, ,

ಸ್ನ್ಯಾಪ್‌ಚಾಟ್ ಚಾಟಿಂಗ್‌ನಿಂದ ಆರಂಭವಾದ ಪರಿಚಯ; ಲಕ್ಷಾಂತರ ರೂಪಾಯಿ ವಂಚನೆಯಾಗಿ ಅಂತ್ಯ

ಪುತ್ತೂರು: ಸ್ನ್ಯಾಪ್‌ಚಾಟ್ ಸಾಮಾಜಿಕ ಜಾಲತಾಣದ ಮೂಲಕ ಯುವತಿಯ ಸೋಗಿನಲ್ಲಿ ಪರಿಚಯವಾಗಿ, ಹಣಕಾಸಿನ ತೊಂದರೆಯ ನೆಪವೊಡ್ಡಿ ಪುತ್ತೂರು ನಿವಾಸಿಯೊಬ್ಬರಿಗೆ ಬರೊಬ್ಬರಿ 4,84,203 ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಂಚಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.ಪೊಲೀಸ್ ದೂರಿನ ವಿವರಗಳ ಪ್ರಕಾರ, ಪುತ್ತೂರಿನ ನಿವಾಸಿಯಾದ ಸಂತ್ರಸ್ತರಿಗೆ ಕಳೆದ 2025 ರ ಡಿಸೆಂಬರ್ ತಿಂಗಳಿನಲ್ಲಿ ಸ್ನ್ಯಾಪ್‌ಚಾಟ್ ಆ್ಯಪ್‌ನಲ್ಲಿ ‘annapornagowd26’ ಎಂಬ ಐಡಿಯಿಂದ ಮೆಸೇಜ್ ಬಂದಿತ್ತು. ಅಪರಿಚಿತ ವ್ಯಕ್ತಿಯೊಬ್ಬ ತಾನು ಬೆಂಗಳೂರಿನ ಪ್ರಸಿದ್ಧ…

ಪುತ್ತೂರು: ಸ್ನ್ಯಾಪ್‌ಚಾಟ್ ಸಾಮಾಜಿಕ ಜಾಲತಾಣದ ಮೂಲಕ ಯುವತಿಯ ಸೋಗಿನಲ್ಲಿ ಪರಿಚಯವಾಗಿ, ಹಣಕಾಸಿನ ತೊಂದರೆಯ ನೆಪವೊಡ್ಡಿ ಪುತ್ತೂರು ನಿವಾಸಿಯೊಬ್ಬರಿಗೆ ಬರೊಬ್ಬರಿ 4,84,203 ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಂಚಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.ಪೊಲೀಸ್ ದೂರಿನ ವಿವರಗಳ ಪ್ರಕಾರ, ಪುತ್ತೂರಿನ ನಿವಾಸಿಯಾದ ಸಂತ್ರಸ್ತರಿಗೆ ಕಳೆದ 2025 ರ ಡಿಸೆಂಬರ್ ತಿಂಗಳಿನಲ್ಲಿ ಸ್ನ್ಯಾಪ್‌ಚಾಟ್ ಆ್ಯಪ್‌ನಲ್ಲಿ ‘annapornagowd26’ ಎಂಬ ಐಡಿಯಿಂದ ಮೆಸೇಜ್ ಬಂದಿತ್ತು. ಅಪರಿಚಿತ ವ್ಯಕ್ತಿಯೊಬ್ಬ ತಾನು ಬೆಂಗಳೂರಿನ ಪ್ರಸಿದ್ಧ ‘ವಿಪ್ರೋ’ (Wipro) ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿದ್ದಾನೆ.ಕೆಲವೇ ದಿನಗಳಲ್ಲಿ ಸಂತ್ರಸ್ತನ ನಂಬಿಕೆ ಗಳಿಸಿದ ಆ ಅಪರಿಚಿತ, ತನ್ನ ವಾಟ್ಸಾಪ್ ನಂಬರ್ ಹಂಚಿಕೊಂಡಿದ್ದಾನೆ. ಅಂದಿನಿಂದ ಇಬ್ಬರೂ ವಾಟ್ಸಾಪ್ ಮೂಲಕ ನಿರಂತರ ಚಾಟಿಂಗ್ ಹಾಗೂ ಮಾತುಕತೆ ಮುಂದುವರಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕ, 2026 ರ ಫೆಬ್ರವರಿ ತಿಂಗಳಿನಿಂದ ಏಪ್ರಿಲ್ ತಿಂಗಳ ನಡುವಿನ ಅವಧಿಯಲ್ಲಿ ತನಗೆ ತೀವ್ರ ಹಣಕಾಸಿನ ತೊಂದರೆ ಎದುರಾಗಿದೆ ಎಂದು ಹಲವು ಕಟ್ಟುಕಥೆಗಳನ್ನು ಹೇಳಿ ಸಂತ್ರಸ್ತನಿಂದ ಹಂತ ಹಂತವಾಗಿ ಒಟ್ಟು 4,84,203/- ರೂಪಾಯಿಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.ಹಣ ಪಡೆದ ಬಳಿಕ ಆಕೆ ವಾಪಸ್ ನೀಡದೆ ಸತಾಯಿಸಿದಾಗ ಸಂತ್ರಸ್ತನಿಗೆ ಸಂಶಯ ಬಂದಿದೆ. ಈ ಬಗ್ಗೆ ಅವರು ತನ್ನ ಆಪ್ತ ಗೆಳೆಯರ ಬಳಿ ವಿಷಯ ತಿಳಿಸಿ, ಆ ಸ್ನ್ಯಾಪ್‌ಚಾಟ್ ಐಡಿ ಹಾಗೂ ವಾಟ್ಸಾಪ್ ಖಾತೆಯ ಬಗ್ಗೆ ಕೂಲಂಕಷವಾಗಿ ವಿಚಾರಿಸಿದಾಗ ಅವರಿಗೆ ಜನ್ಮದಲ್ಲೇ ಮರೆಯಲಾಗದ ಶಾಕ್ ಕಾದಿತ್ತು! ತಾನು ಇಷ್ಟು ದಿನ ಪ್ರೀತಿಯಿಂದ ಮಾತನಾಡಿದ್ದು ಮತ್ತು ಹಣ ನೀಡಿದ್ದು ಹುಡುಗಿಗಲ್ಲ, ಬದಲಿಗೆ ಹುಡುಗಿಯ ಹೆಸರಿನಲ್ಲಿ ಅಕೌಂಟ್ ತೆರೆದಿದ್ದ ಒಬ್ಬ ಹುಡುಗನಿಗೆ ಎಂಬ ಅಸಲಿ ಸತ್ಯ ಬಯಲಾಗಿದೆ. ತನ್ನನ್ನು ಹುಡುಗಿ ಎಂದು ನಂಬಿಸಿ, ಮೆಸೇಜ್ ಮೂಲಕ ಪುಸಲಾಯಿಸಿ ಲಕ್ಷಾಂತರ ರೂಪಾಯಿ ಪಡೆದು ವಾಪಸ್ ನೀಡದೆ ನಂಬಿಕೆ ದ್ರೋಹ ಎಸಗಿರುವ ವಂಚಕನ ವಿರುದ್ಧ ಸಂತ್ರಸ್ತರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed