ಗಂಟೆ ಸಮಯಕ್ಕೆ ಮಂಗಳೂರು ಮಹಾನಗರ ಪಾಲಿಕೆ ಕಛೇರಿ ಒಳಗೆ ಹೋದಾಗ ಅಲ್ಲಿ ಕಾಯುತ್ತಿದ್ದ ನೈರ್ಮಲ್ಯ ನಿರೀಕ್ಷಕರು ಕೂಡಲೇ ನನ್ನ ಕೈಗೆ ರೂ.1000/-ವನ್ನು ನನ್ನ ಕೈಗೆ ತುರುಕಿ ನೀನು ಚೆನ್ನಾಗಿ ಮೈಕೈ ತುಂಬಿಕೂಡು ಇದ್ದಿಯಾ ನೀನು ನನಗೆ ಬೇಕು ನಿನ್ನನ್ನು ನೋಡುವಾಗ ನನಗೆ ತಡೆಯುವುದಿಲ್ಲ ಸಹಕರಿಸು ಎಂದು ನನ್ನ ಮೈ ಕೈ ಸೊಂಟಕ್ಕೆ ಹಾಗೂ ಖಾಸಗಿ ಅಂಗಗಳಿಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿ ಅಸಭ್ಯ ವರ್ತನೆ ಮಾಡುತ್ತಿರುವಾಗ ಪಾಲಿಕೆಯ ಕಚೇರಿಯ ಒಳಗೆ ಬೇರೆಯೊಬ್ಬ ಪೌರಕಾರ್ಮಿಕ ಅದೇ ಸಮಯಕ್ಕೆ ಬಂದುದ್ದನ್ನು ನೋಡಿ ಹೆಲ್ತ್ ಇನ್ಸ್ಪೆಕ್ಟರ್ ಕಕ್ಕಾಬಿಕ್ಕಿಯಾಗಿ ನನ್ನನ್ನು ಬಿಟ್ಟು ಎನೂ ಅರಿಯದಂತೆ ಬರೆಯುವ ಹಾಗೆ ನಾಟಕ ಮಾಡಿದ್ದನು ಅನಂತರ ನಾನು “ನೀವು ದೊಡ್ಡವರು ಈ ಎಲ್ಲಾ ಕೆಲಸಗಳಿಗೆ ನಾನು ಒಪ್ಪುವುದಿಲ್ಲವೆಂದು ಹೇಳಿ ಅಲ್ಲಿಂದ ನಾನು ಮನೆಗೆ ಹೋದೆ ಅನಂತರ ಹೆಲ್ತ್ ಇನ್ಸ್ಪೆಕ್ಟರ್ ದಿನಾಲು ನನಗೆ ಕರೆ ಮಾಡಿ ನನ್ನನ್ನು ರೂಮ್‌ ಗೆ ಕರೆದುಕೊಂಡು ಹೋಗುತ್ತೇನೆ ಮನೆಗೆ ಬೇಡವೆಂದರೆ ಹೋಟೆಲಿಗೆ ಹೋಗುವ ನನಗೆ ನಿನ್ನ ಮೇಲೆ ಮನಸ್ಸಾಗಿದೆ ಎಂದು ಹೇಳುತ್ತಾ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ.

ನಾನು ಅವರು ಕರೆ ಮಾಡಿದಾಗಲೆಲ್ಲ ಅವರೊಂದಿಗೆ ಹೋಗಲು ಒಪ್ಪಲಿಲ್ಲ. ಅನಂತರ ಕರೆ ಮಾಡುವುದನ್ನು ನಿಲ್ಲಿಸಿ ನಿನ ಕೊಬ್ಬನ್ನು ಕರಗಿಸುತ್ತೇನೆ ಎಂದು ಹೇಳಿ ಅಂದಿನಿಂದ ಇಂದಿನವರೆಗೆ ನಾನು ಕೆಲಸ ಮಾಡುವಲ್ಲಿ ಬಂದು ಆಶ್ಲೀಲವಾಗಿ ನೋಡುವುದು ನಾನು ಬಗ್ಗಿ ಕೆಲಸ ಮಾಡುತ್ತಿದ್ದಾಗ ನನ್ನ ಮೈ ಮೇಲೆ ಕಣ್ಣು ಹಾಕುವುದು ನನ್ನನ್ನು ಲೈಂಗಿಕ ಕ್ರಿಯೆಗೆ ಕರೆಯುವುದು ಮುಂತಾದ ಲೈಂಗಿಕ ಕಿರುಕುಳ ಹಾಗೂ ನಿರಂತರವಾಗಿ ದಬ್ಬಳಿಕೆ ನೀಡುತ್ತಿದ್ದಾನೆ. ನಾನು ಒಪ್ಪದಿದ್ದಾಗ ಇತರ ಪೌರಕಾರ್ಮಿಕರಾದ ABCD ಮುಂತಾದವರ ಎದುರಿನಲ್ಲಿ ಆವಾಚ್ಯ ಮತ್ತು ಆಶ್ಲೀಲವಾಗಿ ಬೈದು ಕಿರುಕುಳ ನೀಡಿರುತ್ತಾನೆ. ನಾನು ರಜೆ ಕೇಳಿದ್ದಲ್ಲಿ ನಿನಗೆ ರಜೆ ಕೊಡುವುದಿಲ್ಲ, ನೀನು ನನಗೆ ಸುಖ ನೀಡಿದಲ್ಲಿ ಮಾತ್ರ ರಜೆ ಕೊಡುತ್ತೇನೆ ಇಲ್ಲದಿದ್ದರೆ ರಜೆ ಮಾಡಿದರೆ ನನ್ನನ್ನು ಕೆಲಸದಿಂದ ವಜಾ ಮಾಡುವ ಬೆದರಿಕೆ ಹಾಕಿರುತ್ತಾರೆ. ಇದರಿಂದ ಆಗಿ ನನಗೆ ಮಾನಸಿಕ ನೋವು ಅನುಭವಿಸುವಂತಾಗಿದೆ ಎಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed