ಮಂಗಳೂರು: ಆದ್ಯಪಾಡಿ, ವಿಮಾನ ನಿಲ್ದಾಣದ ಪಕ್ಕದಲ್ಲಿ ಅಕ್ರಮವಾಗಿ ಕೆಂಪು ಮಣ್ಣು ತೆಗೆಯುತ್ತಿದ್ದ ಕೊರೆಗೆ ಕಾವೂರು ಪೋಲಿಸರು ದಾಳಿ ನಡೆಸಿ ಐದು ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವಿಮಾನ ನಿಲ್ದಾಣದ ಅಕ್ಕ ಪಕ್ಕದಲ್ಲಿ ಮಣ್ಣು ತೆಗೆಯದಂತೆ ಸೊಚನೆ ನೀಡಲಾಗಿದೆ.
ಇಷ್ಟೆಲ್ಲ ಇದ್ದರೂ ಇವರಿಗೆ ಅಕ್ರಮವಾಗಿ ಕೆಂಪು ಮಣ್ಣು ತೆಗೆಯಲು ಅವಕಾಶ ನೀಡಿದವರು ಯಾರು??
ಅಕ್ರಮವಾಗಿ ಕೆಂಪು ಮಣ್ಣು ಸಾಗಿಸುತ್ತಿದ್ದ 5 ವಿಮಲ್ ಲಾರಿಯನ್ನು ಹಿಡಿದಿದ್ದಾರೆ ಎಂಬ ಮಾಹಿತಿ ಇದೆ
ಹೀಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಕಡೆ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
.
