,

ಮಂಗಳೂರು ಆರ್‌ಟಿಒದಲ್ಲಿ 12 ವರ್ಷಗಳಿಂದ ಅದೇ ಸೀಟಿನಲ್ಲಿ ಗುಮಾಸ್ತ? ಎರಡು ಬಡ್ತಿ ಆದರೂ ವರ್ಗಾವಣೆ ಆಗದ ಆರೋಪ!

ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಮಾಸ್ತ ಸೋಮರಾಜ್ ಅವರ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಲಭ್ಯವಾದ ಮಾಹಿತಿಯ ಪ್ರಕಾರ, ಸೋಮರಾಜ್ ಅವರು ಕಳೆದ 12 ವರ್ಷಗಳಿಂದ ಅದೇ ಹುದ್ದೆಯಲ್ಲಿ ಹಾಗೂ ಅದೇ ಸೀಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಅವಧಿಯಲ್ಲಿ ಅವರಿಗೆ ಎರಡು ಬಾರಿ ಬಡ್ತಿ (ಪ್ರಮೋಶನ್) ದೊರೆತಿದ್ದರೂ, ವರ್ಗಾವಣೆಗೊಂಡಿಲ್ಲ ಎನ್ನಲಾಗಿದೆ. ಇನ್ನೂ, ಬಡ್ತಿಯ ನಂತರ ಉಡುಪಿಯಲ್ಲಿ ಕ್ಲರ್ಕ್ ಹುದ್ದೆ ಲಭಿಸಿದ್ದರೂ, ಅವರು ಅದನ್ನು ಸ್ವೀಕರಿಸದೆ ಮಂಗಳೂರು ಆರ್‌ಟಿಒದಲ್ಲೇ ಮುಂದುವರಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಲ್ಲದೆ,…

ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಮಾಸ್ತ ಸೋಮರಾಜ್ ಅವರ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ.

ಲಭ್ಯವಾದ ಮಾಹಿತಿಯ ಪ್ರಕಾರ, ಸೋಮರಾಜ್ ಅವರು ಕಳೆದ 12 ವರ್ಷಗಳಿಂದ ಅದೇ ಹುದ್ದೆಯಲ್ಲಿ ಹಾಗೂ ಅದೇ ಸೀಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಅವಧಿಯಲ್ಲಿ ಅವರಿಗೆ ಎರಡು ಬಾರಿ ಬಡ್ತಿ (ಪ್ರಮೋಶನ್) ದೊರೆತಿದ್ದರೂ, ವರ್ಗಾವಣೆಗೊಂಡಿಲ್ಲ ಎನ್ನಲಾಗಿದೆ.

ಇನ್ನೂ, ಬಡ್ತಿಯ ನಂತರ ಉಡುಪಿಯಲ್ಲಿ ಕ್ಲರ್ಕ್ ಹುದ್ದೆ ಲಭಿಸಿದ್ದರೂ, ಅವರು ಅದನ್ನು ಸ್ವೀಕರಿಸದೆ ಮಂಗಳೂರು ಆರ್‌ಟಿಒದಲ್ಲೇ ಮುಂದುವರಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದಲ್ಲದೆ, ವರ್ಗಾವಣೆ ತಪ್ಪಿಸಿಕೊಳ್ಳಲು ಎರಡು ಬಾರಿ ತಲಾ ₹10 ಲಕ್ಷ ನೀಡಲಾಗಿದೆ ಎಂಬ ಆರೋಪವೂ ವರದಿಯಾಗಿದೆ.
ಮತ್ತೊಂದು ಆರೋಪದ ಪ್ರಕಾರ, “ತಮಗೆ ವರ್ಗಾವಣೆ ಮಾಡಿದರೆ ಸ್ವಯಂ ನಿವೃತ್ತಿ (VRS) ಪಡೆದುಕೊಳ್ಳುತ್ತೇನೆ” ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

ಈ ಎಲ್ಲಾ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದ್ದು, ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed