ಕರ್ನಾಟಕ ಸರ್ಕಾರ ಜಂಕ್ ಫುಡ್ ಅನ್ನು ಶಾಲೆಗಳ ಸುತ್ತಮುತ್ತ, ಶಾಲಾ ಕ್ಯಾಂಪಸ್ಗಳಲ್ಲಿ ಹಾಗೂ ಆಸ್ಪತ್ರೆಗಳ ಕ್ಯಾಂಟೀನ್ಗಳಲ್ಲಿ ಜಂಕ್ ಫುಡ್ ಮಾರಾಟವನ್ನು ನಿಷೇಧಿಸಲು ಆರೋಗ್ಯ ಸಚಿವ ಯು.ಟಿ. ಖಾದರ್ ನೀಡಿರುವ ಸೊಚನೆ ಮತ್ತು ಕ್ರಮ ಗಮನಾರ್ಹ.
ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸುವುದು ಹಾಗೂ ಜೀವನಶೈಲಿ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟುವುದಾಗಿದೆ. ಆರೋಗ್ಯ ಸಚಿವರಾದ ತಕ್ಷಣವೇ ಯು.ಟಿ ಖಾದರ್ ಹಲವಾರು ಪ್ರಮುಖ ಬದಲಾವಣೆ ತಂದಿರುವುದು ಬಡ ಕುಟುಂಬಗಳಿಗೆ ಬಹಳ ಸಂತಸ ತಂದಿದೆ.
ಗುಟ್ಕಾ ಸೇವನೆ ಆರೋಗ್ಯಕ್ಕೆ ಗಂಭೀರ ಹಾನಿಯನ್ನು ಉಂಟುಮಾಡುತ್ತದೆ. ಇದೇ ಮಾದರಿಯಲ್ಲಿ ಈ ಗುಟ್ಕಾ, ಪಾನ್ ಮಸಾಲಾ ಹಾಗೂ ಇತರ ತಂಬಾಕು ಉತ್ಪನ್ನಗಳು ಕರ್ನಾಟಕದಲ್ಲಿ ಸಂಪೂರ್ಣ ನಿಷೇಧಿಸಿದರೆ ಮತ್ತಷ್ಟು ಉತ್ತಮ.
ಆದ್ದರಿಂದ ಕರ್ನಾಟಕ ಸರ್ಕಾರ ಮತ್ತು ಆರೋಗ್ಯ ಸಚಿವರು ಇವುಗಳ ಮಾರಾಟ ಹಾಗೂ ಬಳಕೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಂಪೂರ್ಣ ನಿಷೇಧ ಜಾರಿಗೊಳಿಸಬೇಕು. ಜನರ ಆರೋಗ್ಯದ ರಕ್ಷಣೆಗೆ ಇದು ಅತ್ಯಗತ್ಯ
