,

ಉಡುಪಿ: ಸಮಾಧಾನ ಮಹೋತ್ಸವದ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ : 38 ಮಂದಿ ಕಾರ್ಯಕರ್ತರ ವಿರುದ್ಧ FIR

ಉಡುಪಿ : ಹಿಂದು ಜಾಗರಣ ವೇದಿಕೆಯ ಪ್ರತಿಭಟನೆ, ಎಚ್ಚರಿಕೆ ನಡುವೆಯೂ ತಮಿಳುನಾಡು ಮೂಲದ ವಿವಾದಾತ್ಮಕ ಮಿಷನರಿ ಮೋಹನ್ ಸಿ. ಲಾಝರಸ್ ನೇತೃತ್ವದ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮ ಆರಂಭಗೊಂಡಿದೆ. ಉಡುಪಿ ನಗರದ ಮಿಷನ್ ಕಂಪೌಂಡಿನಲ್ಲಿ ಮಾರ್ಚ್ 20ರಿಂದ 22ರ ವರೆಗೆ ಕಾರ್ಯಕ್ರಮ ಆಯೋಜಿಸಿದ್ದು, ಇದರ ಹಿಂದೆ ಮತಾಂತರದ ಷಡ್ಯಂತ್ರ ಇದೆ, ಲಾಜರಸ್ ಭಾಗವಹಿಸಲು ಅವಕಾಶ ನೀಡಬಾರದೆಂದು ಹಿಂದು ಜಾಗರಣ ವೇದಿಕೆ ಮುಖಂಡರು ಆಕ್ಷೇಪಿಸಿದ್ದರು. ಅಲ್ಲದೆ, ಜಿಲ್ಲಾಡಳಿತಕ್ಕೂ ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಒತ್ತಾಯ ಮಾಡಿದ್ದರು. ಆದರೆ ಕಾರ್ಯಕ್ರಮ ಸಂಘಟಕರು ಹೈಕೋರ್ಟ್…

ಉಡುಪಿ : ಹಿಂದು ಜಾಗರಣ ವೇದಿಕೆಯ ಪ್ರತಿಭಟನೆ, ಎಚ್ಚರಿಕೆ ನಡುವೆಯೂ ತಮಿಳುನಾಡು ಮೂಲದ ವಿವಾದಾತ್ಮಕ ಮಿಷನರಿ ಮೋಹನ್ ಸಿ. ಲಾಝರಸ್ ನೇತೃತ್ವದ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮ ಆರಂಭಗೊಂಡಿದೆ.

ಉಡುಪಿ ನಗರದ ಮಿಷನ್ ಕಂಪೌಂಡಿನಲ್ಲಿ ಮಾರ್ಚ್ 20ರಿಂದ 22ರ ವರೆಗೆ ಕಾರ್ಯಕ್ರಮ ಆಯೋಜಿಸಿದ್ದು, ಇದರ ಹಿಂದೆ ಮತಾಂತರದ ಷಡ್ಯಂತ್ರ ಇದೆ, ಲಾಜರಸ್ ಭಾಗವಹಿಸಲು ಅವಕಾಶ ನೀಡಬಾರದೆಂದು ಹಿಂದು ಜಾಗರಣ ವೇದಿಕೆ ಮುಖಂಡರು ಆಕ್ಷೇಪಿಸಿದ್ದರು. ಅಲ್ಲದೆ, ಜಿಲ್ಲಾಡಳಿತಕ್ಕೂ ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಒತ್ತಾಯ ಮಾಡಿದ್ದರು.

ಆದರೆ ಕಾರ್ಯಕ್ರಮ ಸಂಘಟಕರು ಹೈಕೋರ್ಟ್ ಮೂಲಕ ಆದೇಶ ತಂದಿದ್ದು, ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಭದ್ರತೆ ನೀಡಬೇಕು ಎನ್ನುವ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಪೊಲೀಸರು ಕಾರ್ಯಕ್ರಮಕ್ಕೆ ಭದ್ರತೆ ನೀಡಿದ್ದಾರೆ. ತಮಿಳುನಾಡಿನ ಮಿಷನರಿ ಮೋಹನ್ ಲಾಝರಸ್ ಸ್ಥಳಕ್ಕೆ ಆಗಮಿಸಿದ್ದು, ಕಾರ್ಯಕ್ರಮವೂ ಆರಂಭಗೊಂಡಿದೆ.

