,

SSLC ವಿದ್ಯಾರ್ಥಿ ಸಂಕೇತ್ ಸಮಾಧಿ ಕೆಡವಿದ್ದ ಅಪ್ರಾಪ್ತ ಬಾಲಕ ಅರೆಸ್ಟ್!

 ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ ಸಮಾಧಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಆರೋಪಿಯನ್ನು ಬಂಧಿಸಲಾಗಿದೆ. ಸಂಕೇತ್ ಕೊಲೆ ಪ್ರಕರಣದಲ್ಲಿ ತಮ್ಮ ಸ್ನೇಹಿತರು ಜೈಲು ಪಾಲಾಗಿದ್ದಾರೆ ಎಂಬ ಸಿಟ್ಟಿಗೆ ಅಪ್ರಾಪ್ತ ಈ ಕೃತ್ಯ ಎಸಗಿರುವುದು ಬಯಲಾಗಿದೆ. ಸಂಕೇತ್​​ ಕೊಲೆ ಕೇಸ್​​ನಲ್ಲಿ ಜೈಲು ಸೇರಿರುವ ಆರೋಪಿಗಳ ಅಪ್ರಾಪ್ತ ಸ್ನೇಹಿತನೇ ಈ ಕೃತ್ಯ ಎಸಗಿರೋದು ಬಯಲಾಗಿದ್ದು, ಮಾರ್ಚ್​​ 31ರಂದು ಸಂಕೇತ್​​ ಸಮಾಧಿಯನ್ನು ಧ್ವಂಸಗೊಳಿಸಲಾಗಿತ್ತು. ಈ ಹಿನ್ನೆಲೆ ಆರೋಪಿ ಪತ್ತೆಗೆ ತೀವ್ರ ತನಿಖೆ ನಡೆಸಿದ್ದ ತುಂಗಾನಗರ ಪೋಲಿಸರು, ಹಲವು ಆಯಾಮಗಳಲ್ಲಿ ಈ ಬಗ್ಗೆ…

 ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ ಸಮಾಧಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಆರೋಪಿಯನ್ನು ಬಂಧಿಸಲಾಗಿದೆ. ಸಂಕೇತ್ ಕೊಲೆ ಪ್ರಕರಣದಲ್ಲಿ ತಮ್ಮ ಸ್ನೇಹಿತರು ಜೈಲು ಪಾಲಾಗಿದ್ದಾರೆ ಎಂಬ ಸಿಟ್ಟಿಗೆ ಅಪ್ರಾಪ್ತ ಈ ಕೃತ್ಯ ಎಸಗಿರುವುದು ಬಯಲಾಗಿದೆ.

ಸಂಕೇತ್​​ ಕೊಲೆ ಕೇಸ್​​ನಲ್ಲಿ ಜೈಲು ಸೇರಿರುವ ಆರೋಪಿಗಳ ಅಪ್ರಾಪ್ತ ಸ್ನೇಹಿತನೇ ಈ ಕೃತ್ಯ ಎಸಗಿರೋದು ಬಯಲಾಗಿದ್ದು, ಮಾರ್ಚ್​​ 31ರಂದು ಸಂಕೇತ್​​ ಸಮಾಧಿಯನ್ನು ಧ್ವಂಸಗೊಳಿಸಲಾಗಿತ್ತು. ಈ ಹಿನ್ನೆಲೆ ಆರೋಪಿ ಪತ್ತೆಗೆ ತೀವ್ರ ತನಿಖೆ ನಡೆಸಿದ್ದ ತುಂಗಾನಗರ ಪೋಲಿಸರು, ಹಲವು ಆಯಾಮಗಳಲ್ಲಿ ಈ ಬಗ್ಗೆ ತನಿಖೆ ನಡೆಸಿದ್ದರು. ಅಂತಿಮವಾಗಿ ತ್ತಾಂತ್ರಿಕ ಆಧಾರದ ಹಿನ್ನೆಲೆಯಲ್ಲಿ ಸಮಾಧಿ ಕೆಡವಿದ್ದ ಅಪ್ರಾಪ್ತ ಆರೋಪಿಯನ್ನ ಬಂಧಿಸಿದ್ದಾರೆ.

ಕಳೆದ ಫೆಬ್ರವರಿ 23ರಂದು ಶಿವಮೊಗ್ಗ ನಗರದಲ್ಲಿ ಸಂಕೇತ ಸ್ನೇಹಿತ ಗಿರೀಶನನ್ನು ಹಿಡಿದು ಐವರು ಬಾಲಕರು ಹಲ್ಲೆ ಮಾಡುತ್ತಿದ್ದರು. ಇದನ್ನು ಬಿಡಿಸಲು ಹೋದ ಸಂಕೇತ ಮೇಲೆ ಬಾಲಕರು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ನಂತರ ಮೃತ ಸಂಕೇತ್​​ನ ಅಂತ್ಯಕ್ರಿಯೆಯನ್ನು ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಿದ್ದ ಪೋಷಕರು, ಮಗನ ನೆನಪಿಗಾಗಿ ಮಾ.26ರಂದು ಸಮಾಧಿಯನ್ನು ನಿರ್ಮಿಸಿದ್ದರು

ಅದಾಗಿ ಕೆಲ ದಿನಗಳು ಕಳೆಯುವ ಒಳಗಾಗಿಯೇ ಸಂಕೇತ್​​ ಸಮಾಧಿಯನ್ನೂ ಧ್ವಂಸಗೊಳಿಸಲಾಗಿತ್ತು. ಸಮಾಧಿಯನ್ನು ಕಲ್ಲಿನಿಂದ ಜಜ್ಜಿದ್ದಲ್ಲದೆ, ಗ್ರಾನೈಟ್​​ಗಳನ್ನು ಒಡೆದುಹಾಕಲಾಗಿತ್ತು. ಇದರಿಂದ ಬೇಸರ ಮತ್ತು ಆಕ್ರೋಶಗೊಂಡ ಸಂಕೇತ್‌ನ ಪೋಷಕರು ತುಂಗಾ ನಗರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆ ತನಿಖೆಗಿಳಿದ ಪೊಲೀಸು ಕೊನೆಗೂ ಆರೋಪಿ ಬಾಲಕನನ್ನು ಬಂದಿಸಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed