ಮಂಗಳೂರು: ಕರ್ನಾಟಕ ರಾಜ್ಯ ಮಹಿಳಾ ಅಧ್ಯಕ್ಷೆ ನಾಗ ಲಕ್ಶಿಮಿ ಚೌಧರಿ ರವರು ಇತ್ತೀಚೆಗೆ ವಿವಾದಿತ ಪುನೀತ್ ಕೆರೆ ಹಳ್ಳಿಯನ್ನು ಸುಬಗನಂತೆ ಸಂಬೋಧಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಹತ್ತು ಹಲವು ಗಲಭೆ, ಶಾಂತಿ ಸುವ್ಯವಸ್ಥೆ ಸಮಸ್ಯೆ, ಹೆಣ್ಮಕ್ಕಳ ಪಿಂಪ್ ಗಿರಿ, ಪುನೀತ್ ಕೆರೆಹಳ್ಳಿ ಎಂಬವನ ಇತ್ತೀಚೆಗೆ ನಾಗ ಲಕ್ಶಿಮಿ ಯವರ ಭೇಟಿ ಸಂಧರ್ಬದಲ್ಲಿ ಪುನೀತ್ ನ ಅಡ್ಡದಾರಿ ಸೇವೆಯನ್ನು ‘ ಸಮಾಜ ಸೇವೆ ‘ ಎಂದು ಕೊಂಡಾಡಿದ್ದಾರೆ. ಮಹಿಳಾ ವಿರೋಧಿ ಪುನೀತ್ ಕೆರೆಹಳ್ಳಿ ಯನ್ನು , ರಾಜ್ಯದ ಮಹಿಳಾ ಆಯೋಗದ ಅಧ್ಯಕ್ಷರು ಓರ್ವರು ಸಮಾಜ ಸೇವಕ ಎಂದು ಪ್ರಮಾಣ ಪತ್ರ ನೀಡುವುದಾದರೆ.
ಅಂತಹ ಸೇವೆಯನ್ನು ತನ್ನ ಇಲಾಖೆಯ ಸರ್ಟಿಫಿಕೇಟ್ ಸೇವೆ ಆಗಿ ಘೋಷಿಸಲು ಮಹಿಳಾ ಆಯೋಗದ ಅಧ್ಯಕ್ಷರು ಸರಕಾರಕ್ಕೆ ಶಿಫಾರಸು ಮಾಡಲಿ.
ಯಾವುದೇ ನೈತಿಕ ಮೌಲ್ಯಕ್ಕೆ ಸಲ್ಲದ ಕೆರೆಹಳ್ಳಿಯನ್ನು ಮಹಿಳಾ ಆಯೋಗದ ಅಧ್ಯಕ್ಷರು ಈ ರೀತಿ ಸಂಭೋದಿಸುವುದಕ್ಕಿಂತ ರಾಜೀನಾಮೆ ನೀಡಿ ಮನೆಗೆ ತೆರಳಲಿ. ಈ ರಾಜ್ಯದ ಜನತೆಗೆ ನಿಮ್ಮಿಂದ ಏನು ಸಂದೇಶ ಲಭಿಸಬಹುದು ಎಂಬುದೇ ಇಲ್ಲಿ ಬೃಹತ್ ಪ್ರಶ್ನೆ.ರಾಜ್ಯ ಸರ್ಕಾರ ಇವರ ಹುದ್ದೆಯನ್ನು ವಜಾ ಗೊಳಿಸಲಿ.
ಕೆ.ಅಶ್ರಫ್
(ಮಾಜಿ ಮೇಯರ್)
ಅಧ್ಯಕ್ಷರು.ದ. ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
