,

ಯೋಗೀಶ್ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿ ಸೇರಿ ಎಲ್ಲಾ ಅಪರಾಧಿಗಳಿಗೆ ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ಬೆಂಗಳೂರು : ಧಾರವಾಡದಲ್ಲಿ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಿದೆ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ 17 ಆರೋಪಿಗಳಿಗೆ ನಾಳೆ ಶಿಕ್ಷಪ್ರಮಾಣ ಪ್ರಕಟಿಸಲಾಗುತ್ತದೆ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಡ್ಜ್ ಸಂತೋಷ ಗಜಾನನ ಭಟ್ ತಿಳಿಸಿದರು.…

ಬೆಂಗಳೂರು : ಧಾರವಾಡದಲ್ಲಿ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಿದೆ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ 17 ಆರೋಪಿಗಳಿಗೆ ನಾಳೆ ಶಿಕ್ಷಪ್ರಮಾಣ ಪ್ರಕಟಿಸಲಾಗುತ್ತದೆ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಡ್ಜ್ ಸಂತೋಷ ಗಜಾನನ ಭಟ್ ತಿಳಿಸಿದರು.

ವಿಚಾರಣೆ ಆರಂಭವಾದ ವೇಳೆ ಶಿಕ್ಷ ಪ್ರಮಾಣದ ಬಗ್ಗೆ ಸಿಬಿಐ ಪರವಾಗಿ ಎಎಸ್ಜಿ ವಾದ ಮಂಡಿಸಿದರು. ಹೆಚ್ಚುವರಿ ಜನರಲ್ ಸಾಲಿಟರ್ ಎಸ್ ವಿ ರಾಜು ಅವರು ವಾದ ಮಂಡಿಸಿದರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿ ಎಸ್ ವಿ ರಾಜು ವಾದ ಮಂಡಿಸಿದರು. ಈ ವೇಳೆ ಕೋರ್ಟ್ ಹಾಲ್ಗೆ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಅಪರಾಧಿಗಳು ಹಾಜರಾದರು ಸಿಬಿಐ ಪರ ಎ ಎಸ್ ಜಿ ಎಸ್ ವಿ ರಾಜೀವ್ ವಾದ ಮಂಡನೆ ಆರಂಭಿಸಿದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿಗಳಿಗೆ ತೀವ್ರವಾದ ಶಿಕ್ಷ ವಿಧಿಸುವಂತೆ ಸಿಬಿಐ ಮನವಿ ಮಾಡಿತು.

ಯೋಗೀಶ್ ನನ್ನ ಪೂರ್ವ ಸಿದ್ಧತೆ ನಡೆಸಿ ಕೋಲ್ಡ್ ಬ್ಲಡೆಡ್ ಮರ್ಡರ್ ಮಾಡಿದ್ದಾರೆ. ಕೊಲೆಯಾದ ಯೋಗೀಶ್ ಗೌಡ ಪಬ್ಲಿಕ್ ಫಿಗರ್ ಆಗಿದ್ದಾನೆ. ರಾಜಕೀಯ ವೈಷಮ್ಯದಿಂದ ಕೊಲೆ ಮಾಡಲಾಗಿದೆ. ಮೊದಲಿಗೆ ಬೇರೆಯವರನ್ನು ಸೆರೆಂಡರ್ ಮಾಡಿಸಲಾಗಿತ್ತು. ಸಿಬಿಐ ತನಿಖೆ ನಡೆಸಿದ ಬಳಿಕ ಕೊಲೆಯ ಸತ್ಯ ಬಹಿರಂಗವಾಗಿದೆ. ಶಾಸಕನಾಗಿ ಕಾನೂನು ಎತ್ತಿ ಹಿಡಿಯಬೇಕಾದವನು ಕೊಲೆ ಮಾಡಿಸಿದ್ದಾನೆ. ಪೊಲೀಸರನ್ನು ದುರ್ಬಳಕೆ ಮಾಡಿ ಸಂವಿಧಾನ ಉಲ್ಲಂಘಿಸಿದ್ದಾನೆ. ಕಾರದಪುಡಿ ಎರಚಿ ಭೀಕರವಾಗಿ ಯೋಗೀಶ್ ಕೊಲೆ ಮಾಡಲಾಗಿದೆ. ದಾಖಲೆಗಳನ್ನು ತಿರುಚಿದ್ದಾರೆ. ಸಾಕ್ಷಿ ಆಧಾರ ನಾಶಕ್ಕೆ ಯತ್ನಿಸಿದ್ದಾರೆ. ಶಾಸಕ, ಸಚಿವ ಸ್ಥಾನ ದುರ್ಬಳಕೆ ಮಾಡಿ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದಾರೆ ಎಂದು ವಾದಿಸಿದರು.

ತಕ್ಷಣದ ಪ್ರಚೋದನೆಗಾದ ಕೊಲೆಯಲ್ಲ ಇದು ಪೂರ್ವಯೋಜಿತ ಕೋಲ್ಡ್ ಬ್ಲಡೆಡ್ ಮರ್ಡರ್ ಇಂತಹ ಕೊಲೆಯನ್ನು ಸಾಮಾನ್ಯ ಕೊಲೆಯನ್ನು ಪರಿಗಣಿಸಬಾರದು. ಆದರೂ ನಾನು ಗಲ್ಲು ಶಿಕ್ಷೆ ನೀಡುವಂತೆ ಕೋರುವುದಿಲ್ಲ ಎಂದು ವಾದಿಸಿದರು. ಇದೇ ವೇಳೆ ಆರೋಪಿಗಳ ಪರ ವಕೀಲ ಪರಮೇಶ್ವರಪ್ಪ ಅವರು ವಾದ ಆರಂಭಿಸಿದರು. ಆರೋಪಿಗಳಿಗೆ ಚಿಕ್ಕ ಮಕ್ಕಳಿದ್ದಾರೆ. ಅವರಿಗೂ ಸಂಸಾರವಿದೆ ಹಾಗಾಗಿ ಆರೋಪಿಗಳಿಗೆ ಕಡಿಮೆ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು. ವಯಸ್ಸಾದ ಪೋಷಕರನ್ನು ನೋಡಿಕೊಳ್ಳಬೇಕಿದೆ ಕಡಿಮೆ ಶಿಕ್ಷೆ ವಿಧಿಸಲು ವಿನಯ್ ಕುಲಕರ್ಣಿ ಪರ ವಕೀಲ ಸುನಿಲ್ ಅವರು ವಾದ ಮಂಡಿಸಿದರು.

ಸುಧಾರಣೆಗೆ ಅವಕಾಶವಿರುವ ಶಿಕ್ಷೆ ವಿಧಿಸಿ ವಿನಯ್ ಕುಲಕರ್ಣಿ ಜನರಿಂದ ಆಯ್ಕೆ ಆದ ಶಾಸಕರಿದ್ದಾರೆ 3000ಕ್ಕೂ ಹೆಚ್ಚು ಹಸುಗಳನ್ನು ಸಾಕಿದ್ದಾರೆ. ಅವರು ಒಬ್ಬ ಉದ್ಯಮಿಯಾಗಿದ್ದಾರೆ. ಸಾವಿರಾರು ಜನ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಶಿಕ್ಷೆ ನೀಡುವಾಗ ಅವರ ಹಿನ್ನೆಲೆ ಪರಿಗಣಿಸಬೇಕು. ಕೊಲೆ ಆರೋಪವಿದ್ದರು ಜನ ಬೆಂಬಲ ನೀಡಿದ್ದಾರೆ. ಇದು ಅವರ ಒಳ್ಳೆಯತನಕ್ಕೆ ಸಾಕ್ಷಿ ಎಂದು ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿದರು. ಜೀವಿತಾವಧಿ ಸೆರೆವಾಸ ಗಲ್ಲು ಶಿಕ್ಷೆ ಗಿಂತ ಗಂಭೀರವೆಂದು ವಾದಿಸಿದರು.

A19 ಆರೋಪಿಯ ಪರವಾಗಿ ವಕೀಲ ಬಾಲನ್ ಅವರು ವಾದ ಆರಂಭಿಸಿದರು. A19 ಆರೋಪಿ ವಿರುದ್ಧ ಯಾವುದೇ ಬಲವಾದ ಸಾಕ್ಷಿ ಇಲ್ಲ. ಕೊಲೇಗೂ ಮೊದಲಿನ ಯಾವುದೇ ಸಂಚಿನಲ್ಲೂ ಭಾಗಿಯಾಗಿಲ್ಲ. ಸೆಕ್ಷನ್ 201ರ ಪ್ರಕಾರ ಸಾಕ್ಷಿ ನಾಶ ಹಾಗೂ ಒಳಸಂಚಿಕೆ 3 ವರ್ಷ ಶಿಕ್ಷೆ ಇದೆ ಕೊಲೆಯ ಬಳಿಕದ ಕೃತ್ಯಕ್ಕೆ ಮಾತ್ರ ಆರೋಪಿಸಲಾಗಿದೆ. ಹೀಗಾಗಿ ಕಡಿಮೆ ಶಿಕ್ಷೆ ವಿಧಿಸಲು ಆರೋಪಿ ಪರ ವಕೀಲ ಬಾಲನ್ ಮನವಿ ಮಾಡಿದರು. ಇದೆ ವೇಳೆ ಸಿಬಿಐ ಪರ ಹಿರಿಯ ಪಿಪಿ ಹೇಮಾ ಹಾಗೂ ಶಿವಾನಂದ್ ಪೆರ್ಲ ವಾದ ಮಂಡಿಸಿ ಯೋಗೀಶ್ ಗೌಡ ಮಕ್ಕಳಿಗೆ ಪರಿಹಾರಕ್ಕೆ ನಿರ್ದೇಶನ ನೀಡಲು ಮನವಿ ಮಾಡಿದರು. ಯೋಗೀಶ್ ಗೌಡಗೆ 3 ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ. ಮಕ್ಕಳಿಗಾಗಿ ಪರಿಹಾರಕ್ಕೆ ನಿರ್ದೇಶಿಸಲು ಮನವಿ ಮಾಡಿದರು.

