,

ಕಾರ್ಕಳದಲ್ಲಿ ಜಮೀನ್ದಾರಿಕೆ ಜೀವಂತ..!! ಬಡ ಕುಟುಂಬಗಳ ಮೇಲೆ ದೌರ್ಜನ್ಯ

ಕಾರ್ಕಳ: ಇಲ್ಲಿಯ ಕುಕ್ಕುಂದೂರು ಪರಿಸರದ ಎರಡು ಬಡ ಕುಟುಂಬಗಳಿಗೆ ಸ್ಥಳೀಯ ಜಮೀನುದಾರರೊಬ್ಬರು ಹಕ್ಕುಪತ್ರ ಸಿಗದಂತೆ ರಾಜಕೀಯ ಪ್ರಭಾವ ಬಳಸಿ ಅಡ್ಡಿ ಪಡಿಸುತ್ತಿರುವ ಆರೋಪ ಕೇಳಿ ಬಂದಿದೆ. ಕಾರ್ಕಳದಲ್ಲಿ ಈ ಕುಟುಂಬ ಇತ್ತೀಚಿಗೆ ಮಾಧ್ಯಮಗೋಷ್ಠಿ ನಡೆಸಿ ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ. ಒಂದು ಕುಟುಂಬ ಕುಲಾಲ ಸಮುದಾಯದ ಗುಲಾಬಿ ಮೂಲ್ಯರದ್ದು ಹಾಗೂ ಅದರ ಜೊತೆಗೆ ವಿಶ್ವಕರ್ಮ ಸಮುದಾಯದ ಜಯಂತಿ ಆಚಾರ್ಯರಿಗೆ ಅನ್ಯಾಯ ಆಗಿರುವ ಬಗ್ಗೆ ಆರೋಪಿಸಲಾಗಿದೆ. ಈ ಕುಟುಂಬಗಳಿಗೆ ಗೂಂಡಾಗಳ ಮೂಲಕ ಬೆದರಿಕೆ ಹಾಕುತ್ತಿರುವುದಲ್ಲದೆ ಕೃಷಿಗಳನ್ನು ನಾಶಪಡಿಸಿ ವಿನಃಕಾರಣ…

ಕಾರ್ಕಳ: ಇಲ್ಲಿಯ ಕುಕ್ಕುಂದೂರು ಪರಿಸರದ ಎರಡು ಬಡ ಕುಟುಂಬಗಳಿಗೆ ಸ್ಥಳೀಯ ಜಮೀನುದಾರರೊಬ್ಬರು ಹಕ್ಕುಪತ್ರ ಸಿಗದಂತೆ ರಾಜಕೀಯ ಪ್ರಭಾವ ಬಳಸಿ ಅಡ್ಡಿ ಪಡಿಸುತ್ತಿರುವ ಆರೋಪ ಕೇಳಿ ಬಂದಿದೆ.


ಕಾರ್ಕಳದಲ್ಲಿ ಈ ಕುಟುಂಬ ಇತ್ತೀಚಿಗೆ ಮಾಧ್ಯಮಗೋಷ್ಠಿ ನಡೆಸಿ ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ. ಒಂದು ಕುಟುಂಬ ಕುಲಾಲ ಸಮುದಾಯದ ಗುಲಾಬಿ ಮೂಲ್ಯರದ್ದು ಹಾಗೂ ಅದರ ಜೊತೆಗೆ ವಿಶ್ವಕರ್ಮ ಸಮುದಾಯದ ಜಯಂತಿ ಆಚಾರ್ಯರಿಗೆ ಅನ್ಯಾಯ ಆಗಿರುವ ಬಗ್ಗೆ ಆರೋಪಿಸಲಾಗಿದೆ.

ಈ ಕುಟುಂಬಗಳಿಗೆ ಗೂಂಡಾಗಳ ಮೂಲಕ ಬೆದರಿಕೆ ಹಾಕುತ್ತಿರುವುದಲ್ಲದೆ ಕೃಷಿಗಳನ್ನು ನಾಶಪಡಿಸಿ ವಿನಃಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಮನೆಮಂದಿ ಆರೋಪಿಸಿದ್ದಾರೆ.
ಮಳೆಗಾಲದಲ್ಲಿ ಮನೆಯ ಸುತ್ತ ದೊಡ್ಡ ಗುಂಡಿ ತೆಗೆದು ಅದರಲ್ಲಿ ನೀರು ನಿಲ್ಲುವ ಹಾಗೆ ಮಾಡಿ ಮನೆಯನ್ನು ಕೆಡವಿ ಹಾಕುವ ಕಾರ್ಯವನ್ನು ಕೂಡಾ ಮಾಡಲಾಗಿತ್ತು.

ಆ ಸಂದರ್ಭದಲ್ಲಿ ಕುಕ್ಕುಂದೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆ ಗುಂಡಿ ಮುಚ್ಚಿಸಿದ್ದರು. ಅಲ್ಲದೆ ಪ್ರಕರಣ ಸಂಬಂಧ ಪೊಲೀಸರಿಗೂ ದೂರು ನೀಡಲಾಗಿತ್ತು. ಸ್ವಲ್ಪ ಸಮಯ ಸುಮ್ಮನಿದ್ದ ಈ ಜಮೀನುದಾರ ಇದೀಗ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದಾನೆ, ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಕುಟುಂಬ ತನ್ನ ಅಳಲನ್ನು ತೋಡಿಕೊಂಡಿದೆ.


ಸ್ಥಳೀಯಾಡಳಿತ ಹಾಗೂ ಪೊಲೀಸರು ಈ ಬಡ ಕುಟುಂಬಕ್ಕೆ ರಕ್ಷಣೆ ನೀಡಿ ಆಗುತ್ತಿರುವ ಅನ್ಯಾಯವನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed