ಕೋಮು ಗಲಭೆಗೆ ಹೆಸರುವಾಸಿಯಾಗಿದ್ದ ಮಂಗಳೂರು ಕಳೆದ 2-3 ವರ್ಷಗಳಿಂದ ಮರಳಿ ತನ್ನ ಅಸ್ತಿತ್ವಕ್ಕೆ ಬಂದಿದ್ದು, ಶಾಂತಿ ಸೌಹಾರ್ದಯ ಕಲೆ ತುಂಬಿ ಬಂದಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿಯ ಇಬ್ಬರು ದಕ್ಷ ಅಧಿಕಾರಿಗಳು.
ಮಂಗಳೂರು ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಹಾಗೂ ಎಸ್ಪಿ ಡಾ.ಕೆ.ಅರುಣ್ ರವರ ಖಡಕ್ ಮತ್ತು ನಿಷ್ಠಾವಂತ ಕಾರ್ಯವೈಖರಿಯಿಂದ ನಗರ ಮತ್ತು ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ, ನಗರದಲ್ಲಿ ಗಾಂಜಾ ಮಾರಟ, ಸೇವನೆ ಸೇರಿದಂತೆ ಪುಡಿ ರೌಡಿಗಳ ಹೆಡೆಮುರಿ ಕಟ್ಟಿದ್ದಾರೆ, ಪ್ರಭಾವಿ ರೌಡಿಗಳನ್ನು ಗಡಿಪಾರು ಮಾಡಿ ಮಂಗಳೂರಿನಲ್ಲಿ ಶಾಂತಿ ನೆಲೆಸಲು ಈ ದಕ್ಷ ಅಧಿಕಾರಿಗಳ ಕಠಿಣ ಪರಿಶ್ರಮ, ಶ್ರದ್ದೆಯೇ ಕಾರಣವಾಗಿದೆ.
ಇದೀಗ ತಮ್ಮ ಕಟ್ಟುನಿಟ್ಟಿನ ನಿಲುವಿನಿಂದಾಗಿ ಇಸ್ಪೀಟ್, ಒಸಿ, ಗಾಂಜಾ, ಮರಳುಗಾರಿಕೆ ಮತ್ತು ವಿವಿಧ ಅಕ್ರಮಗಳಿಗೆ ಸಿಂಹಸ್ವಪ್ನವಾಗಿದ್ದ ಇವರನ್ನು ಎಲ್ಲಾ ವರ್ಗದ ದಂಧೆಕೊರರು ಒಟ್ಟಾಗಿ ವರ್ಗಾವಣೆಗೆ ಬೆಂಗಳೂರಿನಲ್ಲಿ ಮಾಸ್ಟರ್ ಪ್ಲಾನ್ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟಾಗಿ ಇವರಗಳು ಗೃಹ ಸಚಿವರನ್ನು ಮತ್ತು ಮುಖ್ಯ ಮಂತ್ರಿಯನ್ನು ಭೇಟಿಯಾಗಲು ಕಾದು ಕುಳಿತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಬಂದಿದೆ. ಒಟ್ಟಾರೆಯಾಗಿ ಈ ಒಂದು ವರ್ಗದ ಜನರು ತಮ್ಮ ಅಕ್ರಮ ಚಟುವಟಿಕೆ ನಡೆಸಲು ಮಂಗಳೂರಿನ ಶಾಂತಿ ಹದಗೆಟ್ಟರು ಪರವಾಗಿಲ್ಲ ಎಂಬಂತಿದೆ.
