ಉಡುಪಿ: ಟ್ರೇಡಿಂಗ್ ಆ್ಯಪ್ನಲ್ಲಿ ಹೂಡಿಕೆ ಮಾಡಿ ಮಹಿಳೆಯೊಬ್ಬರು 11.75ಲಕ್ಷ ರೂ. ಆನ್ಲೈನ್ ವಂಚನೆಗೆ ಒಳಗಾದ ಘಟನೆ ನಡೆದಿದೆ.
ಸಹನ ಎಂಬವರು ಟ್ರೇಡಿಂಗ್ ಬಗ್ಗೆ ತಿಳಿದುಕೊಳ್ಳಲು ಆ್ಯಪ್ವೊಂದನ್ನು ಡೌನ್ಲೋಡ್ ಮಾಡಿದ್ದು, ಮುಂದೆ 15 ದಿನಗಳ ನಂತರ ಅಪರಿಚಿತನೋರ್ವ ಕರೆ ಮಾಡಿ, ವಾಟ್ಸಾಪ್ ಗ್ರೂಪ್ಗೆ ಸೇರಿಸಿದ್ದನು. ಅದರಲ್ಲಿ ಲಿಂಕ್ ನ್ನು ಕಳುಹಿಸಿ ಕೆವೈಸಿ ಡಿಟೈಲ್ ಫಿಲ್ ಮಾಡುವಂತೆ ತಿಳಿಸಲಾಗಿತ್ತು.
ನಂತರ ಟ್ರೇಡಿಂಗ್ ಬಗ್ಗೆ ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಸಹನ ಮಾ.6ರಿಂದ ಮಾ.14ರವರೆಗೆ ಹಂತ ಹಂತವಾಗಿ ಒಟ್ಟು 11,75,000ರೂ. ಹಣವನ್ನು ವರ್ಗಾವಣೆ ಮಾಡಿದ್ದರೆನ್ನಲಾಗಿದೆ. ಆದರೆ ಆರೋಪಿಗಳು ಈವರೆಗೆ ವರ್ಗಾವಣೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶನ್ನಾಗಲೀ ನೀಡದೇ ಸಹನರವರಿಗೆ ಮೋಸ ಮಾಡಿರುವುದಾಗಿ ದೂರಲಾಗಿದೆ. ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
