, ,

ಉಳ್ಳಾಲ ಪೌರಾಯುಕ್ತ ಸಂತೋಷ್ ವರ್ಗಾವಣೆಗೆ ಸಾರ್ವಜನಿಕರ ತೀವ್ರ ಆಕ್ರೋಶ- ಭ್ರಷ್ಟಾಚಾರಿ ತುಳಸಿದಾಸ್ ನನ್ನು ವರ್ಗಾಯಿಸಿ ಸ್ಥಳೀಯರ ಪಟ್ಟು

ಉಳ್ಳಾಲ ನಗರಸಭೆಯ ಪೌರಾಯುಕ್ತರಾಗಿದ್ದ ಸಂತೋಷ್ ಅವರನ್ನು ಉಡುಪಿ ನಗರಸಭೆಯ ಪೌರಾಯುಕ್ತರಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕಳೆದ ಸುಮಾರು ಆರು–ಏಳು ತಿಂಗಳಿನಿಂದ ಉಳ್ಳಾಲ ನಗರಸಭೆಯಲ್ಲಿ ಪೌರಾಯುಕ್ತರಾಗಿ ಸೇವೆ ಸಲ್ಲಿಸಿದ್ದ ಸಂತೋಷ್ ಅವರ ಕಾರ್ಯವೈಖರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಪೂರ್ಣಾವಧಿಯ ಪೌರಾಯುಕ್ತರ ನೇಮಕಕ್ಕೆ ಸ್ಥಳೀಯ ನಾಗರಿಕರು ಆಗ್ರಹ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಶಾಸಕ ಯು.ಟಿ. ಖಾದರ್ ಅವರ ಶಿಫಾರಸಿನ ಮೇರೆಗೆ ಸಂತೋಷ್ ಅವರನ್ನು ಉಳ್ಳಾಲಕ್ಕೆ ನೇಮಕ ಮಾಡಲಾಗಿತ್ತು ಉಳ್ಳಾಲ ನರಸಭೆಯಲ್ಲಿ ಜೆ.ಇ…

ಉಳ್ಳಾಲ ನಗರಸಭೆಯ ಪೌರಾಯುಕ್ತರಾಗಿದ್ದ ಸಂತೋಷ್ ಅವರನ್ನು ಉಡುಪಿ ನಗರಸಭೆಯ ಪೌರಾಯುಕ್ತರಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಕಳೆದ ಸುಮಾರು ಆರು–ಏಳು ತಿಂಗಳಿನಿಂದ ಉಳ್ಳಾಲ ನಗರಸಭೆಯಲ್ಲಿ ಪೌರಾಯುಕ್ತರಾಗಿ ಸೇವೆ ಸಲ್ಲಿಸಿದ್ದ ಸಂತೋಷ್ ಅವರ ಕಾರ್ಯವೈಖರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಪೂರ್ಣಾವಧಿಯ ಪೌರಾಯುಕ್ತರ ನೇಮಕಕ್ಕೆ ಸ್ಥಳೀಯ ನಾಗರಿಕರು ಆಗ್ರಹ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಶಾಸಕ ಯು.ಟಿ. ಖಾದರ್ ಅವರ ಶಿಫಾರಸಿನ ಮೇರೆಗೆ ಸಂತೋಷ್ ಅವರನ್ನು ಉಳ್ಳಾಲಕ್ಕೆ ನೇಮಕ ಮಾಡಲಾಗಿತ್ತು

ಉಳ್ಳಾಲ ನರಸಭೆಯಲ್ಲಿ ಜೆ.ಇ ತುಳಸಿದಾಸ್ ಸೇರಿದಂತೆ ಅನೇಕ ಅಧಿಕಾರಿಗಳು ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದ್ದರು ಅವರನ್ನು ವರ್ಗಾವಣೆ ಮಾಡದೆ ನಿಷ್ಠಾವಂತ ಅಧಿಕಾರ ಸಂತೋಷ್ ರವರ ವರ್ಗಾವಣೆ ಎಷ್ಟು ಸರಿ..??

