, ,

ವಾಟ್ಸಾಪ್ ಸಂದೇಶ ನಂಬಿ ಲಕ್ಷಾಂತರ ಕಳೆದುಕೊಂಡ ಯುವಕ; ಸೈಬರ್ ಖದೀಮರ ಆಟ ಬಯಲು

ಮಂಗಳೂರು : ಟೆಲಿಗ್ರಾಂ ಮತ್ತು ವಾಟ್ಸಾಪ್ ಆ್ಯಪ್‌ಗಳ ಮೂಲಕ ಆನ್‌ಲೈನ್ ಟ್ರೇಡಿಂಗ್ ಹಾಗೂ ಗೇಮಿಂಗ್ ನೆಪದಲ್ಲಿ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಯುವಕನೊಬ್ಬನಿಗೆ ಬರೊಬ್ಬರಿ 5,31,000 ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಅಪರಿಚಿತ ವಂಚಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ದೂರಿನ ವಿವರಗಳ ಪ್ರಕಾರ, ಸಂತ್ರಸ್ತ ಯುವಕ 2025 ರಲ್ಲಿ ತನ್ನ ಮನೆಯಲ್ಲಿ ಮೊಬೈಲ್‌ನಲ್ಲಿ ಟೆಲಿಗ್ರಾಂ ಖಾತೆಯನ್ನು ವೀಕ್ಷಿಸುತ್ತಿದ್ದಾಗ, ಆನ್‌ಲೈನ್ ಗೇಮಿಂಗ್ ಮತ್ತು ಟ್ರೇಡಿಂಗ್‌ಗೆ ಪ್ರಸಿದ್ಧ…

ಮಂಗಳೂರು : ಟೆಲಿಗ್ರಾಂ ಮತ್ತು ವಾಟ್ಸಾಪ್ ಆ್ಯಪ್‌ಗಳ ಮೂಲಕ ಆನ್‌ಲೈನ್ ಟ್ರೇಡಿಂಗ್ ಹಾಗೂ ಗೇಮಿಂಗ್ ನೆಪದಲ್ಲಿ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಯುವಕನೊಬ್ಬನಿಗೆ ಬರೊಬ್ಬರಿ 5,31,000 ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ಯುವಕ ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಅಪರಿಚಿತ ವಂಚಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ದೂರಿನ ವಿವರಗಳ ಪ್ರಕಾರ, ಸಂತ್ರಸ್ತ ಯುವಕ 2025 ರಲ್ಲಿ ತನ್ನ ಮನೆಯಲ್ಲಿ ಮೊಬೈಲ್‌ನಲ್ಲಿ ಟೆಲಿಗ್ರಾಂ ಖಾತೆಯನ್ನು ವೀಕ್ಷಿಸುತ್ತಿದ್ದಾಗ, ಆನ್‌ಲೈನ್ ಗೇಮಿಂಗ್ ಮತ್ತು ಟ್ರೇಡಿಂಗ್‌ಗೆ ಪ್ರಸಿದ್ಧ ಎನ್ನಲಾದ ‘ಫೇರ್ ಪ್ಲೇ’ (Fairplay) ಎಂಬ ವೆಬ್‌ಸೈಟ್‌ಗೆ ಸೇರುವಂತೆ ಲಿಂಕ್ ಸಿಕ್ಕಿದೆ. ವೆಬ್‌ಸೈಟ್ ಜಾಯಿನ್ ಆದ ಬೆನ್ನಲ್ಲೇ, ಆರೋಪಿಗಳು 8815614269 ನೋಂದಣಿ ಸಂಖ್ಯೆಯ ವಾಟ್ಸಾಪ್ ಖಾತೆಯ ಮೂಲಕ ಯುವಕನನ್ನು ಸಂಪರ್ಕಿಸಿದ್ದಾರೆ.ವೆಬ್‌ಸೈಟ್‌ನಲ್ಲಿ ಟ್ರೇಡಿಂಗ್ ಮತ್ತು ಗೇಮಿಂಗ್ ಮಾಡುವುದರಿಂದ ಅತಿ ಕಡಿಮೆ ಅವಧಿಯಲ್ಲಿ ಹಣವನ್ನು ದುಪ್ಪಟ್ಟು ಮಾಡಿಕೊಡುವುದಾಗಿ ವಂಚಕರು ಯುವಕನಿಗೆ ನಂಬಿಸಿದ್ದಾರೆ. ಆರೋಪಿಗಳ ಮಾತುಗಳನ್ನು ನಿಜವೆಂದು ನಂಬಿದ ಯುವಕ, ದಿನಾಂಕ 29/01/2026 ರಿಂದ ಜೂನ್ 01, 2026 ರವರೆಗಿನ ಅವಧಿಯಲ್ಲಿ ಹಂತ ಹಂತವಾಗಿ ಹಣ ಹೂಡಿಕೆ ಮಾಡಲು ಆರಂಭಿಸಿದ್ದಾನೆ.ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆ ಹಾಗೂ ಯುಪಿಐ ಐಡಿಗಳಿಗೆ ಸಂತ್ರಸ್ತ ಯುವಕನು ಗೂಗಲ್ ಪೇ (Google Pay) ಮತ್ತು ಪೇಟಿಎಂ (Paytm) ಆ್ಯಪ್‌ಗಳ ಮೂಲಕ ಒಟ್ಟು 5,31,000/- ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾನೆ. ಆದರೆ, ಹಣ ಹೂಡಿಕೆ ಮಾಡಿದ ನಂತರ ಯಾವುದೇ ಲಾಭಾಂಶ ಸಿಗದೆ, ಅತ್ತ ಅಸಲು ಹಣವೂ ವಾಪಸ್ ಬಾರದೆ ಇದ್ದಾಗ ತಾನು ಮೋಸ ಹೋಗಿರುವುದು ಯುವಕನಿಗೆ ಅರಿವಾಗಿದೆ. ತನ್ನನ್ನು ಪುಸಲಾಯಿಸಿ ಹಣ ದೋಚಿದ ಅಪರಿಚಿತ ಸೈಬರ್ ವಂಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಹಣ ವಾಪಸ್ ಕೊಡಿಸಬೇಕೆಂದು ಯುವಕ ಪೊಲೀಸರಿಗೆ ಮನವಿ ಮಾಡಿದ್ದಾನೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed