ಬೆಳಗಾವಿ: ಲೋಕಾಯುಕ್ತ ಪೊಲೀಸರು (Lokayutha Police) ಮತ್ತೊಂದು ದೊಡ್ಡ ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಮನೆಯಲ್ಲಿ ಕೋಟಿ ಕೋಟಿ ಅಕ್ರಮ ಆಸ್ತಿ (Crores) ಪತ್ತೆಯಾಗಿದೆ. DUDC ಎಇಇ ಅಜಯ್ ಸಿಂಗ್ ರಜಪೂತ ಅವರ ಮನೆ ಮತ್ತು ಆಸ್ತಿಗಳ ಮೇಲೆ ಎರಡು ದಿನಗಳ ಕಾಲ ನಡೆದ ಲೋಕಾಯುಕ್ತ ದಾಳಿ ಮುಗಿದಿದೆ. ಈ ದಾಳಿಯಲ್ಲಿ ಬರೋಬ್ಬರಿ 14 ಕೋಟಿ ರೂಪಾಯಿ ಮೀರಿದ ಅಕ್ರಮ ಆಸ್ತಿ ಪತ್ತೆಯಾಗಿದೆ.
DUDC ಎಇಇ ಅಜಯಸಿಂಗ್ ರಜಪೂತ ಅವರ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ ಆರೋಪದ ಮೇಲೆ ತನಿಖೆ ಮುಂದುವರಿದಿದೆ. ಹಣ ಆಸ್ತಿ ದುಡ್ಡು ಚಿನ್ನಾಭರಣ ಕಂಡು ಅಧಿಕಾರಿಗಳೇ ಒಂದು ಕ್ಷಣ ಶಾಕ್ ಆಗಿದ್ದಾರೆ.

ಎಇಇ ಅಜಯಸಿಂಗ್ ರಜಪೂತ ಮನೆ ಮೇಲೆ ಲೋಕಾ ದಾಳಿ!
ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿ ನಗರದ ಆಂಜನೇಯ ನಗರ ಸೇರಿದಂತೆ ಏಳು ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದರು. ಮೂರು ಮನೆಗಳು, ಕಚೇರಿ, ಬ್ಯಾಂಕ್ ಲಾಕರ್ಗಳು ಮತ್ತು ಇತರ ಆಸ್ತಿಗಳನ್ನು ಪರಿಶೀಲಿಸಲಾಯಿತು. ದಾಳಿ ವೇಳೆ 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 3.12 ಕೋಟಿ ರೂಪಾಯಿ ಬ್ಯಾಂಕ್ ಡೆಪಾಸಿಟ್, ಐಷಾರಾಮಿ ಕಾರುಗಳು ಮತ್ತು ಬೈಕ್ಗಳನ್ನು ಜಪ್ತಿ ಮಾಡಲಾಗಿದೆ. ದಾಳಿ ಸವದತ್ತಿ, ಹುಕ್ಕೇರಿ ಮತ್ತು ಹುಬ್ಬಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ನಡೆದಿದೆ. ಒಟ್ಟು 18 ನಿವೇಶನಗಳು (ಪ್ಲಾಟ್ಗಳು), ಮನೆಗಳು ಮತ್ತು ಜಮೀನುಗಳು ಪತ್ತೆಯಾಗಿವೆ. ಬೆಳಗಾವಿ ನಗರದಲ್ಲಿ ಮೂರು ಮನೆಗಳು, ಹುಕ್ಕೇರಿ ಮತ್ತು ಅಥಣಿ ತಾಲೂಕಿನಲ್ಲಿ ಇನ್ನಷ್ಟು ಆಸ್ತಿಗಳು ಇದ್ದವು. ಲೋಕಾಯುಕ್ತ ತಂಡ ಎರಡು ದಿನಗಳ ಕಾಲ ಸತತವಾಗಿ ದಾಳಿ ನಡೆಸಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದೆ.