ಉಳ್ಳಾಲ ನಗರಸಭೆಯಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಜಾಗ ಇಲ್ಲವೇ?? ರಾಜ್ಯ ಸರ್ಕಾರಕ್ಕೆ ಮತ್ತು ಸ್ಥಳೀಯ ಸಚಿವರಿಗೆ, ಜನ ಪ್ರತಿನಿಧಿಗಳಿಗೆ ಭ್ರಷ್ಟಾಚಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಸಾಮರ್ಥ್ಯ ಯಾಕಿಲ್ಲ??

ನಗರಸಭೆಯ ಆಡಳಿತದಲ್ಲಿ ಕಡತಗಳನ್ನು ಸಮಗ್ರವಾಗಿ ಪರಿಶೀಲಿಸಿ ನಂತರವೇ ಅನುಮೋದನೆ ನೀಡುತ್ತಿದ್ದ ಅವರು, ಟ್ಯಾಂಕರ್ ನೀರು ಸರಬರಾಜು ಟೆಂಡರ್ ಪ್ರಕ್ರಿಯೆಯಲ್ಲಿ ಕೆಲ ಮಾನದಂಡಗಳನ್ನು ಅಳವಡಿಸಿದ ಪರಿಣಾಮ ನಗರಸಭೆಗೆ ಅಂದಾಜು ₹50 ಲಕ್ಷದಷ್ಟು ಉಳಿತಾಯವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕಟ್ಟಡ ಹಾಗೂ ವಾಣಿಜ್ಯ ಪರವಾನಗಿ ಪ್ರಕ್ರಿಯೆಯಲ್ಲಿ ಕಂಡುಬಂದ ಕೆಲವು ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದ ಅವರು, ಕಾಮಗಾರಿಗಳ ಬಿಲ್‌ಗಳನ್ನು ಸ್ಥಳ ಪರಿಶೀಲನೆಯ ಬಳಿಕವೇ ಅನುಮೋದಿಸುವ ಪದ್ಧತಿಯನ್ನು ಅನುಸರಿಸುತ್ತಿದ್ದರು ಎನ್ನಲಾಗಿದೆ.

ಅಲ್ಲದೆ, ಪೌರಾಯುಕ್ತರ ಕಚೇರಿಯಲ್ಲಿ ಅನಗತ್ಯ ಭೇಟಿ ಹಾಗೂ ಹರಟೆಗೆ ಅವಕಾಶ ನೀಡದೆ, ಸಾರ್ವಜನಿಕರ ಅಗತ್ಯ ಕೆಲಸಗಳಿಗೆ ಆದ್ಯತೆ ನೀಡಿ ಮುಕ್ತವಾಗಿ ಭೇಟಿ ನೀಡುವ ವ್ಯವಸ್ಥೆ ಕಲ್ಪಿಸಿದ್ದರು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೌರಾಯುಕ್ತ ಸಂತೋಷ್ ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ ಸ್ಥಳೀಯ ಸಾರ್ವಜನಿಕರು ಅವರ ಸೇವೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದು, ಉಳ್ಳಾಲ ನಗರಸಭೆಗೆ ಮತ್ತೆ ಶೀಘ್ರವೇ ಸಂತೊಷ್ ರವರ ವರ್ಗಾವಣೆ ಆದೇಶ ಹಿಂಪಡೆದು ಉಳ್ಳಾಲಕ್ಕೆ ಪೂರ್ಣಾವಧಿಯ ಪೌರಾಯುಕ್ತರನ್ನು ನೇಮಕ ಮಾಡುವಂತೆ ಸಾರ್ವಜನಿಕರು ಸರ್ಕಾರವನ್ನು ಆಗ್ರಹಿಸಿದ್ದಾರೆ

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed