ಮಂಗಳೂರು: ನಗರದ ಬಂದರು ಪ್ರದೇಶದ ಆಝೀಜುದ್ದೀನ್ ರಸ್ತೆ ರಸ್ತೆ ಭಟ್ಕಳ್ ಬಾಝರ್ ನಲ್ಲಿ ನಿಲ್ಲಿಸಿ ಕಾರಿಗೆ ಮನಬಂದಂತೆ ಹೆಲ್ಮೆಟ್ ನಿಂದ ಸಿಕ್ಕ ಸಿಕ್ಕ ಕಡೆ ಹೊಡೆಯುವ ವಿಡಿಯೋ ವೈರಲ್ ಆಗಿದ್ದು ಈ ಸಂಬಂಧ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾರೂ ಇಬ್ಬರು ಹೊರಗಿನಿಂದ ಬಂದು ಇಲ್ಲಿ ತನ್ನ ವೈಯಕ್ತಿಕ ದ್ವೇಷದಿಂದ ಇಂತಹ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಕಾರನ್ನು ಹಿಂಬಾಲಿಸಿಕೊಂಡು ಬಂದ ಬೈಕ್ ಸವಾರ ಕಾರು ಬಂದರು ಪ್ರದೇಶದಲ್ಲಿ ನಿಲ್ಲಿಸಿದ ತಕ್ಷಣ ಕಾರಿಗೆ ಹಾನಿ ನಡೆಸಿ ಧ್ವಂಸ ಮಾಡಿದ್ದಾನೆ.
ಈ ಕೃತ್ಯದಲ್ಲಿ ಇಬ್ಬರೂ ಹೊರನಿಂದ ಬಂದರೇ ಆಗಿದ್ದು ಸ್ಥಳೀಯರು ಯಾರು ಕೂಡ ಭಾಗಿಯಾಗಿಲ್ಲ ಎಂದು ಸಾಭಿತಗಿದೆ.