ತಮಿಳುನಾಡಿನಲ್ಲಿ ಲಾಝರಸ್ ವಿರುದ್ಧ ಹಲವು ಕೇಸು ದಾಖಲಾಗಿದ್ದು, ಹಿಂದು ವಿರೋಧಿ ಭಾಷಣಕ್ಕಾಗಿ ಕುಖ್ಯಾತಿ ಪಡೆದಿದ್ದಾರೆಂದು ಹಿಂದು ಜಾಗರಣ ವೇದಿಕೆ ಮುಖಂಡರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಂತಿಯಿಂದಿರುವ ಉಡುಪಿಯಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡಬೇಡಿ ಎಂದು ಹೇಳಿದ್ದರು. ಇದರಂತೆ, ಪೊಲೀಸರು ಕಾರ್ಯಕ್ರಮ ಸಂಘಟಕರಿಗೆ ನೋಟೀಸ್ ನೀಡಿ, ಲಾಝರಸ್ ಬದಲು ಬೇರೆ ಭಾಷಣಕಾರರನ್ನು ಕರೆಯುವಂತೆ ಸಲಹೆ ಮಾಡಿದ್ದರು. ಆದರೆ ಸಂಘಟಕರು ಹೈಕೋರ್ಟ್ ಮೂಲಕ ಅನುಮತಿ ಪಡೆದು ಕಾರ್ಯಕ್ರಮ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಶ್ರೀಕಾಂತ್ ಶೆಟ್ಟಿ ಮತ್ತಿತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಮೊದಲು ಗೋವಿಂದ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ಕಾರ್ಯಕರ್ತರು ಬಳಿಕ ಸಮಾಧಾನ ಮಹೋತ್ಸವ ನಡೆಯುವ ಮಿಷನ್ ಕಂಪೌಂಡ್ ಮೈದಾನದ ಕಡೆಗೆ ತೆರಳಲು ಯತ್ನಿಸಿದರು.

ಹಿಂದೂ ಜಾಗರಣ ವೇದಿಕೆಯ ಮುಖಂಡ ಶ್ರೀಕಾಂತ ಶೆಟ್ಟಿ ಹಾಗೂ 38 ಮಂದಿ ಕಾರ್ಯಕರ್ತರು ಅಕ್ರಮ ಕೂಟ ಸೇರಿಕೊಂಡು ಉಡುಪಿ ಗೋವಿಂದ ಕಲ್ಯಾಣಮಂಟಪದಿಂದ ಸಮಾಧಾನ ಮಹೋತ್ಸವ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಘೋಷಣೆಯನ್ನು ಕೂಗುತ್ತ ಪ್ರತಿಭಟನೆ ಹೊರಟರು. ಈ ಸಂದರ್ಭದಲ್ಲಿ ತಡೆದ ಪೊಲೀಸರು, ಪ್ರತಿಭಟನಕರಾದ ಮಹೇಶ್ ಶೆಣೈ(43), ಶ್ರೀಕಾಂತ್ ಶೆಟ್ಟಿ, ಸಂತೋಷ(27), ಉಮೇಶ್ ನಾಯ್ಕ್(51), ಉಮೇಶ್(35), ರಮೇಶ್ ಶೆಟ್ಟಿ(43), ರಾಜೇಶ್ ಉಚ್ಚಿಲ (41), ದರ್ಶನ್(23), ಉದಯ ಕುಮಾರ್(44), ಪ್ರಶಾಂತ್(40), ಗುರುರಾಜ್(37), ಅಜೀತ್ ಗೋಳಿಕಟ್ಟೆ(39), ರಾಧಕೃಷ್ಣ(55), ರೀತೇಶ್ ಪೂಜಾರಿ(25), ಜಗದೀಶ ಪೂಜಾರಿ(31), ಮಹೇಶ್ ಪೂಜಾರಿ(33), ಸುನೀಲ್ ಪೂಜಾರಿ(26), ಚಿರಾಗ್ ಎಚ್.ಎಸ್.(22), ಸುದೀಪ್ ಕಡಿಯಾಳಿ(23), ನಿಖಿಲ್(28), ಸುಜೀತ್(28), ಸಾಜನ್ ಎಂ.ಶೆಟ್ಟಿ(34), ರಾಜೇಶ್ ಪೈಯಾರ್(43), ಲಕ್ಷ್ಮಣ್ ಕರ್ಕೇರ(49), ಶರತ್ ಕುಮಾರ್ ಬೈಲಕೆರೆ(42), ಶೈಲೇಂದ್ರ ಶೆಟ್ಟಿ(50), ವಿಕೇಶ್ ಎಸ್.(29), ನಿತೇಶ್(32), ಸರೋಜಾ ಶೆಣೈ(52), ತಾರಾ ಎಸ್., ತಾರಾ ಆಚಾರ್ಯ(55), ಸಿಂಚನ್ (21), ಧನುಷ್ ಶೆಟ್ಟಿ(21), ವಿಶೇಕ್ ಶೆಟ್ಟಿ(20), ಸಾತ್ವೀಕ್(20), ಮನೀಷ್ (21), ಅಶ್ವತ್ ಅಚಾರ್ಯ(37), ದಿನೇಶ್ ಸಾವಂತ(47) ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಬಳಿಕ ಮಣಿಪಾಲ ಠಾಣೆಗೆ ಕರೆದೊಯ್ದು ಬಿಡುಗಡೆ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed