ವರ್ಕ್ ಫ್ರಮ್ ಹೋಂ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ನಡೆದಿದೆ. ಎರಡು ಲಕ್ಷದಿಂದ 20 ಲಕ್ಷದವರೆಗೆ ಹಣ ಪಡೆದು ದಂಪತಿಗಳು ವಂಚನೆ ಎಸಗಿದ್ದಾರೆ. ಖತರ್ನಾಕ್ ದಂಪತಿಗಳಾದ ಕಿರಣ್ ಮತ್ತು ಆರತಿಯನ್ನು ಇದೀಗ ಪೊಲೀಸ್ರು ಅರೆಸ್ಟ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ರಿಲ್ಸ್ ಮೂಲಕ ಜನರನ್ನು ನಂಬಿಸಿದ್ದಾರೆ.
ಮೇಣದಬತ್ತಿ, ಅಗರ ಬತ್ತಿ, ಡ್ರೈ ಫ್ರೂಟ್ಸ್ ಪ್ಯಾಕಿಂಗ್ ಕೆಲಸದ ಆಮಿಷ ಒಡ್ದುತ್ತಿದ್ದರು. 1 ಲಕ್ಷ ಡೆಪಾಸಿಟ್ ಮಾಡಿದರೆ, 23,000 ವರೆಗೆ ಆದಾಯ ಕೊಡುತ್ತೇವೆ ಸಾವಿರಾರು ಜನರಿಗೆ ಕೆಲಸವೂ ಇಲ್ಲ ಇದೀಗ ಹಣವು ಇಲ್ಲದೆ ಕಂಗಾಲಾಗಿದ್ದಾರೆ. ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ ಹಾಗೂ ಕೋಲಾರ ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಈ ದಂಪತಿಗಳು ವಂಚನೆ ಎಸಗಿದ್ದರೆ. ಜನರ ದೂರಿನ ಬಳಿಕ ಇದೀಗ fir ದಾಖಲಿಸಿ ದಂಪತಿಗಳನ್ನು ಅರೆಸ್ಟ್ ಮಾಡಲಾಗಿದೆ.















