ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಜನನ-ಮರಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಶಿಧರ್ ಕುಲಾಲ್ ವಿರುದ್ಧ ದೂರು ದಾಖಲಾಗಿದ್ದ ಹಿನ್ನೆಲೆ ಇದೀಗ ಅವರನ್ನು ಸುರತ್ಕಲ್ ಗೆ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶಶಿಧರ್ ಕುಲಾಲ್ ಅವರು ಮೂಲತಃ ಪಂಪ್ ಕ್ಲೀನರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಬೇಕಿದ್ದರೂ, ಕಳೆದ ಹಲವು ಸಮಯಗಳಿಂದ ಜನನ-ಮರಣ ವಿಭಾಗದಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಹಲವು ದೂರುಗಳು ದಾಖಲಾಗಿದ್ದಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಂದಲೂ ಮಹಾನಗರ ಪಾಲಿಕೆಗೆ ಪತ್ರ ಬಂದಿತ್ತು ಎಂದು ತಿಳಿದುಬಂದಿದೆ.
ಪತ್ರದಲ್ಲಿ, ಪಂಪ್ ಹೌಸ್‌ನಲ್ಲಿ ಪಂಪ್ ಕ್ಲೀನರ್ ಆಗಿ ಕರ್ತವ್ಯ ನಿರ್ವಹಿಸಬೇಕಾದ ಸಿಬ್ಬಂದಿಯನ್ನು ಜನನ-ಮರಣ ವಿಭಾಗದಲ್ಲಿ ಮುಂದುವರಿಸಬಾರದು. ಅವರು ಮೂಲ ಹುದ್ದೆಯಲ್ಲೇ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿತ್ತು ಎನ್ನಲಾಗಿದೆ.
ಆದರೆ ಸಚಿವರ ಸೂಚನೆಯ ಬಳಿಕವೂ ಶಶಿಧರ್ ಕುಲಾಲ್ ಜನನ-ಮರಣ ವಿಭಾಗದಲ್ಲೇ ಮುಂದುವರಿದಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು. ಇದೀಗ ಅವರನ್ನು ಸುರತ್ಕಲ್ ಪ್ರದೇಶಕ್ಕೆ ಪಂಪ್ ಕ್ಲೀನಿಂಗ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಚಾರವನ್ನು ಕ್ರೈಂ ವಾರ್ತೆ ಎರಡು ಬಾರಿ ವರದಿ ಮೂಲಕ ಬಹಿರಂಗಪಡಿಸಿ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಕ್ರೈಂ ವಾರ್ತೆ ವರದಿಯ ಇಂಪಾಕ್ಟ್ ಬಳಿಕವೂ ಶಶಿಧರ್ ಕುಲಾಲ್ ಜನನ-ಮರಣ ವಿಭಾಗದಲ್ಲೇ ಮುಂದುವರಿದಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು.
ಇದೀಗ ಕ್ರೈಂ ವಾರ್ತೆ ವರದಿಯ ಇಂಪಾಕ್ಟ್ ಬೆನ್ನಲ್ಲೇ ಶಶಿಧರ್ ಕುಲಾಲ್ ಅವರನ್ನು ಸುರತ್ಕಲ್ ಪ್ರದೇಶಕ್ಕೆ ಪಂಪ್ ಕ್ಲೀನಿಂಗ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿದೆ. ಅದೇ ವಿಭಾಗದಲ್ಲಿ ಇನ್ನೂ ಕೆಲವು ಕ್ರಿಮಿಗಳಿವೆ ಎಂದು ಮೂಲಗಳಿಂದ ಮಾಹಿತಿ ಇದೆ.
