,

ಮಂಗಳೂರು RTO ಇಲಾಖೆಯಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ..!! ಕೇವಲ ಗುಮಾಸ್ತ ಕೈಯಲ್ಲಿ ಕಂತೆ ಕಂತೆ ನೋಟು

ಮಂಗಳೂರು RTO ಇಲಾಖೆಯಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲೋಕಾಯುಕ್ತ ಅಧಿಕಾರಿಗಳು ಇಲ್ಲಿಗೆ ತಲೆಹಾಕದೇ ಇರುವುದೇ ಇಲ್ಲಿನ ಮುಖ್ಯ ಸಮಸ್ಯೆ. RTO ಕಛೇರಿಯ ಮೊದಲನೇ ಮಹಡಿಯಲ್ಲಿ ಕಲೆಕ್ಷನ್ ಗೆಂದು ಗುಮಾಸ್ತ ಇದ್ದಾನೆ. ಇವನ ಸುತ್ತ ಮುತ್ತ, ಜೇಬಿನಲ್ಲಿ ಹಣದ ರಾಶಿ ತುಂಬಿ ತುಳುಕುತ್ತಿವೆ. ತಲಾ ಮಹಡಿಯಲ್ಲಿ ಮುಖ್ಯ ಅಧಿಕಾರಿ ಬಳಿ ದಿನದ ಕಲೆಕ್ಷನ್ ಬಗ್ಗೆ ಬರೆಯಲು ಡೈರಿಯೇ ಇದೆ. ದಿನವಿಡೀ ಈ ಗುಮಾಸ್ತನಿಗೆ ಹಣದುಬ್ಬರ ತುಂಬಿ 500, 200,100 ಹೀಗೆ ಬೇರ್ಪಡಿಸುವ ಕೆಲಸಕಾರ್ಯಗಳಲ್ಲಿ ನಿರತರಾಗಿದ್ದಾನೆ.ಪೋಲಿಸರು ಗೊಡ್ಸ್ ವಾಹನಕ್ಕೆ…

ಮಂಗಳೂರು RTO ಇಲಾಖೆಯಲ್ಲಿ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲೋಕಾಯುಕ್ತ ಅಧಿಕಾರಿಗಳು ಇಲ್ಲಿಗೆ ತಲೆಹಾಕದೇ ಇರುವುದೇ ಇಲ್ಲಿನ ಮುಖ್ಯ ಸಮಸ್ಯೆ.

RTO ಕಛೇರಿಯ ಮೊದಲನೇ ಮಹಡಿಯಲ್ಲಿ ಕಲೆಕ್ಷನ್ ಗೆಂದು ಗುಮಾಸ್ತ ಇದ್ದಾನೆ. ಇವನ ಸುತ್ತ ಮುತ್ತ, ಜೇಬಿನಲ್ಲಿ ಹಣದ ರಾಶಿ ತುಂಬಿ ತುಳುಕುತ್ತಿವೆ. ತಲಾ ಮಹಡಿಯಲ್ಲಿ ಮುಖ್ಯ ಅಧಿಕಾರಿ ಬಳಿ ದಿನದ ಕಲೆಕ್ಷನ್ ಬಗ್ಗೆ ಬರೆಯಲು ಡೈರಿಯೇ ಇದೆ. ದಿನವಿಡೀ ಈ ಗುಮಾಸ್ತನಿಗೆ ಹಣದುಬ್ಬರ ತುಂಬಿ 500, 200,100 ಹೀಗೆ ಬೇರ್ಪಡಿಸುವ ಕೆಲಸಕಾರ್ಯಗಳಲ್ಲಿ ನಿರತರಾಗಿದ್ದಾನೆ.
ಪೋಲಿಸರು ಗೊಡ್ಸ್ ವಾಹನಕ್ಕೆ ದಂಡ ಕಟ್ಟಲು ಕಛೇರಿಗೆ ಕಳಿಸಿದಾಗ 100,200 ಇದ್ದ ದಂಡವನ್ನು ಬೆದರಿಸಿ ಒಂದು ಸಾವಿರದಿಂದ ಎರಡು‌ ಸಾವಿರ ತನಕ ವಸೂಲಿ ಮಾಡುತ್ತಾರೆ. ಹೀಗೆ ಸರಕಾರ ಬೊಕ್ಕಸಕ್ಕೆ ನಕಲಿ ಲೆಕ್ಕಾಚಾರ ನೀಡುತ್ತಾರೆ. ಹೀಗೆ ನಡೆದ ಕಲೆಕ್ಷನ್ ಗಳನ್ನು ವಾರದ ಕೊನೆಯಲ್ಲಿ ಎಲ್ಲಾ ಆಧಿಕಾರಿಗಳಿಗೆ ಹಂಚುತ್ತಾನೆ.

ಇಲಾಖೆಯಲ್ಲಿ ಬ್ರೋಕರ್ ಗಳ ಕಾರುಬಾರೆ‌ ಜಾಸ್ತಿ, ದಲ್ಲಾಳಿಗಳು ಇಲ್ಲದೇ ಇಲ್ಲಿ ಯಾವುದೇ ಕೆಲಸ ನಡೆಯೊದಿಲ್ಲ. ಅಧಿಕಾರಿಗಳ ಮತ್ತು ದಲ್ಲಾಲಿಗಳ ನಡುವೆ ಹಣದ ರೂಪದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ.

ತಪಾಸಣೆ ಮಾಡದೇ ಸಾವಿರಾರು ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ (FC) ದುಡ್ಡು ಕೊಟ್ಟರೆ ಕ್ಷಣಮಾತ್ರದಲ್ಲಿ ನೀಡುತ್ತಾರೆ ಇದಕ್ಕೆಲ್ಲ ಬ್ರೋಕರ್ ಗಳು ಬೇಕೆ ಬೇಕು. ದಲ್ಲಾಳಿಗಳು ಮತ್ತು RTO ಅಧಿಕಾರಿಗಳು RTO ನಿಯಮಗಳನ್ನು ಗಾಳಿಗೆ ತೂರಿ ಲಂಚ ನೀಡಿದರೆ ಯಾವುದೇ ಕಾರ್ಯ ಮುಂದುವರಿಯುತ್ತದೆ.

ಈ ವ್ಯವಸ್ಥೆಯಿಂದ ಸಾಮಾನ್ಯ ಜನರ ಕೆಲಸಗಳು ಮೂಲೆಗುಂಪುಯಾಗಿವೆ. ಕಂತೆ ಕಂತೆ ಹಣ ನೀಡುವವರ ಪೈಲ್ ಗಳು ಅತೀ ವೇಗವಾಗಿ ಮುಂದುವರಿದು ಆ ಕೆಲಸಗಳು ತಕ್ಷಣ ಮಾತ್ರವಲ್ಲಿ ನಡೆಯುತ್ತದೆ. ಇದರಿಂದಾಗಿ ಸಾಮಾನ್ಯ ಜನರು ಕಛೇರಿಗೆ ಸುತ್ತಾಡುವುದೆ ಆಗಿದೆ. ಸಾರಿಗೆ ಸಚಿವರು ಇತ್ತ ಗಮನಹರಿಸಬೇಕು. ಮತ್ತು ಲೋಕಯುಕ್ತ ಅಧಿಕಾರಿಗಳು ತಿಂಗಳಿಗೊಮ್ಮೆ ಆದರೂ ದಾಳಿ ನಡೆಸಬೇಕು. ಸರಕಾರ ಇಲ್ಲಿನ ವ್ಯವಸ್ಥೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಆಗ್ರಹ

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed