ಬೆಂಗಳೂರು: ಕೌಟುಂಬಿಕ ವಿಚಾರವಾಗಿ ಪತ್ನಿಯನ್ನು ಕೊಲೆ ಮಾಡಿ ಬಳಿಕ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಸುಮಿತ್ರಾ ಹಾಗೂ ಡೇವಿಡ್ ಎಂದು ಗುರುತಿಸಲಾಗಿದೆ.
ಮೃತ ಸುಮಿತ್ರಾ ಮತ್ತು ಡೇವಿಡ್ ಕಳೆದ ಒಂದು ದಶಕದಿಂದ ಗಂಗೇನಹಳ್ಳಿಯ ಮನೆಯೊಂದರಲ್ಲಿ ವಾಸವಿದ್ದರು. ಇತ್ತೀಚಿನ ದಿನಗಳಲ್ಲಿ ಇವರ ನಡುವೆ ಪದೇ ಪದೇ ಕೌಟುಂಬಿಕ ಕಲಹಗಳು ಏರ್ಪಡುತ್ತಿದ್ದವು ಎನ್ನಲಾಗಿದೆ. ಬುಧವಾರ ಸಂಜೆ ದಂಪತಿಗಳ ನಡುವೆ ಜಗಳ ವಿಕೋಪಕ್ಕೆ ಹೋಗಿದ್ದು, ಈ ವೇಳೆ ಆಕ್ರೋಶಗೊಂಡ ಡೇವಿಡ್, ಪತ್ನಿ ಸುಮಿತ್ರಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಬಳಿಕ ತಾನೂ ಸಹ ಅದೇ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