ಇದೇ ವೇಳೆ A15 ಆರೋಪಿ ಶಾಸಕ ವಿನಯ್ ಕುಲಕರ್ಣಿ ನಾನು 27 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ ನಾನು ಯಾರಿಗೂ ನೋವು ಮಾಡಿಲ್ಲ ರಾಜಕೀಯ ಕಾರಣಕ್ಕೆ ನನ್ನ ಮೇಲೆ ಕೇಸ್ ಹಾಕಿದ್ದಾರೆ ನನಗೆ ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಒಬ್ಬ ಮಗನಿದ್ದಾನೆ ಪಾರ್ಲಿಮೆಂಟ್ ಎಲೆಕ್ಷನ್ ನಿಂತೆ ನಾನು ಒಬ್ಬ ಕೃಷಿಕನಾಗಿದ್ದು ಮೂರುವರೆ ಸಾವಿರ ಹಸುಗಳಿವೆ ಕ್ಷೇತ್ರದಲ್ಲಿ ಯಾರಿಗೂ ತೊಂದರೆ ಮಾಡಿಲ್ಲ ರಾಜಕೀಯ ಕಾರಣಕ್ಕೆ ಕೆಎಸ್ ಹಾಕಿದ್ದಾರೆ ಎಂದು ವಿನಯ್ ಕುಲಕರ್ಣಿ ಇದೆ ವೇಳೆ ತಿಳಿಸಿದರು.

ಇನ್ನು A4 ಆರೋಪಿಯು ನಾನು ಆಟೋ ಡ್ರೈವರ್ ಆಗಿದ್ದೇನೆ ನನಗೆ ತಂದೆ ತಾಯಿ ಇದ್ದಾರೆ, ನಾನೇ ನೋಡಿಕೊಳ್ಳಬೇಕು ಹಾಗಾಗಿ ನನಗೆ ಕಡಿಮೆ ಶಿಕ್ಷೆ ಕೊಡಿ ಎಂದು ಮನವಿ ಮಾಡಿದ್ದಾನೆ. ಇನ್ನು A5 ಆರೋಪಿ ನಾನು ರಿಯಲ್ ಎಸ್ಟೇಟ್ ಮಾಡುತಿದ್ದೆ ತಂದೆ ತಾಯಿ ಕೊಡಬೇಕು ಎಂದು ಮನವಿ ಮಾಡಿದ್ದಾನೆ. A6 ನನಗು ಚಿಕ್ಕ ಚಿಕ್ಕ ಮಕ್ಕಳಿದ್ದಾರೆ ಕಣ್ಣಿನ ಸಮಸ್ಯೆ ಇದೆ ಹಾಗಾಗಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದಾನೆ.

A 16 ನಾನು ಹಾರ್ಟ್ ಪೇಷಂಟ್, ಹೆಂಡತಿಯು ಪೇಷಂಟ್ ಮಗ ಬೇರೆ ಇದ್ದಾನೆ ಮೊಮ್ಮಗ ತೀರಿಕೊಂಡಿದ್ದಾನೆ. ಕಡಿಮೆ ಶಿಕ್ಷೆ ಕೊಡಿ. A17 ಆರೋಪಿಯು ನನಗೆ 5 ವರ್ಷ ಹಾಗೂ 7 ವರ್ಷದ ಮಕ್ಕಳಿದ್ದಾರೆ ಎಲೆಕ್ಟ್ರಿಕ್ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದು ಕಡಿಮೆ ಶಿಕ್ಷೆ ಕೊಡಿ ಇನ್ನು A19 ಆರೋಪಿಯು ನನಗೆ ಯಾವುದೇ ಬ್ಲಾಕ್ ಮಾರ್ಕ್ ಇಲ್ಲ ನಗದು ಪ್ರಶಸ್ತಿ ಸಿಕ್ಕಿದೆ ನನಗೆ ಕಡಿಮೆ ಶಿಕ್ಷೆ ಕೊಡಿ ಎಂದು ಹೇಳಿಕೆ ನೀಡಿದ್ದು, ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಎಲ್ಲಾ 17 ಆರೋಪಿಗಳಿಗೆ ನಾಳೆ ಶಿಕ್ಷಪ್ರಮಾಣ ಪ್ರಕಟಿಸಲಾಗುತ್ತದೆ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಡ್ಜ್ ಸಂತೋಷ ಗಜಾನನ ಭಟ್ ತಿಳಿಸಿದರು.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed